ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆ ರೇಪ್, ಕೊಲೆ; ಇಂದು ತೀರ್ಪು ಪ್ರಕಟ
ನ್ಯೂಸ್ ಆ್ಯರೋ: ಇಡೀ ದೇಶದಲ್ಲಿ ಭಾರಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದ ಇಲ್ಲಿನ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸಿಯಾಲ್ದಹಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಬೇಕಿದೆ. ಆರೋಪಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸಬೇಕು ಎಂದು ಕೇಂದ್ರ ತನಿಖಾ ದಳ (ಸಿಬಿಐ) ವಾದ ಮಂಡಿಸಿತ್ತು. ಘಟನೆ ಸಂಭವಿಸಿದ 57 ದಿ ನಂತರ ತೀರ್ಪು ಪ್ರಕಟವಾಗಿದೆ.
ಕಳೆದ ವರ್ಷ ಆ.9ರಂದು ಕೋಲ್ಕತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಮೇಲೆ, ‘ಪೊಲೀಸರ ಸಹಾಯಕ’ ಎಂಬ ಹುದ್ದೆಯಲ್ಲಿದ್ದ ಸಂಜಯ್ ರಾಯ್, ಅತ್ಯಾಚಾರ ಮತ್ತು ಕೊಲೆ ಮಾಡಿದ್ದ.
ಈತನಿಗೆ ಕಾಲೇಜು ಪ್ರಚಾರ್ಯ ಸಂದೀಪ್ ಘೋಷ್ ಹಾಗೂ ಪೊಲೀಸ್ ಆಯುಕ್ತ ಮೊಂಡಲ್ ಅವರ ಬೆಂಬಲವೂ ಇದೆ ಎಂದು ಆರೋಪಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿ, ಸುಪ್ರೀಂ ಕೋರ್ಟ್ ಗಮನ ಸೆಳೆದಿತ್ತು.
ಮತ್ತೊಂದೆಡೆ ಕೋಲ್ಕತಾ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಕೋಲ್ಕತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿತ್ತು. ಇದರ ತನಿಖೆ ನಡೆಸಿದ ಸಿಬಿಐ, 50 ಸಾಕ್ಷಿಗಳು ಮತ್ತು ಹಲವು ಮಹತ್ತರ ದಾಖಲೆಗಳನ್ನು ತನಿಖೆಗೆ ಒಳಪಡಿಸಿ 45 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ಕೊನೆಯದಾಗಿ ಜ.9ರಂದು ಸಿಯಾಲ್ದಾಹ್ ನ್ಯಾಯಾಲಯ ಕೊನೆ ವಿಚಾರಣೆಯನ್ನು ಪೂರ್ಣಗೊಳಿಸಿತ್ತು. ಹೀಗಾಗಿ ಇಂದು ತೀರ್ಪು ನೀಡಲಿದೆ.
Leave a Comment