OYO ಮುಖ್ಯಸ್ಥನಿಗೆ ಮದುವೆಯಂತೆ – ಪ್ರಧಾನಿ ಮೋದಿಗೆ ಮದುವೆಯ ಕರೆಯೋಲೆ ನೀಡಿದ ರಿತೇಶ್ ಅಗರ್ ವಾಲ್ : ಫೋಟೋಸ್ ವೈರಲ್..!!

OYO ಮುಖ್ಯಸ್ಥನಿಗೆ ಮದುವೆಯಂತೆ – ಪ್ರಧಾನಿ ಮೋದಿಗೆ ಮದುವೆಯ ಕರೆಯೋಲೆ ನೀಡಿದ ರಿತೇಶ್ ಅಗರ್ ವಾಲ್ : ಫೋಟೋಸ್ ವೈರಲ್..!!

ನ್ಯೂಸ್ ಆ್ಯರೋ : ದೇಶ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಹೋಟೆಲ್ ಹಾಗೂ ಲಾಡ್ಜ್ ಉದ್ಯಮದಲ್ಲೊಂದು ಕ್ರಾಂತಿ ಸೃಷ್ಟಿಸಿದ್ದ ಓಯೋ ಕಂಪೆನಿಯ ಮುಖ್ಯಸ್ಥ ರಿತೇಶ್ ಅಗರ್ ವಾಲ್, ಸದ್ಯ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಈ ನಡುವೆ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿಯಾಗಿ ಮದುವೆಯ ಕರೆಯೋಲೆ ನೀಡಿದ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದೆ.

ಓಯೋ ಕಂಪೆನಿಯ ಮುಖ್ಯಸ್ಥ ರಿತೇಶ್ ಅಗರ್ ವಾಲ್ ತಮ್ಮ ಮದುವೆಯ ಕರೆಯೋಲೆಯನ್ನು ತಾಯಿ ಹಾಗೂ ಭಾವಿ ಪತ್ನಿಯೊಂದಿಗೆ ಸೇರಿ ದೇಶದ ಗಣ್ಯರಿಗೆ ಹಂಚುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಮಂತ್ರಣ ಪತ್ರಿಕೆ ನೀಡಿ, ಅವರ ಆಶಿರ್ವಾದ ಪಡೆದುಕೊಂಡಿದ್ದಾರೆ.

ಮೋದಿಯವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿರುವ ಫೋಟೋಗಳನ್ನು ರಿತೇಶ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಭಾವೀ ದಂಪತಿಗಳು ಪ್ರಧಾನಿಗಳ ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆದಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಪ್ರಧಾನಿಗಳಿಗೆ ರಿತೇಶ್ ಶಾಲು ಹೊದಿಸಿದ್ದರು.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ, ರಿತೇಶ್ ಅಗರ್ ವಾಲ್ ‘ಪ್ರಧಾನಿ ಮೋದಿಯವರ ಆಶಿರ್ವಾದದೊಂದಿಗೆ ನಾವು ವಿವಾಹವಾಗಲು ಸಿದ್ಧರಾಗಿದ್ದೇವೆ, ಪ್ರಧಾನಿಗಳು ನಮ್ಮನ್ನು ಸ್ವೀಕರಿಸಿದ ರೀತಿ ಬಣ್ಣಸಲು ಸಾಧ್ಯವಾಗದ್ದು’ ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *