ಗರುಡ ಪುರಾಣದ ಪ್ರಕಾರ ಸಾಯೋವರೆಗೂ ಬಡವರಾಗಿಯೇ ಉಳಿಯುವ ಆ ಐದು ಮಂದಿ ಯಾರು ಗೊತ್ತಾ…!!? – ಇಲ್ಲಿದೆ ನೋಡಿ ಸಂಪೂರ್ಣ ವಿವರ…

ಗರುಡ ಪುರಾಣದ ಪ್ರಕಾರ ಸಾಯೋವರೆಗೂ ಬಡವರಾಗಿಯೇ ಉಳಿಯುವ ಆ ಐದು ಮಂದಿ ಯಾರು ಗೊತ್ತಾ…!!? – ಇಲ್ಲಿದೆ ನೋಡಿ ಸಂಪೂರ್ಣ ವಿವರ…

ನ್ಯೂಸ್ ಆ್ಯರೋ : ಗರುಡ ಪುರಾಣದಲ್ಲಿ ಈ ಐದು ಜನ ಸಾಯುವ ತನಕವೂ ಬಡತನದ ಬೇಗೆಯಲ್ಲಿ ನರಳುತ್ತಾರೆ ಎಂದು ತಿಳಿಸಲಾಗಿದೆ. ಈ ಐವರ ಬಗ್ಗೆ ಮಹಾವಿಷ್ಣುವೇ ಗರುಡನಿಗೆ ತಿಳಿಹೇಳಿದ್ದರಂತೆ.

ಸಾವಿನ ಹಿಂದಿನ ಹಾಗೂ ನಂತರದ ಪರಿಸ್ಥಿತಿಯನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಕ್ಕಾಗಿಯೇ ಗರುಡ ಪುರಾಣವನ್ನು ಸತ್ತವರಿಗಾಗಿ ಪಠಿಸಲಾಗುತ್ತದೆ.

ಒಂದು ಬಾರಿ ಗರುಡ ದೇವನು, ವಿಷ್ಣುವಿನ ಬಳಿ ಜೀವರಾಶಿಗಳ ಸಾವು, ಯಮಲೋಕದ ಕಡೆಗಿನ ಪಯಣ, ನರಕ ಹಾಗೂ ಮೋಕ್ಷದ ಬಗ್ಗೆ ಹಲವಾರು ನಿಗೂಢ ಹಾಗೂ ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಆ ಪ್ರಶ್ನೆಗಳಿಗೆ ಸವಿವರವಾದ ಉತ್ತರವನ್ನು ನೀಡಿದನು. ಗರುಡ ಕೇಳಿದ ಪ್ರಶ್ನೆಗಳಿಗೆ ನೀಡಲಾದ ವಿಷ್ಣುವಿನ ಸೂಕ್ತ ಉತ್ತರಗಳ ಸರಣಿಯನ್ನೇ ಗರುಡ ಪುರಾಣ ಎಂದು ಕರೆಯಲಾಗುತ್ತದೆ.

ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ ಈ ಐದು ಮಂದಿ ಸಾಯೋ ತನಕವೂ ಬಡವರಾಗಿಯೇ ಉಳಿಯುತ್ತಾರೆ. ಈ ಐದು ಜನರ ಬಗ್ಗೆ ಸ್ವತಃ ಮಹಾವಿಷ್ಣವೇ ಗರುಡ ದೇವರಿಗೆ ತಿಳಿಸಿದರಂತೆ. ಹಾಗಾದರೆ ಆ ಐದು ಮಂದಿ ಯಾರು ಅನ್ನೋದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಗರುಡ ಪುರಾಣದ ಪ್ರಕಾರ ಯಾವ ವ್ಯಕ್ತಿಯು ಸೂರ್ಯೋದಯದ ಬಳಿಕವೂ ಮಲಗಿರುತ್ತಾನೋ ಅಂತವನು ಯಾವತ್ತೂ ಶ್ರೀಮಂತನಾಗಲು ಸಾಧ್ಯವಿಲ್ಲ. ಪ್ರತೀ ಕಾರ್ಯದಲ್ಲೂ ಸೋಮಾರಿತನ ತೋರಿಸುವವನು, ಯಾವುದೇ ಸಾಧನೆಯನ್ನೂ ಮಾಡಲಾರ.ಸೂರ್ಯ ಉದಯಿಸುವ ಮೊದಲು ಹಾಸಿಗೆ ಬಿಟ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.

ತಾನೇನೂ ಸಾಧನೆಯನ್ನು ಮಾಡದೆ ತನ್ನ ಪೂರ್ವಿಕರು ಅಂದರೆ ತಂದೆ,ತಾತ ಮಾಡಿದ ಆಸ್ತಿಯನ್ನೇ ಖರ್ಚು ಮಾಡುತ್ತಾ ದಿನ ದೂಡುವವ ಕೂಡ ಬಡವನಾಗಿಯೇ ಉಳಿಯುತ್ತಾನೆ. ಇಂತಹ ವ್ಯಕ್ತಿಗಳ ಬಗ್ಗೆ ಲಕ್ಷ್ಮಿಯು ಸದಾ ಅಸಮಾಧಾನವನ್ನು ಹೊಂದಿರುತ್ತಾಳೆ. ತಾನು ಉತ್ತಮನಾಗಿದ್ದುಕೊಂಡು ಇತರರ ಕಷ್ಟಗಳಿಗೆ ಸ್ಪಂದಿಸುವವರಿಗೆ ಲಕ್ಷ್ಮಿಯು ಒಲಿಯುತ್ತಾಳಂತೆ.

ಇತರರ ಬಗ್ಗೆ ಯಾವಾಗಲೂ ಚಾಡಿ ಹೇಳುತ್ತಾ, ಖಂಡಿಸುವವರು ಯಾವಾಗಲೂ ಬಡವರಾಗಿರುತ್ತಾರೆ. ಇತರರ ಕಾರ್ಯಗಳನ್ನು ಕೆಡಿಸಲು ಪ್ರಯತ್ನಿಸುವವನು ಮತ್ತು ಕಾರಣವಿಲ್ಲದೆಯೂ ಇತರರ ಮೇಲೆ ಹರಿಹಾಯ್ವಾವನೂ ಕೂಡ ಯಾವ ಕಾಲಕ್ಕೂ ಶ್ರೀಮಂತನಾಗಲಾರ.

ಕೊಳಕು ಬಟ್ಟೆಯನ್ನು ಧರಿಸುವವನೂ ಕೂಡ ಲಕ್ಷ್ಮಿಯಿಂದ ತಿರಸ್ಕಾರಕ್ಕೆ ಒಳಗಾಗುತ್ತಾನೆ. ಹಾಗಾಗಿ ನಾವು ಯಾವಾಗಲು ಶುಚಿಯಾದ ಬಟ್ಟೆಯನ್ನು ಧರಿಸಬೇಕೆಂದು ಗರುಡ ಪುರಾಣವು ಹೇಳುತ್ತದೆ. ಇಲ್ಲದಿದ್ದರೆ ಅಂತವರು ಸದಾ ದಾರಿದ್ರ್ಯವನ್ನು ಅನುಭವಿಸುತ್ತಾರಂತೆ.

ಗರುಡ ಪುರಾಣದ ಪ್ರಕಾರ ಕಠಿಣ ಪರಿಸ್ಥಿತಿಯನ್ನು ಎದುರಿಸಲಾರದೆ, ಹೆದರಿ ಓಡಿಹೋಗುವವನೂ ತನ್ನ ಜೀವನದಲ್ಲಿ ಎಂದೂ ಯಶಸ್ಸನ್ನು ಕಾಣಲಾರ. ಕಷ್ಟವನ್ನು ಎದುರಿಸಲು ಸಿದ್ದವಿಲ್ಲದವನ್ನು ಎಂದೆಂದಿಗೂ ಬಡವನಾಗಿಯೇ ಉಳಿಯುತ್ತಾನೆ ಎಂದು ಹೇಳಲಾಗಿದೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *