ಬೀದರ್‌ನಲ್ಲಿ ₹93 ಲಕ್ಷ ದರೋಡೆ ಪ್ರಕರಣ; ಓರ್ವ ಆರೋಪಿ ಬಂಧನ, ಸಿಕ್ಕಿಬಿದ್ದಿದ್ದು ಹೇಗೆ?
ನ್ಯೂಸ್ ಆ್ಯರೋ: ಬೀದರ್ ಎಟಿಎಂ ಬಳಿ ಶೂಟ್ ಮಾಡಿ 93 ಲಕ್ಷ ರೂಪಾಯಿ ಹಣ ಕದ್ದು ಓಡುತ್ತಿದ್ದ ದುಷ್ಕರ್ಮಿಗಳು ಹೈದರಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ದರೋಡೆ ಮಾಡಿದ ದುಷ್ಕರ್ಮಿಗಳು ಹೈದ್ರಾಬಾದ್‌ನ ಅಫ್ಝಲ್‌ಗಂಜ್ ಬಳಿ ಅಡಗಿರುವ ಶಂಕೆ ವ್ಯಕ್ತವಾಗಿತ್ತು. ಬೀದರ್ ಹಾಗೂ ತೆಲಂಗಾಣ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬೀದರ್‌ನಲ್ಲಿ ಹಣ ದರೋಡೆ ಪ್ರಕರಣದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ. ತೆಲಂಗಾಣದ ಅಪ್ಝಲ್‌ಗಂಜ್‌ನ ಟ್ರಾವೆಲ್ ಏಜೆನ್ಸಿ ಬಳಿ ಹಣದ ಬ್ಯಾಗ್ ಸಮೇತ ಇಬ್ಬರು ದುಷ್ಕರ್ಮಿಗಳು ಓಡಾಡುತ್ತಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಶಂಕಿತ ಓರ್ವ ಆರೋಪಿಯನ್ನ ಬಂಧಿಸಿದ್ದು ಇನ್ನೋರ್ವ ಪರಾರಿ ಆಗಿದ್ದಾನೆ.
ಅಪ್ಝಲ್‌ಗಂಜ್‌ನ ಟ್ರಾವೆಲ್ ಏಜೆನ್ಸಿ ಬಳಿ ಹಣದ ಬ್ಯಾಗ್ ಜೊತೆ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ಬಂಧನದ ವೇಳೆ ಆರೋಪಿಗಳು ಮತ್ತೆ ಗುಂಡಿನ ದಾಳಿ ಮಾಡಿದ್ದಾರೆ.
ಫೈರಿಂಗ್ ವೇಳೆ ಟ್ರಾವೆಲ್ ಏಜೆನ್ಸಿ ಮ್ಯಾನೇಜರ್ ಹಾಗು ಬಸ್ ಕ್ಲೀನರ್‌ಗೆ ಗಾಯಗಳಾಗಿದೆ. ಬ್ಯಾಗ್‌ನಲ್ಲಿ ಹಣ ಸಿಕ್ಕಿರುವುದರಿಂದ ಬೀದರ್ ಎಟಿಎಂ ದರೋಡೆಗೂ ಈ ಕೇಸ್‌ಗೂ ಸಾಮ್ಯತೆ ಇದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಬೀದರ್ ಪೊಲೀಸ್ ತಂಡ ಅಪ್ಝಲ್‌ಗಂಜ್‌ಗೆ ತೆರಳಿದ್ದು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
Leave a Comment