ಹೊರಬಿತ್ತು 2023ರ ಗ್ರ್ಯಾಮಿ ಅವಾರ್ಡ್ಸ್ – ಮೂರನೇ ಬಾರಿ ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತೀಯ ರಿಕ್ಕಿ ಕೇಜ್

ಹೊರಬಿತ್ತು 2023ರ ಗ್ರ್ಯಾಮಿ ಅವಾರ್ಡ್ಸ್ – ಮೂರನೇ ಬಾರಿ ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತೀಯ ರಿಕ್ಕಿ ಕೇಜ್

ನ್ಯೂಸ್ ಆ್ಯರೋ : 2023ನೇ ಸಾಲಿನ 65ನೇ ಗ್ರ್ಯಾಮಿ ಪ್ರಶಸ್ತಿಯನ್ನು ಫಲಿತಾಂಶ ಹೊರಬಿದ್ದಿದೆ‌. ಪ್ರತಿ ವರ್ಷ ಸಂಗೀತ ಕ್ಷೇತ್ರದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯಲ್ಲಿ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್‌, ಮೂರನೇ ಬಾರಿ ಈ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಪಂಜಾಬ್ ಮೂಲದ ಸಂಗೀತ ಸಾಧಕ ರಿಕ್ಕಿ ಕೇಜ್ ಅವರಿ ಲಭಿಸಿರುವ ಈ ಪ್ರಶಸ್ತಿಯಿಂದ ಭಾರತೀಯರು ಹೆಮ್ಮೆ ಪಡುವಂತಾಗಿದೆ‌.

ರಿಕ್ಕಿ ಕೇಜ್ ಅವರ ಸಂಗೀತ ಕ್ಷೇತ್ರದಲ್ಲಿನ ಅನನ್ಯ ಸಾಧನೆಗಾಗಿ ಅನೇಕ ಪ್ರಶಸ್ತಿ ದೊರೆತಿದೆ. 9 ಹಾಡುಗಳ ಮ್ಯೂಸಿಕ್‌ ಆಲ್ಬಂ, ‘ಡಿವೈನ್‌ ಟೈಡ್ಸ್‌’ ಎಂಬ ಬೆಸ್ಟ್‌ ಇಮ್ಮರ್ಸಿವ್‌ ಆಡಿಯೋ ಆಲ್ಬಂ ವಿಭಾಗದಲ್ಲಿ ರಿಕ್ಕಿ ಕೇಜ್‌ ತಮ್ಮ ಸಹ ಸಂಗೀತಗಾರ ಸ್ಟೀವರ್ಟ್‌ ಕೋಪ್‌ಲ್ಯಾಂಡ್‌ ಜೊತೆಗೆ ಈ ಬಾರಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಕೂಡಾ ಇದೇ ಜೋಡಿ ಪ್ರಶಸ್ತಿ ಹಂಚಿಕೊಂಡಿತ್ತು.

2015ರಲ್ಲಿ ಮೊದಲ ಬಾರಿಗೆ ಬೆಸ್ಟ್‌ ನ್ಯೂ ಏಜ್‌ ವಿಭಾಗದಲ್ಲಿ ‘ವಿಂಡ್ಸ್‌ ಆಫ್‌ ಸಂಸಾರ್‌’ ಆಲ್ಬಂಗೆ ರಿಕ್ಕಿ ಕೇಜ್‌ ಮೊದಲ ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿ ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಿಕ್ಕಿ‌ಕೇಜ್, ‘ಡಿವೈನ್‌ ಟೈಡ್ಸ್‌ ಆಲ್ಬಂಗೆ ಪ್ರಶಸ್ತಿ ದೊರೆತಿರುವುದು ಸಂತೋಷ. ಮುಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಇದು ಸ್ಫೂರ್ತಿಯಾಗಿದೆ ಎಂದು’ ಹೇಳಿದ್ದಾರೆ.

ರಿಕ್ಕಿ ಕೇಜ್‌ 30 ದೇಶಗಳಲ್ಲಿ ಸುಮಾರು 100 ಮ್ಯೂಸಿಕ್ ಅವಾರ್ಡ್‌ಗಳನ್ನು ಪಡೆದಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ‘ಆಕ್ಸಿಡೆಂಟ್’, ‘ವೆಂಕಟ ಇನ್ ಸಂಕಟ’ ಹಾಗೂ ಬಿ ರಾಮಮೂರ್ತಿ ನಿರ್ದೇಶನದಲ್ಲಿ ರಮೇಶ್‌ ಅರವಿಂದ್‌ ನಟಿಸಿರುವ ‘ಕ್ರೇಜಿ ಕುಟುಂಬ’ ಚಿತ್ರದ ಹಾಡುಗಳಿಗೆ ರಿಕ್ಕಿ ಕೇಜ್‌ ಸಂಗೀತ ನೀಡುವ ಮೂಲಕ ಕನ್ನಡಿಗರಿಗೂ ಇವರು ಹತ್ತಿರವಾಗಿದ್ದರು.

ಗ್ರ್ಯಾಮಿ ಅವಾರ್ಡ್ಸ್ ಹಿನ್ನೆಲೆ :

ಅಮೇರಿಕಾದ ರೆಕಾರ್ಡಿಂಗ್ ಅಕಾಡೆಮಿ‌ ಕೊಡ ಮಾಡುವ ಗ್ರ್ಯಾಮಿ ಅವಾರ್ಡ್ಸ್ 1959ರ ಮೇ 4 ರಂದು ಆರಂಭವಾಯ್ತು. ಪ್ರತಿ ವರ್ಷ ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯುತ್ತದೆ. ಬೆಸ್ಟ್‌ ಆಲ್ಟರ್ನೇಟಿವ್‌ ಮ್ಯೂಸಿಕ್‌ ಪರ್ಫಾಮೆನ್ಸ್‌, ಬೆಸ್ಟ್‌ ಅಮೆರಿಕನ್‌ ಪರ್ಫಾಮೆನ್ಸ್‌, ಬೆಸ್ಟ್‌ ಸ್ಕೋರ್‌ ಸೌಂಡ್‌ ಟ್ರ್ಯಾಕ್‌ ಫಾರ್‌ ವಿಡಿಯೋ ಗೇಮ್ಸ್‌ , ಬೆಸ್ಟ್‌ ಸ್ಪೋಕನ್‌ ವರ್ಲ್ಡ್‌ ಪೊಯಟ್ರಿ ಆಲ್ಬಂ, ಸಾಂಗ್‌ ರೈಟರ್‌ ಆಫ್‌ ದಿ ಇಯರ್‌ ಸೇರಿ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *