ಪ್ರೆಗ್ನೆನ್ಸಿಯಲ್ಲಿ ಶುಂಠಿ ತಿನ್ನಬಾರದಂತೆ..!; ಇದು ನಿಜಾನ? ಸುಳ್ಳ? ಇಲ್ಲಿದೆ ಮಾಹಿತಿ
ನ್ಯೂಸ್ ಆ್ಯರೋ: ಗರ್ಭಧಾರಣೆಯು ಬಹಳ ಸೂಕ್ಷ್ಮವಾದ ಹಂತವಾಗಿದೆ. ಈ ಸಮಯದಲ್ಲಿ ಗರ್ಭಿಣಿಯ ಬಗ್ಗೆ ಎಷ್ಟು ಜಾಗರೂಕತೆ ವಹಿಸಿದರೂ ಕೂಡ ಕಡಿಮೆಯೇ. ಈ ದಿನಗಳಲ್ಲಿ, ಗರ್ಭಿಣಿಯರನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿಡಲು, ಮನೆಯ ಹಿರಿಯರು ಕೆಲವು ಆಹಾರಗಳನ್ನು ತಿನ್ನಬಾರದು, ಸಾಧ್ಯವಾದಷ್ಟು ಅವಾಯ್ಡ್ ಮಾಡಿ ಎನ್ನುತ್ತಾರೆ. ಅವುಗಳಲ್ಲಿ ಒಂದು ಶುಂಠಿ. ಗರ್ಭಿಣಿಯರು ಶುಂಠಿಯನ್ನು ತಿನ್ನಬಾರದು. ಇದು ತಾಯಿ ಮತ್ತು ಮಗು ಇಬ್ಬರಿಗೂ ಹಾನಿಯನ್ನುಂಟು ಮಾಡುತ್ತದೆ ಎನ್ನಲಾಗುತ್ತೆ. ಆದರೆ ಇದು ನಿಜವೇ ? ಇಲ್ಲಿದೆ ಮಾಹಿತಿ.
ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿರುವ ಒಂದು ರೀಲ್ಸ್ ನಲ್ಲಿ ಇದೇ ರೀತಿಯ ಹೇಳಿಕೆ ನೀಡಲಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಯೋಚಿಸದೆ ತಾವು ಕಂಡ, ವಿಡಿಯೋ, ರೀಲ್ಸ್ ಎಲ್ಲವನ್ನೂ ನಂಬುತ್ತಾರೆ. ಈ ರೀಲ್ಸ್ ನಲ್ಲಿ, ಗರ್ಭಿಣಿಯರು ತಪ್ಪಿಸಬೇಕಾದ ಸುಮಾರು 6 ವಿಷಯಗಳ ಬಗ್ಗೆ ಹೇಳಿದ್ದಾರೆ. ಅವುಗಳಲ್ಲಿ ಒಂದು ಶುಂಠಿ. ರೀಲ್ ನಲ್ಲಿ ಗರ್ಭಿಣಿಯರು ಶುಂಠಿ ತಿನ್ನಬಾರದು ಎಂದಿದ್ದಾರೆ.
ಈ ಹೇಳಿಕೆಯ ಸತ್ಯಾಸತ್ಯತೆಯ ವೈದ್ಯರು ಹೇಳಿರುವಂತೆ ಇದು ಸಂಪೂರ್ಣವಾಗಿ ನಿಜ ಅಲ್ಲವಂತೆ. ಗರ್ಭಾವಸ್ಥೆಯಲ್ಲಿ ಶುಂಠಿಯ ಅತಿಯಾದ ಸೇವನೆಯು ಇತರ ಅಪಾಯಗಳ ಜೊತೆಗೆ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಶುಂಠಿಯ ಸೇವನೆಯಿಂದ ಹಾರ್ಮೋನುಗಳಲ್ಲಿನ ಬದಲಾವಣೆಗಳು ಸಹ ಕಂಡುಬರುತ್ತವೆ.
ತಜ್ಞರ ಪ್ರಕಾರ ಗರ್ಭಿಣಿಯರು ಶುಂಠಿಯನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯ ಇಲ್ಲ. ಸ್ವಲ್ಪ ಪ್ರಮಾಣದ ಶುಂಠಿಯನ್ನು ಸುರಕ್ಷಿತವಾಗಿ ಸೇವಿಸಬಹುದು. ಆದರೆ ನಿಮ್ಮ ಆಹಾರದಲ್ಲಿ ಶುಂಠಿಯನ್ನು ಸೇರಿಸುವ ಮೊದಲು, ವೈದ್ಯರನ್ನು ಸಂಪರ್ಕಿಸೋದು ಉತ್ತಮ. ವಿಶೇಷವಾಗಿ ನೀವು ಅದನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲು ಬಯಸಿದಾಗ ಮಾತ್ರ. ತಾಯಿ ಮತ್ತು ಹುಟ್ಟಲಿರುವ ಮಗುವಿನ ಸುರಕ್ಷತೆಗಾಗಿ, ಶುಂಠಿಯನ್ನು ಸಣ್ಣ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
ಫ್ಯಾಕ್ಟ್ ಚೆಕ್ ಗರ್ಭಾವಸ್ಥೆಯಲ್ಲಿ ಶುಂಠಿ ತಿನ್ನುವುದು ಸರಿಯಲ್ಲ ಎನ್ನುವ ಹೇಳಿಕೆ ನಿಜ ಎಂದು ಬಹಿರಂಗಪಡಿಸಿದೆ. ತಜ್ಞರ ಪ್ರಕಾರ, ವೈದ್ಯರ ಸಲಹೆಯ ಮೇರೆಗೆ ಶುಂಠಿ ಸೇವಿಸಿದರೆ ಒಳ್ಳೆಯದು. ಪ್ರತಿದಿನ 1 ಗ್ರಾಂಗಿಂತ ಹೆಚ್ಚು ಶುಂಠಿ ತಿನ್ನುವುದು ಸಹ ಸಮಸ್ಯೆಗಳನ್ನು ಉಂಟುಮಾಡುತ್ತೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ.
Leave a Comment