ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ ಪುಟಾಣಿ ಎಲೆಕ್ಟ್ರಿಕ್ ಕಾರು – ಹೇಗಿದೆ ಗೊತ್ತಾ ಈ ಬೊಂಬಾಟ್ ಕಾರಿನ ಫೀಚರ್ಸ್?

ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ ಪುಟಾಣಿ ಎಲೆಕ್ಟ್ರಿಕ್ ಕಾರು – ಹೇಗಿದೆ ಗೊತ್ತಾ ಈ ಬೊಂಬಾಟ್ ಕಾರಿನ ಫೀಚರ್ಸ್?

ನ್ಯೂಸ್‌ ಆ್ಯರೋ : ಕೆಲ ವರ್ಷಗಳ ಹಿಂದೆ ಭಾರತೀಯ ವಾಹನೋದ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದ ಕಡಿಮೆ ಬೆಲೆಯ ಟಾಟಾ ನ್ಯಾನೋ ಎಂಬ ಪುಟಾಣಿ ಕಾರಿನ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಇದೀಗ ಜನಪ್ರಿಯ ಕಾರು ತಯಾರಿಕಾ ಕಂಪೆನಿಯಾದ ಎಂಜಿ‌ ಮೋಟಾರ್ ಎಂಜಿ ಕಾಮೆಟ್ ಎಂಬ ಹೊಸ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶನಗೊಳಿಸಿದೆ. ಈ ಬಹುನಿರೀಕ್ಷಿತ 2-ಡೋರಿನ ಎಂಜಿ ಎಲೆಕ್ಟ್ರಿಕ್ ಕಾರು ವಾಹನ ಮಾರುಕಟ್ಟೆಗೆ ಲಗ್ಗೆ ಇಡುಲು ಸಜ್ಜಾಗಿದ್ದು, ಈ ಕಾರಿನ ಅತ್ಯಾಧುನಿಕತೆ ಹಾಗೂ ಫೀಚರ್ಸ್ ಗಳ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.

ಪ್ರದರ್ಶನಗೊಳ್ಳುತ್ತಿರುವ ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್ 10.25-ಇಂಚಿನ ಡಿಸ್ ಪ್ಲೇ ಲಭ್ಯವಿದ್ದು, ಟಚ್‌ಸ್ಕ್ರೀನ್ ಯುನಿಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಡ್ರೈವರ್‌ನ ಮುಂಭಾಗದಲ್ಲಿರುವ ಇನ್ನೂಂದು ಡಿಸ್ ಪ್ಲೇ ಕ್ಲಸ್ಟರ್ ಆಗಿದೆ. ಇನ್ನು ಈ ಸಣ್ಣ ಎಲೆಕ್ಟ್ರಿಕ್ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸೆರ್ ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಲಭ್ಯವಿದೆ ಎನ್ನಲಾಗಿದೆ.

ಜೊತೆಗೆ ಪವರ್-ಫೋಲ್ಡಿಂಗ್ ORVM ಗಳು, ಎಲ್‌ಇಡಿ ಹೆಡ್‌ಲೈಟ್‌ಗಳು, ಆಂಬಿಯೆಂಟ್ ಲೈಟಿಂಗ್, ಕನೆಕ್ಟ್ ಕಾರ್ ಟೆಕ್, Apple CarPlay ಮತ್ತು Android Auto ನಂತಹ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಕೂಡ ಹೊಂದಿದೆ. ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿರುವ ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಆಟೋಮ್ಯಾಟಿಕ್ ಅಡ್ಜೆಸ್ಟ್ಮೆಂಟ್ ಒಳಗೊಂಡು ಬರಲಿದೆ ಎಂದು ಅಂದಾಜಿಸಲಾಗಿದೆ.

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 17.3kWh ಬ್ಯಾಟರಿ ಪ್ಯಾಕ್ ಮತ್ತು 41.4 bhp ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನ ಹಿಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಲಭ್ಯವಿರಲಿದೆಯಂತೆ.

ಇನ್ನು ಈ ಕಾರಿನ ಚಾರ್ಜಿಂಗ್ ವಿಚಾರದ ಬಗ್ಗೆ ನೋಡುವುದಾದರೆ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 3.3kW AC ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 5 ಗಂಟೆಗಳಲ್ಲಿ 0 ದಿಂದ 80 ಪ್ರತಿಶತದವರೆಗೆ ಚಾರ್ಜ್ ಆಗುತ್ತದೆ. ಅದೇ ಚಾರ್ಜರ್ ಅನ್ನು ಬಳಸಿಕೊಂಡು ಪೂರ್ಣ ಸಾಮರ್ಥ್ಯಕ್ಕೆ ಚಾರ್ಜ್ ಮಾಡಲು ಹೆಚ್ಚುವರಿ 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಅಧಿಕೃತ ಬೆಲೆಯನ್ನು ಮುಂದಿನ ಬಹಿರಂಗ ಪಡಿಸಲಾಗುತ್ತದೆ.

ಈ ಕಾರು 2,974 mm ಉದ್ದ, 1,505 mm ಅಗಲ ಮತ್ತು 1,613 mm ಎತ್ತರವನ್ನು ಹೊಂದಿದೆ. ಇನ್ನು ಈ ಪುಟ್ಟ ಎಲೆಕ್ಟ್ರಿಕ್ ಕಾರು ಕೇವಲ 2,010 mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಈ ಕಾರಿನ ಬೆಲೆಯು ಸುಮಾರು ರೂ.10 ಲಕ್ಷ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನು ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಟಿಯಾಗೋ ಇವಿ ಮತ್ತು ಸಿಟ್ರನ್ eC3 ಕಾರುಗಳಿಗೆ ಪೈಪೋಟಿ ನೀಡುವ ಸಾಧ್ಯತೆ ಇದೆ. ಈ ಹೊಸ ಎಂಜಿ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರಿನ ಹೆಸರು MG Comet ಎಂಬುದಾಗಿದ್ದು, ಈ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ ಎಂದು ಕಾರು ತಯಾರಿಕಾ‌ ಕಂಪೆನಿ‌ ಹೇಳಿಕೊಂಡಿದೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *