6 ಪತ್ನಿಯರ ಜೊತೆ ಒಟ್ಟಿಗೆ ಮಲಗಲು 81ಲಕ್ಷ ರೂಪಾಯಿಯ ಬೃಹತ್ ಹಾಸಿಗೆ ನಿರ್ಮಿಸಿದ ಭೂಪ – ಇದರಲ್ಲೇನಿದೆ ವಿಶೇಷ ಅಂತೀರಾ? ಈ ಸುದ್ದಿ ನೋಡಿ..

6 ಪತ್ನಿಯರ ಜೊತೆ ಒಟ್ಟಿಗೆ ಮಲಗಲು 81ಲಕ್ಷ ರೂಪಾಯಿಯ ಬೃಹತ್ ಹಾಸಿಗೆ ನಿರ್ಮಿಸಿದ ಭೂಪ – ಇದರಲ್ಲೇನಿದೆ ವಿಶೇಷ ಅಂತೀರಾ? ಈ ಸುದ್ದಿ ನೋಡಿ..

ನ್ಯೂಸ್ ಆ್ಯರೋ : ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಭೂಪ ಭರ್ತಿ 81ಲಕ್ಷ ರೂ. ಖರ್ಚು ಮಾಡಿ ತನ್ನ 6 ಹೆಂಡತಿಯರ ಜೊತೆ ಒಟ್ಟಿಗೆ ಮಲಗಲು ಬೃಹತ್ ಹಾಸಿಗೆಯೊಂದನ್ನು ತಯಾರಿಸಿದ್ದಾನೆ‌.

ಜಿಲ್ ನ ಸಾವೋ ಪಾಲೋದ ನಿವಾಸಿಯಾದ ಆರ್ಥರ್ ವೋರ್ಸೋ ಅವರಿಗೆ ಒಟ್ಟು 9ಜನ ಪತ್ನಿಯರಿದ್ದರಂತೆ. ಆದರೆ ವರ್ಷಗಳ ಹಿಂದೆ ಈತ ಮೂವರು ಹೆಂಡತಿಯರಿಗೆ ವಿಚ್ಚೇದನ ನೀಡಿದ್ದು, ಈಗ 6 ಜನ ಪತ್ನಿಯರೊಂದಿಗೆ ಸಂಸಾರ ನಡೆಸುತ್ತಿದ್ದಾನೆ‌. ಆದರೆ ಹಲವು ದಿನಗಳಿಂದ ಒಂದು ಚಿಂತೆ ಕಾಡುತ್ತಿದ್ದು, ಇದೀಗ ಅದಕ್ಕೆ ಪರಿಹಾರ ಸಿಕ್ಕಿರುವ ಬಗ್ಗೆ 6 ಹೆಂಡಿರ ಮುದ್ದಿನ ಗಂಡ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಹಾಕಿದ್ದಾನೆ.

6 ಹೆಂಡತಿಯರ ಜೊತೆಗೆ ಒಟ್ಟಿಗೆ ಮಲಗಲು ಲಕ್ಷಾಂತರ ರೂ. ಖರ್ಚು ಮಾಡಿ ಬೃಹತ್ ಹಾಸಿಗೆ ತಯಾರಿಸಿರುವ ಈತ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ‘ನಾನು ನನ್ನ ಹೆಂಡತಿಯರೊಂದಿಗೆ ಅನೇಕ ಬಾರಿ ಸೋಫಾ, ಡಬಲ್ ಬೆಡ್ ಅನ್ನು ಹಂಚಿಕೊಳ್ಳಬೇಕಾಗಿತ್ತು. ಕೆಲವೊಮ್ಮೆ ನೆಲದ ಮೇಲೂ ಮಲಗಿದ್ದೇನೆ. ಆದರೆ ಈ ಸಮಸ್ಯೆ ಬಗೆ ಹರಿಸುವುದಕ್ಕಾಗಿಯೇ ಈ ದೊಡ್ಡ ಹಾಸಿಗೆ ನಿರ್ಮಿಸಿದ್ದೇನೆ.

ಜೊತೆಗೆ ಆರ್ಥರ್ 20 ಅಡಿ ಹಾಸಿಗೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಇದಕ್ಕೆ ಶೀರ್ಷಿಕೆಯಾಗಿ ‘ಸಂಬಂಧದಲ್ಲಿ ಕೆಲವು ಕೆಟ್ಟ ಅನುಭವವಾದ ನಂತರ, ನಾನು ಅನೇಕರಿಗೆ ಅಸಾಧ್ಯವಾದುದನ್ನು ವಾಸ್ತವಕ್ಕೆ ತರಲು ಪ್ರಯತ್ನಿಸಿದೆ. ವಿಶ್ವದ ಅತಿದೊಡ್ಡ ಹಾಸಿಗೆಯನ್ನು ಸಿದ್ಧಪಡಿಸಿಕೊಂಡೆ’ ಎಂದು ಬರೆದಿದ್ದಾರೆ.

ಈ ಬೃಹತ್ ಹಾಸಿಗೆ ಯಾಕೆ ತುಂಬಾ ಸ್ಪೆಷಲ್?

ಆರು ಪತ್ನಿಯರನ್ನು ಹೊಂದಿರುವ ಆರ್ಥರ್ 20 ಅಡಿ ಹಾಸಿಗೆ ಸಿದ್ಧಪಡಿಸಲು 81.54 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದರಿಂದ ಅವರು ತನ್ನ ಆರು‌ ಜನ ಪತ್ನಿಯರೊಂದಿಗೆ ಒಟ್ಟಿಗೆ ಮಲಗಬಹುದಾಗಿದೆ‌. ಈ ದೈತ್ಯ ಹಾಸಿಗೆಯನ್ನು ನಿರ್ಮಿಸಲು 15 ತಿಂಗಳುಗಳನ್ನು ತೆಗೆದುಕೊಳ್ಳಲಾಗಿದ್ದು, ಒಟ್ಟು 12 ಜನರ ತಂಡ ಮತ್ತು 950 ಸ್ಕ್ರೂಗಳನ್ನು ಬಳಕೆ ಮಾಡಲಾಗಿದೆ. ಜೊತೆಗೆ ಇದು ವಿಶ್ವದ ಅತ್ಯಂತ ದೊಡ್ಡ ಹಾಸಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *