ಗಾಡಿ ತೊಳಿಯೋ ಬೇವರ್ಸಿ’  – ವೈರಲ್ ಆಯ್ತು ಕಾರಿನ ಗ್ಲಾಸ್ ಮೇಲೆ ಬರೆದಿರುವ ಬರಹ..!!

ಗಾಡಿ ತೊಳಿಯೋ ಬೇವರ್ಸಿ’ – ವೈರಲ್ ಆಯ್ತು ಕಾರಿನ ಗ್ಲಾಸ್ ಮೇಲೆ ಬರೆದಿರುವ ಬರಹ..!!

ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣ ಅನ್ನುವ ಹುಚ್ಚರ ಸಂತೆಯಲ್ಲಿ, ಯಾವಾಗ ಯಾವ ಫೋಟೋ ಅಥವಾ ವಿಡಿಯೋ ಟ್ರೆಂಡಿಂಗ್ ನಲ್ಲಿರುತ್ತದೋ ಹೇಳ ಬರುವುದಿಲ್ಲ. ಕೆಲವೊಂದು ಪೋಸ್ಟ್ ಗಳು ಗಂಭೀರ ಚರ್ಚೆಗಳಿಗೆ ಎಡೆಮಾಡಿಕೊಟ್ಟರೆ, ಮತ್ತೆ ಕೆಲವು ತಮಾಷೆಯಾಗಿರುತ್ತದೆ. ಸದ್ಯ ಇದೀಗ ಟ್ರೆಂಡಿಂಗ್ ನಲ್ಲಿರುವ ಪೋಸ್ಟ್ ನೋಡಿ ಸೋಶಿಯಲ್ ಮಿಡಿಯಾದಲ್ಲಿ ನಗುವಿನ ಅಲೆ ಎದ್ದಿದೆ‌.

ಈ ಸಾಮಾಜಿಕ ಜಾಲತಾಣಗಳು ಎನ್ನುವಂತಹದ್ದು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದು ಕೂಡ. ಕೆಲವರು ಇದನ್ನು ಟೈಮ್ ಪಾಸ್ ಗಾಗಿ ಬಳಸಿದರೆ, ಮತ್ತೆ ಕೆಲವರು ಒಳ್ಳೆಯದಕ್ಕೆ ಬಳಸುತ್ತಾರೆ‌. ಇಂದಿನ‌ ಇಂಟರ್ನೆಟ್ ಯುಗದಲ್ಲಿ ಕೆಲವರು ಡ್ಯಾನ್ಸ್, ನಟನೆ, ಕಾಮಿಡಿ ಹಾಗೂ ತಮ್ಮ ಬರಹಗಳ ಮೂಲಕವೂ ರಾತ್ರೋರಾತ್ರಿ ಸೆಲೆಬ್ರಿಟಿಗಳಾಗುತ್ತಾರೆ‌. ಸದ್ಯ, ಧೂಳು ಹಿಡಿದು ರಸ್ತೆ ಬದಿಯಲ್ಲಿ ನಿಂತಿದ್ದ ಕಾರೊಂದರ ಹಿಂಬಾಗದ ಗಾಜಿನ ಮೇಲೆ ‘ಗಾಡಿ ತೊಳಿಯೋ ಬೇವರ್ಸಿ’ ಎಂದು ಬರೆದಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಕ್ಕೆ ಕಾಲಿಡುತ್ತಿದ್ದಂತೆ, ನೆಟ್ಟಿಗರು ಬಿದ್ದೂ ಬಿದ್ದು ನಕ್ಕಿದ್ದಾರೆ. ಜೊತೆಗೆ ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ. ಕೆಲವರು ‘ಗಾಡಿ ತೊಳಿಯೊಕೆ ದುಡ್ಡ್ ಯಾರ್ ನಿಮ್ಮಪ್ಪ ಕೊಡ್ತಾನಾ’ ಎಂದು ಕಾಮೆಂಟ್ ಹಾಕಿದರೆ, ಮತ್ತೆ ಕೆಲವರು ನಗುವ ಇಮೋಜಿ ಕಳುಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಯಾರೋ ಒಬ್ಬ ಅನಾಮಿಕ ಬರೆದ ಈ ಪೋಸ್ಟ್ ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದ್ದಂತು ಸುಳ್ಳಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *