$ 2.65 ಬಿಲಿಯನ್ ಸಾಲ ತೀರಿಸಿದ ಅದಾನಿ‌ ಗ್ರೂಪ್ – ಮಾರ್ಚ್ 31 ರ ಒಳಗೆ ಸಂಪೂರ್ಣ ಸಾಲ ಮರುಪಾವತಿಗೆ ಪ್ಲ್ಯಾನ್..!!

$ 2.65 ಬಿಲಿಯನ್ ಸಾಲ ತೀರಿಸಿದ ಅದಾನಿ‌ ಗ್ರೂಪ್ – ಮಾರ್ಚ್ 31 ರ ಒಳಗೆ ಸಂಪೂರ್ಣ ಸಾಲ ಮರುಪಾವತಿಗೆ ಪ್ಲ್ಯಾನ್..!!

ನ್ಯೂಸ್ ಆ್ಯರೋ‌ : ಹಿಂಡನ್‌ಬರ್ಗ್‌ ವರದಿಯ ಬಳಿಕ ಉಂಟಾಗಿರುವ ಹಾನಿಯಿಂದ ಜರ್ಜರಿತವಾಗಿರುವ ಅದಾನಿ‌ ಗ್ರೂಪ್ ತನ್ನ ಷೇರುಗಳ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ಗಳಿಸುವ ಸಲುವಾಗಿ ಸುಮಾರು 2.15 ಬಿಲಿಯನ್‌ ಡಾಲರ್‌ ಸಾಲವನ್ನು ಮರುಪಾವತಿ ಮಾಡಿರುವುದಾಗಿ ಹೇಳಿಕೊಂಡಿದೆ.

ಮಾರ್ಚ್‌ 31ರ ಒಳಗಾಗಿ ಸಂಪೂರ್ಣ ಸಾಲ ಮಾರುಪಾವತಿ ಯೋಜನೆಯನ್ನು ಅದಾನಿ ಸಮೂಹವು ಹಾಕಿಕೊಂಡಿದ್ದು, ಇದರ ಭಾಗವಾಗಿ ಇಷ್ಟು ಮೊತ್ತದ ಸಾಲವನ್ನು ಮರುಪಾವತಿ ಮಾಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅದಾನಿ ಸಮೂಹವು, ಷೇರುಗಳನ್ನು ಅಡವಿಟ್ಟು ಪಡೆಯಲಾಗಿದ್ದ 2.15 ಬಿಲಿಯನ್‌ ಡಾಲರ್ ಸಾಲವನ್ನು ಮರುಪಾವತಿ ಮಾಡಿರುವುದಾಗಿ ಹೇಳಿದೆ. ಅಲ್ಲದೇ ಅಂಬುಜಾ ಸಿಮೆಂಟ್‌ ಸ್ವಾಧೀನಕ್ಕೆ ಪಡೆಯಲಾಗಿದ್ದ 500 ಮಿಲಿಯನ್ ಡಾಲರ್‌ ಸಾಲವನ್ನೂ ಪಾವತಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಷೇರು ಅಡವಿಟ್ಟು ‍ಪಡೆಯಲಾಗಿದ್ದ ಸುಮಾರು ₹ 7,374 ಕೋಟಿ ಸಾಲವನ್ನು ಪಾವತಿ ಮಾಡಿದ್ದಾಗಿ ಅದಾನಿ ಸಮೂಹ ಹೇಳಿಕೊಂಡಿತ್ತು. ಸದ್ಯ ಪಾವತಿ ಮಾಡಿರುವ ಸಾಲದ ಹಣದ ಮೂಲ ಯಾವುದು ಎಂದು ಅದಾನಿ ಸಮೂಹವು ಸ್ಪಷ್ಟಪಡಿಸಿಲ್ಲ. ಆದರೆ 2.65 ಬಿಲಿಯನ್‌ ಡಾಲರ್‌ ಸಾಲ ಮರುಪಾವತಿ ಪ್ರಕ್ರಿಯೆಯು ಆರು ತಿಂಗಳಿನಲ್ಲಿ ಪೂರ್ಣಗೊಂಡಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Related post

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…
ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ…

ನ್ಯೂಸ್ ಆ್ಯರೋ : ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ…

Leave a Reply

Your email address will not be published. Required fields are marked *