ಮಹಾ ಕುಂಭಮೇಳದ ಮೇಲೆ ಪಾಕ್ ಕಣ್ಣು; ಗೂಗಲ್ ಬಿಡುಗಡೆ ಮಾಡಿದ್ದೇನು ?
ನ್ಯೂಸ್ ಆ್ಯರೋ: 144 ವರ್ಷಗಳ ನಂತರ ನಡೆಯುತ್ತಿರುವ ಐತಿಹಾಸಿಕವಾದ ಮಹಾಕುಂಭ ಮೇಳದಲ್ಲಿ ಪ್ರತಿದಿನ ಕೊಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿ ಮಿಂದೇಳುತ್ತಿದ್ದಾರೆ. ಇದರೊಂದಿಗೆ ಮಹಾಕುಂಭ ಮೇಳವು ಇದೀಗ ಕೇವಲ ಭಾರತದ ಹಬ್ಬವಾಗದೆ ಇಡೀ ಜಗತ್ತಿನ ಮಹಾ ಹಬ್ಬವಾಗಿ ಪರಿಣಮಿಸಿದೆ.
ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭಮೇಳದಲ್ಲಿ ಒಂದು ಕೋಟಿಗೂ ಅಧಿಕ ಜನರು ಭಾಗವಹಿಸಿದ್ದರು. ಇನ್ನು ಮಕರ ಸಂಕ್ರಾಂತಿಯಾದ ಜನವರಿ 14 ರಂದು ಮೂರುವರೆ ಕೋಟಿ ಜನರು ಭಾಗವಹಿಸಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಇದರೊಂದಿಗೆ ಇದು ವಿಶ್ವದ ಹಬ್ಬವಾಗಿ ಪರಿಣಮಿಸಿರುವುದು ಸಾಬೀತಾದಂತಾಗಿದೆ.
ಈ ನಡುವೆ ಶಾಕಿಂಗ್ ವಿಚಾರವೊಂದನ್ನು ಗೂಗಲ್ ತಿಳಿಸಿದೆ. ಮಹಾಕುಂಭ ಮೇಳದ ಕುರಿತು ತನ್ನ ಜಾಲತಾಣದಲ್ಲಿ ಸರ್ಚ್ ಮಾಡಿರುವಂತಹ ದೇಶಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಇದರಲ್ಲಿ ಅಚ್ಚರಿಯ ವಿಷಯವೆಂದರೆ ಭಾರತದ ವೈರಿ ರಾಷ್ಟ್ರದಲ್ಲಿಯೇ ಭಾರತ ಬಿಟ್ಟು ಅತಿ ಹೆಚ್ಚು ಹುಡುಕಲಾಗಿರುವುದು. ಇದರೊಂದಿಗೆ ಮುಸ್ಲಿಂ ರಾಷ್ಟ್ರಗಳು ನಂತರದ ಪಟ್ಟಿಯಲ್ಲಿ ಪ್ರಮುಖವಾಗಿ ಗಮನ ಸೆಳದಿದೆ.
ಗೂಗಲ್ ಅಂಕಿ ಅಂಶದ ಪ್ರಕಾರ ಭಾರತದ ನಂತರ ನಮ್ಮ ವೈರಿ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಮಹಾಕುಂಭ ಮೇಳದ ಕುರಿತು ಅತಿ ಹೆಚ್ಚು ಹುಡುಕಾಡಲಾಗುತ್ತದೆ. ಇನ್ನು ಪಾಕಿಸ್ತಾನದ ನಂತರ ಕತಾರ್, ಯುಎಇ ಮತ್ತು ಬಹ್ರೇನ್ ದೇಶಗಳಲ್ಲಿ ಮಹಾಕುಂಭ ಮೇಳದ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿಸಲಾಗುತ್ತಿದೆ.
ಇದಲ್ಲದೇ ಬಹುತೇಖ ಹಿಂದೂಗಳೆ ಇರುವ ನೇಪಾಳ ಮತ್ತು ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ಬ್ರಿಟನ್, ಥಾಯ್ಲೆಂಡ್ ಹಾಗೂ ಅಮೆರಿಕದಂತಹ ದೇಶಗಳ ಜನರು ಸಹ ಯೋಗಿ ಸರ್ಕಾರ ಆಯೋಜಿಸಿರುವ ಮಹಾಕುಂಭ ಮೇಳದ ಕುರಿತು ಗೂಗಲ್ನಲ್ಲಿ ಹುಡುಕಾಡುತ್ತಾ ಓದುತ್ತಿದ್ದಾರೆ.
Leave a Comment