ಕೃಷಿ ಇಲಾಖೆಯಿಂದ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ; ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು
ನ್ಯೂಸ್ ಆ್ಯರೋ: ಕೃಷಿ ಇಲಾಖೆಯಿಂದ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇದು ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಆಹ್ವಾನ ಮಾಡಲಾದ ಅರ್ಜಿ ಆಗಿದೆ. ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಳು ಅರ್ಜಿ ಹಾಕಬಹುದು.
ಅರ್ಹ ಅಭ್ಯರ್ಥಿಗಳು ಯಾವುದಾದ್ರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಡಿಗ್ರಿ ಮಾಡಿರಬೇಕು. ಕಂಪ್ಯೂಟರ್ ಜ್ಞಾನ ಇರಲೇಬೇಕು. ಈ ಕ್ವಾಲಿಟೀಸ್ ಇರೋ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 10 ಕೊನೆಯ ದಿನ ಆಗಿದೆ.
ಇನ್ನು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಆತ್ಮ ವಿಭಾಗದ ಡಿ.ಪಿ.ಡಿ ಆಗಿರೋ ಪ್ರಿಯಾಂಕ (ದೂ. ಸಂ 88147899207) ಅವರನ್ನು ಸಂಪರ್ಕಿಸಬಹುದು.
ಈ ಬಗ್ಗೆ ಖುದ್ದು ಜಂಟಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರೇ ಮಾಹಿತಿ ನೀಡಿದ್ದಾರೆ.
Leave a Comment