ಸೈಫ್‌ ಅಲಿ ಖಾನ್ ಚೂರಿ ಇರಿತ ಪ್ರಕರಣ; ತನಿಖೆಗೆ ಕರ್ನಾಟಕದ ದಯಾ ನಾಯಕ್ ಎಂಟ್ರಿ

encounter-dayanayak
Spread the love

ನ್ಯೂಸ್ ಆ್ಯರೋ: ಸೈಫ್ ಅಲಿ ಖಾನ್​ ಚಾಕು ಇರಿತ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಕರಣದ ತನಿಖೆಗೆ ಏಳು ತಂಡಗಳನ್ನು ರಚಿಸಲಾಗಿದೆ. ಚಾಕು ಇರಿದವನ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಅವರ ಆರೋಗ್ಯ ಇನ್ನೂ ಸ್ಥಿರವಾಗಿಲ್ಲ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆ ಆಗಿದ್ದು, ಪವರ್​ಫುಲ್ ಕಾಪ್ ಒಬ್ಬರು ಪ್ರಕರಣಕ್ಕೆ ಎಂಟ್ರಿ ನೀಡಿದ್ದಾರೆ.

Dayanayak

ದಯಾ ನಾಯಕ್​ ಕರ್ನಾಟಕದ ಉಡುಪಿಯವರು. ‘ಎನ್‌ಕೌಂಟರ್‌ ಸ್ಪೆಷಲಿಸ್ಟ್’ ಅಂತಲೇ ಜನಪ್ರಿಯರಾಗಿದ್ದಾರೆ. ಕೊಂಕಣಿ ಕುಟುಂಬದಲ್ಲಿ ಜನಿಸಿದ ದಯಾ ನಾಯಕ್, ಬಡ್ಡ ಮತ್ತು ರಾಧಾ ನಾಯಕ್ ದಂಪತಿಯ ಕಿರಿಯ ಪುತ್ರ. ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ನಂತರ ಕುಟುಂಬಕ್ಕೆ ಆಧಾರವಾಗಲು ಉದ್ಯೋಗ ಹುಡುಕಿಕೊಂಡು 1979ರಲ್ಲಿ ಮುಂಬೈ ಬಂದರು.

ಅಲ್ಲಿ ಹೋಟೆಲ್​ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರದ ದಿನಗಳಲ್ಲಿ ಹೋಟೆಲ್ ಕಾರಿಡಾರ್​​​​ನಲ್ಲೇ ಕೂತು ಓದಿ 12ನೇ ಕ್ಲಾಸ್ ಪಾಸ್ ಮಾಡಿದರು. ಮತ್ತೆ ಓದು ಆಸೆಯನ್ನು ಚಿಗುರಿಸಿಕೊಂಡ ದಯಾ ನಾಯಕ್, ಕೆಲಸ ಮಾಡುತ್ತಲೇ ಅಂಧೇರಿಯ ಸಿಇಎಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡರು. ಪದವಿ ನಂತರ ಪೊಲೀಸ್ ಅಧಿಕಾರಿ ಆಗಬೇಕೆಂಬ ಹಠಕ್ಕೆ ಬಿದ್ದು, ಅದನ್ನು ಸಾಧಿಸಿದ್ದಾರೆ.

Encounter Dayanayak

1990ರ ದಶಕದಲ್ಲಿ 80ಕ್ಕೂ ಹೆಚ್ಚು ಭೂಗತ ದರೋಡೆಕೋರರ ಫಿನಿಶ್ ಮಾಡಿದ್ದಾರೆ.1996 ರಲ್ಲಿ ಮುಂಬೈನ ಜುಹುದಲ್ಲಿ ಇಬ್ಬರು ಛೋಟಾ ರಾಜನ್​ ಸಹಚರರನ್ನು ಎನ್​ಕೌಂಟರ್ ಮಾಡುವ ಮೂಲಕ ದಯಾ ನಾಯಕ್ ಮುನ್ನಲೆಗೆ ಬಂದರು. ಮುಂದಿನ ದಿನಗಳಲ್ಲಿ ದರೋಡೆಕೋರರಿಗೆ, ರೌಡಿಗಳಿಗೆ ದುಸ್ವಪ್ನವಾಗಿ ಕಾಡಿದರು.

ಇನ್ನು ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಎದ್ದಿದ್ದು, ಸೈಫ್ ಅಲಿ ಖಾನ್​ಗೆ ಚಾಕು ಚುಚ್ಚಿದವನ ಉದ್ದೇಶ ಏನಿತ್ತು? ಘಟನೆ ನಡೆದಿದ್ದು ಹೇಗೆ? ಘಟನೆ ನಡೆದ ಬಳಿಕ ಆತ ಮನೆಯಲ್ಲೇ ಅಡಗಿ ಕೂತಿದ್ದು ಹೇಗೆ? ಚಾಕು ಇರಿದವನ ಹಿಂದೆ ಯಾವುದಾದರೂ ತಂಡ ಇದೆಯೇ? ಇನ್ನಿತರೆ ಪ್ರಶ್ನೆಗಳಿಗೂ ಈಗಲೂ ಉತ್ತರ ಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾದ ಆರೋಪಿಯ ಬಂಧನ ಆಗಬೇಕಿದೆ.

Leave a Comment

Leave a Reply

Your email address will not be published. Required fields are marked *