ಏಪ್ರಿಲ್ 1ರಿಂದ ದುಬಾರಿಯಾಗಲಿದೆ‌ UPI ಪೇಮೆಂಟ್ -₹. 2000 ಮೇಲಿನ ಹಣ ವರ್ಗಾವಣೆಗೆ ತಗಲುವ ಶುಲ್ಕ ಎಷ್ಟು ಗೊತ್ತಾ.‌‌.!?

ಏಪ್ರಿಲ್ 1ರಿಂದ ದುಬಾರಿಯಾಗಲಿದೆ‌ UPI ಪೇಮೆಂಟ್ -₹. 2000 ಮೇಲಿನ ಹಣ ವರ್ಗಾವಣೆಗೆ ತಗಲುವ ಶುಲ್ಕ ಎಷ್ಟು ಗೊತ್ತಾ.‌‌.!?

ನ್ಯೂಸ್ ಆ್ಯರೋ‌ : ಇಂದು ಹಣವನ್ನು ಜೇಬಿನಲ್ಲಿ ತುಂಬಿಕೊಂಡು ಹೋಗುವವರ ಸಂಖ್ಯೆ ತೀರಾ ವಿರಳ. ಸ್ಮಾರ್ಟ್ ಫೋನ್ ಗಳ ಬಳಕೆಯಿಂದಾಗಿ ಜನ‌ ಎಲ್ಲಾ ತರಹದ ವಹಿವಾಟುಗಳಿಗೆ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ನೆಚ್ಚಿಕೊಂಡಿರುವುದರಿಂದ ಇಂದು UPI ಆಧಾರಿತ ಮೊಬೈಲ್ ಅಪ್ಲಿಕೇಶನ್ ಗಳು ವ್ಯಾಪಕವಾಗಿ ಚಲಾವಣೆಯಲ್ಲಿದೆ. ಅದರಲ್ಲೂ ವಿಶೇಷವಾಗಿ ಫೋನ್ ಪೇ, ಗೂಗಲ್-ಪೇ, ಪೇಟಿಯಂನಂತಹ ಆ್ಯಪ್ ಗಳು ಸರ್ವಾಂತರಿಯಾಗಿದೆ ಎಂದರೆ ತಪ್ಪಾಗದು.

ಇದೀಗ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) UPI ಬಳಕೆದಾರರಿಗೆ ಶಾಕ್ ನೀಡಿದ್ದು, ಏಪ್ರಿಲ್ ಒಂದರಿಂದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI)ನಲ್ಲಿ ವ್ಯಾಪಾರಿ ವಹಿವಾಟುಗಳಿಗೆ ಪ್ರಿಪೇಯ್ಡ್ ಪಾವತಿ ಉಪಕರಣಗಳ (ಪಿಪಿಐ) ಶುಲ್ಕವನ್ನು ವಿಧಿಸುವುದಾಗಿ ಹೇಳಿದೆ.

ಇದರನ್ವಯ ಏಪ್ರಿಲ್ ಒಂದರಿಂದ ಯುಪಿಐ ವ್ಯವಹಾರಗಳಿಗೆ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಶುಲ್ಕವನ್ನು ಅನ್ವಯಿಸುವುದಾಗಿ ತಿಳಿಸಿದೆ. ಇದರಿಂದಾಗಿ ಯುಪಿಐ ಯನ್ನು ನೆಚ್ಚಿಕೊಂಡಿರುವವರಿಗೆ ದೊಡ್ಡ ಆಘಾತವನ್ನೇ ನೀಡಿದೆ.

2000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ 1.1 ರಷ್ಟು ಹೆಚ್ಚುವರಿ ಶುಲ್ಕವನ್ನು ಏಪ್ರಿಲ್ ಒಂದರಿಂದಲೇ ವಿಧಿಸುವುದಾಗಿ NPCI ಸುತ್ತೋಲೆಯನ್ನು ಹೊರಡಿಸಿದೆ.

PPI ಮೂಲಕ ವಹಿವಾಟು ನಡೆಸುವ ವ್ಯಾಪರಿಗಳಿಗೆ ಹಣ ಪಾವತಿಸುವ ಗ್ರಾಹಕರೇ ಈ ಶುಲ್ಕವನ್ನು ಬರಿಸಬೇಕಾಗುತ್ತದೆ. ಇದು ಸಹಜವಾಗಿಯೇ ಸಾರ್ವಜನಿಕರ ಮೇಲೆ ಹೊರೆಯಾಗಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *