ಅಂಗನವಾಡಿ ಮಗುವಿನ ಬೇಡಿಕೆಗೆ ಸ್ಪಂದಿಸಿದ ಸರ್ಕಾರ; ಇನ್ಮುಂದೆ ಸಿಗಲಿದೆ ʼಚಿಕನ್ ಬಿರಿಯಾನಿʼ

upma to biryani after toddler's cute request
Spread the love

ನ್ಯೂಸ್ ಆ್ಯರೋ: ಪುಟ್ಟ ಮಕ್ಕಳು ಏನು ಮಾಡಿದರು ಚೆಂದವೇ. ಅವುಗಳ ತೊದಲು ನುಡಿಯಿಂದ ಆಡುವ ಒಂದೊಂದು ಮಾತುಗಳು ಅದರಲ್ಲೂ ಅಂಗನವಾಡಿ, ಎಲ್​ಕೆಜಿ ಯುಕೆಜಿ ಮಕ್ಕಳು ಆಡುವ ಮಾತುಗಳು ವೈರಲ್ ಆಗುತ್ತವೆ.

ಆದ್ರೆ ಇಲ್ಲೊಬ್ಬ ಕೇರಳದ ಅಂಗನವಾಡಿಯ ಒಂದು ಪುಟ್ಟ ಮಗುವಿನ ಮುಗ್ಧ ಬೇಡಿಕೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟಕವಾಗಿ ವೈರಲ್ ಆಗಿದೆ. “ನನಗೆ ಉಪ್ಪಿಟ್ಟು ಬೇಡ, ಚಿಕನ್ ಫ್ರೈ ಅಥವಾ ಚಿಕನ್ ಬಿರಿಯಾನಿ ಬೇಕು” ಎಂದು ತನ್ನ ತಾಯಿಯೊಂದಿಗೆ ತೊದಲು ನುಡಿಯಲ್ಲಿ ಹೇಳಿದ ಶಂಕು ಎಂಬ ಬಾಲಕನ ವಿಡಿಯೋವನ್ನು ಅವರ ತಾಯಿ ಇನ್ ಸ್ಟಾಗ್ರಾಮ್‌‌ಲ್ಲಿ ಹಂಚಿಕೊಂಡಿದ್ದಾರೆ.

ನಂತರ ಇದು ಸಾರ್ವಜನಿಕರ ಗಮನ ಸೆಳೆಯಿತು. ಮಗುವಿನ ಈ ಮನವಿಯು ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ವೀಣಾ ಜಾರ್ಜ್ ಅವರೆದುರಿಗೂ ತಲುಪಿದೆ.

ಸಚಿವೆ ವೀಣಾ ಜಾರ್ಜ್ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿ, “ಶಂಕು ಮಾಡಿಕೊಂಡ ಮನವಿಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸಲಿದೆ” ಎಂದು ತಿಳಿಸಿದ್ದಾರೆ. ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರ ಪಟ್ಟಿಯನ್ನು ಪುನರ್ಪರಿಶೀಲನೆ ಮಾಡುವುದರೊಂದಿಗೆ, ಮಗುವಿನ ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. “ಇದೀಗ ಅಂಗನವಾಡಿಗಳಲ್ಲಿ ಮೊಟ್ಟೆ, ಹಾಲು ಸೇರಿದಂತೆ ಪೌಷ್ಟಿಕ ಆಹಾರವನ್ನು ನೀಡುತ್ತಿದ್ದೇವೆ. ಆದರೆ ಮಕ್ಕಳ ಆಸೆಗಳನ್ನು ಗಮನಿಸುವುದು ನಮ್ಮ ಕರ್ತವ್ಯ” ಎಂದು ಸಚಿವೆ ಪ್ರತಿಕ್ರಿಯಿಸಿದ್ದಾರೆ.

ಇನ್ನು ವಿಡಿಯೋ ಕುರಿತು ಹೇಳುವುದಾದರೇ, ವಿಡಿಯೋದಲ್ಲಿ, ಶಂಕು ತಲೆಗೆ ಕ್ಯಾಪ್ ಹಾಕಿಕೊಂಡು ತನ್ನ ತಾಯಿಯನ್ನು ನೋಡಿ, “ಪೊರಚಿ ಕೊಚಿ (ಚಿಕನ್ ಫ್ರೈ) ಮತ್ತು ಬಿರ್ನಾನಿ (ಬಿರಿಯಾನಿ) ಬೇಕು” ಎಂದು ಮುದ್ದಾಗಿ ವಿನಂತಿಸುವುದು ಕಂಡುಬರುತ್ತದೆ. ಮಗುವಿನ ಈ ನಿಷ್ಕಪಟ ಬೇಡಿಕೆಗೆ ನೆಟ್ಟಿಗರೂ ಬೆಂಬಲ ನೀಡಿದ್ದಾರೆ. ಕೆಲವು ಬಳಕೆದಾರರು “ಜೈಲಿನ ಅಪರಾಧಿಗಳಿಗೆ ಕಡಿಮೆ ಆಹಾರ ನೀಡಿ, ಮಕ್ಕಳ ಆರೋಗ್ಯಕ್ಕೆ ಪ್ರಾಶಸ್ತ್ಯ ಕೊಡಿ” ಎಂದು ಸೂಚಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *