ಯಾರ ಪಾಲಾಗಲಿದೆ ದೆಹಲಿ ಗದ್ದುಗೆ?; ಸೋಲಿನ ಭವಿಷ್ಯ ನುಡಿದ ಸಮೀಕ್ಷೆಗಳು

Delhi Exit Poll
Spread the love

ನ್ಯೂಸ್ ಆ್ಯರೋ: ರಾಷ್ಟ್ರ ರಾಜಧಾನಿ ದೆಹಲಿಯ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಅಂತಿಮವಾಗಿ ಶೇ 58 ರಷ್ಟು ಮತದಾನವಾಗಿದೆ. ಈ ನಡುವೆ ಅನೇಕ ಚುನಾವಣೋತ್ತರ ಸಮೀಕ್ಷೆಗಳು ಫಲಿತಾಂಶವನ್ನು ಬಹಿರಂಗಪಡಿಸಿವೆ. 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ 36 ಮ್ಯಾಜಿಕ್ ನಂಬರ್ ಆಗಿದೆ. ಈ ಬಾರಿಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಜೈ ಎಂದಿದ್ದು, ಆಪ್‌ನ ಹ್ಯಾಟ್ರಿಕ್ ಕನಸು ಭಗ್ನವಾಗಲಿದೆ ಎಂದು ಭವಿಷ್ಯ ನುಡಿದಿವೆ.

ಮ್ಯಾಟ್ರೀಜ್ ಸಂಸ್ಥೆ (MATRIZE Exit Poll 2025) ನಡೆಸಿರುವ ಸಮೀಕ್ಷೆಯ ಪ್ರಕಾರ ಬಿಜೆಪಿ 35 ರಿಂದ 40 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಕೂಡ 32 ರಿಂದ 37 ಸೀಟು ಗೆಲ್ಲುತ್ತೆ ಅಂತ ಮ್ಯಾಟ್ರೀಜ್‌ ಸಮೀಕ್ಷೆ ಹೇಳಿದೆ. ಇನ್ನೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ಪಿ ಮಾರ್ಕ್ (P-Marq) ಸಂಸ್ಥೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷ ಬರೋಬ್ಬರಿ 39-49 ಸ್ಥಾನಗಳನ್ನು ಪಡೆಯಲಿದು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ನಡೆಸಲಿದೆ ಎಂದಿದೆ. ಕಳೆದ ಎರಡು ಬಾರಿ ಅಧಿಕಾರ ನಡೆಸಿರುವ ಆಮ್ ಆದ್ಮಿ ಪಕ್ಷ 21-31 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 00-01 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಬಹಿರಂಗ ಪಡಿಸಿದೆ.

ಪೀಪಲ್ಸ್ ಇನ್‌ಸೈಟ್ (People Insight) ಸಮೀಕ್ಷೆಯಲ್ಲಿ ಬಿಜೆಪಿ 40ರಿಂದ 44 ಸ್ಥಾನಗಳನ್ನು ಪಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ಆಡಳಿತಾರೂಢ ಎಎಪಿ 25ರಿಂದ 29 ಸ್ಥಾನಗಳನ್ನು ಪಡೆಯುವುದಾಗಿ ಹೇಳಿದೆ. ಇನ್ನು ಕಾಂಗ್ರೆಸ್ ಕೇವಲ 1 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಲಿದೆ ಅಂತ ಭವಿಷ್ಯ ನುಡಿದಿದೆ.

ಕೆಕೆ (KK) ಸಂಸ್ಥೆ ನಡೆಸಿರುವ ಮತದಾನೋತ್ತರ ಸಮೀಕ್ಷೆ ಕೂಡ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ಎಂದು ಹೇಳಿದೆ. ಕೆಕೆ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಪ್ 44 ಹಾಗೂ ಬಿಜೆಪಿ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದಿದ್ದಾರೆ. ಆದ್ರೆ, ಕಾಂಗ್ರೆಸ್ ಖಾತೆ ತೆರೆಯುವುದಿಲ್ಲ ಎಂದು ಹೇಳಿದೆ.

ಇನ್ನು 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತ್ತು. ಉಳಿದ 3 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಆಮ್ ಆದ್ಮಿ ಪಕ್ಷ (ಎಎಪಿ) 2020ರಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿತು. ಆಮ್ ಆದ್ಮಿ ಪಕ್ಷವು 62 ಸ್ಥಾನಗಳನ್ನು ಗೆದ್ದಿತು. ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತು.

Leave a Comment

Leave a Reply

Your email address will not be published. Required fields are marked *