ಬೆಳ್ತಂಗಡಿಯಲ್ಲಿ ಏಕಕಾಲದಲ್ಲಿ ಒಂಭತ್ತು ಗುಳಿಗ ದೈವಗಳ ನರ್ತನ ಸೇವೆ; ಬಹಳ ಅಪರೂಪವಾದ ಅದ್ಭುತವನ್ನು ಕಣ್ತುಂಬಿಕೊಂಡ ಭಕ್ತರು

Guliga
Spread the love

ನ್ಯೂಸ್ ಆ್ಯರೋ: ಕರಾವಳಿಯಲ್ಲಿ ದೈವಾರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಜನ ದೈವಾರಾಧನೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಹಾಗಾಗಿ ಇಂದಿಗೂ ಸುಮಾರು 500ಕ್ಕಿಂತಲೂ ಹೆಚ್ಚು ದೈವಗಳನ್ನು ಆರಾಧಿಸಲಾಗುತ್ತದೆ. ಇದೀಗ ಬೆಳ್ತಂಗಡಿ ತಾಲೂಕಿನ ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವಗುಳಿಗ ದೈವಗಳಿಗೆ ಏಕಕಾಲದಲ್ಲಿ ನಡೆದ ನರ್ತನ ಸೇವೆ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡಿದೆ. ಈ ಅಪರೂಪವಾದ ಸೇವೆ ಕರಾವಳಿಯಲ್ಲೇ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷ.

ಸಾಮಾನ್ಯವಾಗಿ, ಕರಾವಳಿ ಪ್ರದೇಶದಲ್ಲಿ ಒಂದೆಡೆಗೆ ಏಕಕಾಲದಲ್ಲಿ ಒಂದೆರಡು ಗುಳಿಗ ದೈವಗಳಿಗೆ ಮಾತ್ರ ನರ್ತನ ಸೇವೆ ನಡೆಯುತ್ತವೆಯಾದರೂ, ಬರ್ಕಜೆಯಲ್ಲೀಗ ಒಂಬತ್ತು ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗಿದ್ದು, ಇದು ಈ ಪ್ರದೇಶದ ವಿಶೇಷತೆ. ತುಳುನಾಡಿನಾದ್ಯಂತ ಆರಾಧಿಸಲ್ಪಡುವ ಗುಳಿಗ ದೈವಗಳು, ಕ್ಷೇತ್ರಪಾಲಕರಾಗಿ ನೆಲೆಸಿ, ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಿನ ನಂಬಿಕೆಗೆ ಭಕ್ತರದ್ದು. ಈ 9 ದೈವಗಳ ರೋಷಾವೇಷ ಭಕ್ತರಿಗೆ ರೋಮಾಂಚಕ ಅನುಭವವನ್ನು ನೀಡಿತ್ತು.

ಐದು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ ಎಂಬುವುದು ಆಡಳಿತ ಮುಖ್ಯಸ್ಥರ ಮಾತು.

ಕರಾವಳಿ ಭಾಗದಲ್ಲಿ ಗುಳಿಗ ದೈವದ ಆರಾಧನೆಗೆ ವಿಶೇಷ ಆಕರ್ಷಣೆ ಇದೆ. ಗುಳಿಗ ದೈವದ ರೋಷಾವೇಷ ನೋಡೋದೇ ಒಂದು ರೋಮಾಂಚಕ ಅನುಭವ. ಸಾಮಾನ್ಯವಾಗಿ ಒಂದು ಗುಳಿಗ ದೈವಕ್ಕೆ ಆರಾಧನೆ ನಡೆಯುವುದು ಮಾಮೂಲಿ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟೆಡೆ ಗ್ರಾಮದ ಬರ್ಕಜೆಯಲ್ಲಿರುವ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ ನವ ಗುಳಿಗ ದೈವ ನೆಲೆಯೂರಿದೆ. ಒಂದೇ ದಿನ ಒಂದೇ ಬಾರಿ ಈ ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆಯುತ್ತದೆ. ಈ ಬಾರಿಯ ವಾರ್ಷಿಕ ಉತ್ಸವವೂ ಅತ್ಯಂತ ಯಶಸ್ವಿಯಾಗಿ ನಡೆಯಿತು. ಏಕಕಾಲದಲ್ಲಿ ಒಂಬತ್ತು ಮಂದಿ ದೈವ ನರ್ತಕರು ನವ ಗುಳಿಗನ ನೇಮೋತ್ಸವ ನಡೆಸಿಕೊಟ್ಟರು. ಈ ಅದ್ಭುತವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

Leave a Comment

Leave a Reply

Your email address will not be published. Required fields are marked *