ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ನೋಟ್ 12 ಸರಣಿ ಸ್ಮಾರ್ಟ್ ಫೋನ್ – ಇದರ ಅದ್ಭುತ ಫೀಚರ್ಸ್ ಹೇಗಿದೆ ಗೊತ್ತಾ…!?

ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ನೋಟ್ 12 ಸರಣಿ ಸ್ಮಾರ್ಟ್ ಫೋನ್ – ಇದರ ಅದ್ಭುತ ಫೀಚರ್ಸ್ ಹೇಗಿದೆ ಗೊತ್ತಾ…!?

ನ್ಯೂಸ್ ಆ್ಯರೋ : ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ರೆಡ್‌ಮಿ ನೋಟ್ 12, ರೆಡ್‌ಮಿ ನೋಟ್ 12 ಪ್ರೋ ಮತ್ತು ರೆಡ್‌ಮಿ ನೋಟ್ 12 ಪ್ರೋ ಪ್ಲಸ್ ಲಾಂಚ್ ಆಗಿದ್ದು, ನಿನ್ನೆಯಿಂದ ಮಾರಾಟ ಶುರುವಾಗಿದೆ. ಈ ಸರಣಿಯ ಎಲ್ಲ ಫೋನುಗಳ ಬೆಲೆ 10 ಸಾವಿರ ರೂ.ನಿಂದ 30 ಸಾವಿರ ರೂ.ವರೆಗೆ ಇದೆ.

ರೆಡ್‌ಮಿ ನೋಟ್ 12 5ಜಿ ಫೋನ್ 6.67 ಇಂಚ್ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ನೋಟ್ 12 ಪ್ರೋ ಮತ್ತು ಪ್ರೋ ಪ್ಲಸ್‌ಗೂ ಇದೇ ರೀತಿಯ ಡಿಸ್‌ಪ್ಲೇಗಳಿವೆ. ಆದರೆ, ರಿಫ್ರೆಶ್ ದರದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಪ್ರೋ ಪ್ಲಸ್ ಮಾದರಿ ಫೋನಿಗೆ ಗೊರಿಲ್ಲಾ ಪ್ರೊಟೆಕ್ಷನ್ ಗ್ಲಾಸ್ ಇರಲಿದೆ.

ಕ್ಯಾಮೆರಾ ಬಗ್ಗೆ ಹೇಳುವುದಾದರೆ, ರೆಡ್‌ಮಿ ನೋಟ್ 12 ಫೋನಿನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್ ಅಪ್ ಇದೆ. ಈ ಪೈಕಿ ಮೊದಲನೆ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ದಾಗಿದ್ದರೆ, ಉಳಿದೆರಡು ಕ್ಯಾಮೆರಾಗಳು 8 ಮತ್ತು 2 ಮೆಗಾ ಪಿಕ್ಸೆಲ್ ಪಿಕ್ಸೆಲ್ ದಾಗಿದೆ. ಅದೇ ರೀತಿ, ರೆಡ್‌ಮಿ ನೋಟ್ ಪ್ರೋನಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಅನ್ನು ಒಳಗೊಂಡಿದ್ದು, 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2ಎಂಪಿ ಮ್ಯಾಕೋ ಲೆನ್ಸ್ ಕ್ಯಾಮೆರಾಗಳಿವೆ.

ಆದರೆ, ರೆಡ್‌ಮಿ ನೋಟ್ 12 ಪ್ರೋ ಪ್ಲಸ್ ಫೋನ್ ಹಿಂಬದಿಯಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಅದೇ ರೀತಿ, ರೆಡ್‌ಮಿ ನೋಟ್ 12 ಕ್ಯಾಮೆರಾದಲ್ಲಿ ಸೆಲ್ಪಿಗಾಗಿ 13 ಎಂಪಿ ಕ್ಯಾಮೆರಾ ನೀಡಲಾಗಿದ್ದು, ಉಳಿದರೆಡು ವೆರಿಯೆಂಟ್‌ಗಳಿಗೆ 16 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಇನ್ನುಳಿದಂತೆ ಕನೆಕ್ಟಿವಿಟಿ ಹಾಗೂ ಬ್ಯಾಟರಿಗಳ ವಿಷಯದಲ್ಲೂ ರೆಡ್‌ಮಿ ನೋಟ್‌ ಸರಣಿ ಫೋನುಗಳ ಗಮನಾರ್ಹವಾಗಿವೆ. ಹಲವು ಫೀಚರ್‌ಗಳು ಗಮನ ಸೆಳೆಯುವಂತಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *