ಮಹಾಕುಂಭಮೇಳದಲ್ಲಿ ಶಾಹಿಸ್ನಾನ; ಗಂಗೆಯಲ್ಲಿ ಮಿಂದೆದ್ದ 3.86 ಕೋಟಿ ಭಕ್ತಾದಿಗಳು
ನ್ಯೂಸ್ ಆ್ಯರೋ: ಪ್ರಯಾಗ್ರಾಜ್ನ ಶತಮಾನದ ಮಹಾಕುಂಭಮೇಳದಲ್ಲಿ ವಸಂತ ಪಂಚಮಿ ಪುಣ್ಯಸ್ನಾನ ನಿರ್ವಿಘ್ನವಾಗಿ ಸಂಪನ್ನಗೊಂಡಿದೆ. ಇಡೀ ರಾತ್ರಿ ಖುದ್ದು ಸಿಎಂ ಯೋಗಿ ಆದಿತ್ಯನಾಥ್ ಪರಿಸ್ಥಿತಿಯನ್ನು ಮಾನಿಟರ್ ಮಾಡಿದ್ದಾರೆ. ನಿನ್ನೆ ಎರಡೂ ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಕಾಲ್ತುಳಿತ ದುರಂತದ ತನಿಖೆ ಮುಂದುವರಿದಿದ್ದು ಎಸ್ಪಿ ಸಂಸದೆ ಜಯಾಬಚ್ಚನ್ ವಿವಾದಾತ್ಮಕ ಹೇಳಿಕೆಯಿಂದ ಟೀಕೆಗೆ ಗುರಿಯಾಗಿದ್ದಾರೆ.
ಗಂಗಾ-ಯುಮುನಾ-ಸರಸ್ವತಿ ನದಿಗಳ ಪುಣ್ಯ ಸಂಗಮ. ಪುಣ್ಯಸ್ನಾನದಿಂದ ಜನ್ಮಜನ್ಮಾಂತರಗಳ ಪಾಪ-ಕರ್ಮಗಳು ಕಳೆಯುತ್ತವೆ ಎಂಬ ನಂಬಿಕೆ.. ಪಂಡಿತರಿಂದ ಪಾಮರವರೆಗೆ ಪ್ರಯಾಗ್ರಾಜ್ಗೆ ಭೇಟಿ ನೀಡಿ ಪುಣ್ಯಸ್ನಾನ ಮಾಡ್ತಿದ್ದು ಗತವೈಭವ ಮೇಳೈಸಿದೆ.
ಕಳೆದ ಜನವರಿ 13ರಿಂದ ಆರಂಭವಾಗಿರುವ ಪ್ರಯಾಗ್ರಾಜ್ ಮಹಾಕುಂಭಮೇಳ 22ನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 26ರವರೆಗೆ ಇನ್ನೂ 23 ದಿನಗಳು ಮಹಾಜಾತ್ರೆ ನಡೆಯಲಿದೆ. ಮಹಾಸಂಕ್ರಾಂತಿ, ಮೌನಿ ಅಮಾವಾಸ್ಯೆ ಹಾಗೂ ನಿನ್ನೆ ವಸಂತ ಪಂಚಮಿ ಸೇರಿ ಒಟ್ಟು ಮೂರು ಶಾಹಿಸ್ನಾನಗಳು ನೆರವೇರಿವೆ. ನಿನ್ನೆ ವಸಂತಪಂಚಮಿಯಂದು 2.57 ಕೋಟಿ ಮಂದಿ ಅಮೃತಸ್ನಾನ ಮಾಡಿದ್ದಾರೆ.
ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ದುರಂತದ ಬೆನ್ನಲ್ಲೇ ಹೈಅಲರ್ಟ್ ಆಗಿದ್ದ ಯುಪಿ ಯಾವುದೇ ಅವಘಡ ನಡೆಯದಂತೆ ಕಟ್ಟೆಚ್ಚರ ವಹಿಸಿತ್ತು. ಇನ್ನು ಭಾನುವಾರ ಬೆಳಗ್ಗೆಯಿಂದ ಸೋಮವಾರ ಸಂಜೆವರೆಗೆ 3.86 ಕೋಟಿ ಯಾತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ.
ಇನ್ನು ಕಾಲ್ತುಳಿತ ದುರಂತದ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಹೋಟೆಲ್ ಬುಕಿಂಗ್ ಶೇ.40-60 ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಶೇ. 40-60ರಷ್ಟು ಯಾತ್ರಿಕರು ಪ್ರಯಾಗ್ರಾಜ್ ಭೇಟಿ ರದ್ದುಗೊಳಿಸಿದ್ದಾರೆ.. ಫೆಬ್ರವರಿ 5 ರಿಂದ 26 ರವರೆಗೆ ಸರಾಸರಿ ಶೇ. 30-35ರಷ್ಟಿದೆ ಎಂದು ಪ್ರಯಾಗ್ರಾಜ್ ಹೋಟೆಲ್ ಅಸೋಸಿಯೇಷನ್ ತಿಳಿಸಿದೆ.
ಯಾವುದೇ ಅನಾಹುತ ನಡೆಯದಂತೆ ಬಸಂತ ಪಂಚಮಿ ಶಾಹಿಸ್ನಾನವನ್ನು ನಿರ್ವಹಿಸಲಾಗಿದೆ. ಇನ್ನು ಫೆಬ್ರವರಿ 12ರಂದು ಮಾಘಿಸ್ನಾನ ಹಾಗೂ ಫೆಬ್ರವರಿ 26ರಂದು ಶಾಹಿಸ್ನಾನಗಳು ನಡೆಯಲಿದೆ. ಅದರಲ್ಲೂ ಫೆಬ್ರವರಿ 26ರಂದು ಮಹಾಶಿವರಾತ್ರಿ ಹಬ್ಬ ಇದ್ದು ಅಂದು ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಸಜ್ಜಾಗಿದ್ದಾರೆ
Leave a Comment