ಚಳಿಗಾಲದಲ್ಲಿ ಸಾಸಿವೆ ಎಣ್ಣೆ ಬಳಸಿ : ಇದು ಚರ್ಮದ ಆರೈಕೆಗೆ ನೈಸರ್ಗಿಕ ಪರಿಹಾರ

Mustard Oil
Spread the love

ನ್ಯೂಸ್ ಆ್ಯರೋ: ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಸಹ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ. ಅದರಲ್ಲೂ ವಿಶೇಷವಾಗಿ ಚರ್ಮದ ಆರೈಕೆ ವಿಚಾರವಾಗಿ ಹೆಚ್ಚು ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ಒಣ ತ್ವಚೆ ಹಾಗೂ ಇತರೆ ಚರ್ಮದ ಸಮಸ್ಯೆಗಳಾಗುವುದು ಸಹಜ. ಹೀಗಾಗಿ ಅನೇಕ ಮಂದಿ ಮಾಯಿಶ್ಚರೈಸರ್, ಬಾಡಿ ಲೋಷನ್ ಮತ್ತು ಕ್ರೀಮ್‌ಗಳನ್ನು ಬಳಸುತ್ತಾರೆ.

ಆದರೆ ಇವುಗಳಿಗಿಂತಲೂ ಹಿಂದೆ ಜನ ಸಾಸಿವೆ ಎಣ್ಣೆಯನ್ನು ಬಳಸುತ್ತಿದ್ದರು. ಇದೊಂದು ನೈಸರ್ಗಿಕ ಉತ್ಪನ್ನವಾಗಿದ್ದು, ಚರ್ಮದ ಮೇಲೆ ಯಾವುದೇ ಅಡ್ಡಪರಿಣಾಮಗಳಿಲ್ಲದೇ, ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಕೇವಲ ತ್ವಚೆಯ ಆರೈಕೆಯ ಹೊರತಾಗಿ ಈ ಎಣ್ಣೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

ನೈಸರ್ಗಿಕ ಉಷ್ಣತೆ:

ಸಾಸಿವೆ ಎಣ್ಣೆಯು ಮೂಳೆಗಳನ್ನು ಶೀತದಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ನೈಸರ್ಗಿಕವಾಗಿ ಉಷ್ಣತೆಯನ್ನು ನೀಡುತ್ತದೆ. ಸಾಸಿವೆ ಎಣ್ಣೆಯನ್ನು ತ್ವಚೆಯ ಮೇಲೆ ಹಚ್ಚಿ ಮೃದುವಾಗಿ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಇದರಿಂದ ದೇಹ ಬೆಚ್ಚಗಾಗುತ್ತದೆ. ವಿಪರೀತ ಚಳಿಯಿಂದಾಗಿ ಕೈಕಾಲು ಮರಗಟ್ಟುವಿಕೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ತುಟಿಗಳ ಮೇಲೆ ಹಚ್ಚುವುದು:

ಚಳಿಗಾಲದಲ್ಲಿ ಪಾದಗಳಲ್ಲಿ ಬಿರುಕುಗಳು ಉಂಟಾಗುತ್ತವೆ. ಇದನ್ನು ಹಾಗೆಯೇ ಬಿಟ್ಟರೆ ರಕ್ತಸ್ರಾವವಾಗಿ, ನೋವು ಉಂಟಾಗುತ್ತದೆ. ಆದರೆ ಈ ಸೀಸನ್‌ನಲ್ಲಿ ನಿಮ್ಮ ತುಟಿಗಳಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿದರೆ, ಇದು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಿರುಕುಗಳನ್ನು ತಡೆಯುತ್ತದೆ. ಇದರಿಂದ ಒಳ ಚರ್ಮ ಸಮಸ್ಯೆ ನಿವಾರಣೆ ಆಗುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮತ್ತಷ್ಟು ಬಿರುಕುಗಳನ್ನು ತಡೆಗಟ್ಟುತ್ತದೆ.

ಚರ್ಮಕ್ಕೆ ಮಾಯಿಶ್ಚರೈಸರ್:

ಚಳಿಗಾಲದಲ್ಲಿ ಚರ್ಮವು ಶುಷ್ಕವಾಗಿರುತ್ತದೆ ಮತ್ತು ಕಿರಿಕಿರಿಗೊಳಗಾಗುತ್ತದೆ. ಇಂತಹ ವೇಳೆ ಬಿಸಿಗೆ ದೇಹ ಒಡ್ಡಿಕೊಂಡಾಗ ಉರಿ ಉಂಟಾಗುತ್ತದೆ. ಕ್ಯಾಸ್ಟರ್ ಆಯಿಲ್ (ಸಾಸಿವೆ ಎಣ್ಣೆ) ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಯಾವಾಗಲೂ ಚರ್ಮವನ್ನು ಕಾಂತಿಯುತ ಹಾಗೂ ಶುಷ್ಕವಾಗಿರುವಂತೆ ಮಾಡುತ್ತದೆ. ಹೈಡ್ರೀಕರಿಸಿದ ದೇಹದಿಂದ ತೇವಾಂಶವನ್ನು ಕಳೆದುಕೊಳ್ಳದೇ ಪೊರೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಚರ್ಮವು ಯಾವಾಗಲೂ ಮೃದುವಾಗಿರುತ್ತದೆ.

ರೋಗನಿರೋಧಕ ಶಕ್ತಿ ವರ್ಧಕ:

ನೀವು ಸ್ವಲ್ಪ ಸಾಸಿವೆ ಎಣ್ಣೆಯನ್ನು ಕುಡಿಯಬಹುದು. ಇದು ದೇಹಕ್ಕೆ ಇಮ್ಯುನಿಟಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಸೆಲೆನಿಯಮ್ ಮತ್ತು ಸತುವು ಸಮೃದ್ಧವಾಗಿದೆ. ಇವು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ ಮತ್ತು ಜ್ವರದಿಂದ ರಕ್ಷಿಸುತ್ತವೆ. ಕಫ ಮತ್ತು ಮೂಗು ಕಟ್ಟಿಕೊಳ್ಳುವಿಕೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೇ, ಸಾಸಿವೆ ಎಣ್ಣೆಯನ್ನು ಎದೆಗೆ ಹಚ್ಚುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ.

ಉತ್ಕರ್ಷಣ ನಿರೋಧಕಗಳು:

ಸಾಸಿವೆ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್-ಇ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ವಯಸ್ಸಾದ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇವೆಲ್ಲವೂ ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Leave a Comment

Leave a Reply

Your email address will not be published. Required fields are marked *