ಜಿಯೋ ಗ್ರಾಹಕರಿಗೆ ಬಂಪರ್ ಆಫರ್; 2 ವರ್ಷ ಯೂಟ್ಯೂಬ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಉಚಿತ

Jio 1
Spread the love

ನ್ಯೂಸ್ ಆ್ಯರೋ: ರಿಲಯನ್ಸ್ ಜಿಯೋ ತನ್ನ ಜಿಯೋಏರ್ ಫೈಬರ್ ಮತ್ತು ಜಿಯೋ ಫೈಬರ್ ಪೋಸ್ಟ್‌‌ಪೇಯ್ಡ್ ಬಳಕೆದಾರರಿಗೆ ಹೊಸ ಆಫರ್ ನೀಡಿದೆ. ಜನವರಿ 11ರಿಂದ ಅನ್ವಯಿಸುವಂತೆ ಅತ್ಯಾಕರ್ಷಕ ಹೊಸ ಯೋಜನೆಯನ್ನು ಘೋಷಿಸಿದೆ. ಅರ್ಹ ಗ್ರಾಹಕರಿಗೆ ಜಿಯೋ ಅತ್ಯುತ್ತಮ ಕೊಡುಗೆ ನೀಡುತ್ತಿದೆ. ಈ ಮೂಲಕ ಗ್ರಾಹಕರು 24 ತಿಂಗಳ ವರೆಗೆ ಅಂದರೆ 2 ವರ್ಷಗಳ ಕಾಲ ಯೂಟ್ಯೂಬ್ ಪ್ರೀಮಿಯಂಗೆ ಕಾಂಪ್ಲಿಮೆಂಟರಿ ಸಪ್‌ಸ್ಕ್ರಿಪ್ಶನ್ ಪಡೆಯುತ್ತಾರೆ.

ಯೂಟ್ಯೂಬ್ ಪ್ರೀಮಿಯಂ ಸೌಲಭ್ಯ

  • ಜಾಹೀರಾತು ಇಲ್ಲದೆ ವೀಕ್ಷಣೆ : ಜಾಹೀರಾತುಗಳ ಅಡೆ ತಡೆ ಇಲ್ಲದೆ ಯೂಟ್ಯೂಬ್ ವಿಡಿಯೋ ವೀಕ್ಷಿಸಬಹುದು.
  • ಆಫ್ಲೈನ್ ವೀಡಿಯೊಗಳು : ಯಾವುದೇ ಸಮಯದಲ್ಲಿ ಅಂದರ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ವಿಡಿಯೋ ವೀಕ್ಷಿಸಲು ಡೌನ್ಲೋಡ್ ಮಾಡಿಕೊಳ್ಳಬಹುದು.
  • ಬ್ಯಾಕ್ ಗ್ರೌಂಡ್ ಪ್ಲೇ : ಇತರ ಅಪ್ಲಿಕೇಶನ್ ಗಳನ್ನು ಬಳಸುವಾಗ ಅಥವಾ ನಿಮ್ಮ ಸ್ಕ್ರೀನ್ ಆಫ್ ಮಾಡುವಾಗ ವೀಡಿಯೊಗಳನ್ನು ನೋಡುವುದನ್ನು ಅಥವಾ ಸಂಗೀತವನ್ನು ಕೇಳುವುದನ್ನು ಮುಂದುವರಿಸಿ.
  • ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ : 100 ದಶಲಕ್ಷಕ್ಕೂ ಹೆಚ್ಚು ಜಾಹೀರಾತು-ಮುಕ್ತ ಹಾಡುಗಳು, ಪರ್ಸನಲೈಡ್ಜ್ ಪ್ಲೇ-ಲಿಸ್ಟ್‌ಗಳು ಮತ್ತು ಜಾಗತಿಕ ಚಾರ್ಟ್-ಟಾಪರ್‌ಗಳ ಬೃಹತ್ ಲೈಬ್ರರಿ ಅವಕಾಶ ಸಿಗಲಿದೆ.

    ಅರ್ಹ ಯೋಜನೆಗಳು : ಈ ಕೊಡುಗೆಯು ಜಿಯೋಏರ್ ಫೈಬರ್ ಮತ್ತು ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ₹ 888, ₹ 1199, ₹ 1499, ₹ 2499, ಮತ್ತು ₹ 3499ರ ಪ್ಲಾನ್‌ಗಳಲ್ಲಿ ಲಭ್ಯವಿದೆ.

    ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಸಕ್ರಿಯಗೊಳಿಸುವುದು ಹೇಗೆ :

    1. ಅರ್ಹ ಯೋಜನೆಗೆ ಚಂದಾದಾರರಾಗಿ ಅಥವಾ ಬದಲಾಯಿಸಿಕೊಳ್ಳಿ.
    2. MyJio ನಲ್ಲಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
    3. ಪುಟದಲ್ಲಿ ಪ್ರದರ್ಶಿಸಲಾದ ಯೂಟ್ಯೂಬ್ ಪ್ರೀಮಿಯಂ ಬ್ಯಾನರ್ ಮೇಲೆ ಕ್ಲಿಕ್ ಮಾಡಿ.
    4. ನಿಮ್ಮ ಖಾತೆಯೊಂದಿಗೆ ಯೂಟ್ಯೂಬ್‌ಗೆ ಸೈನ್ ಇನ್ ಮಾಡಿ ಅಥವಾ ಹೊಸದನ್ನು ರಚಿಸಿ.
    5. ಅದೇ ರುಜುವಾತುಗಳೊಂದಿಗೆ ಲಾಗಿನ್ ಮಾಡುವ ಮೂಲಕ ನಿಮ್ಮ ಜಿಯೋಫೈಬರ್ ಅಥವಾ ಜಿಯೋಏರ್‌ಫೈಬರ್ ಸೆಟ್-ಟಾಪ್ ಬಾಕ್ಸ್‌ನಲ್ಲಿ ಜಾಹೀರಾತು-ಮುಕ್ತ ಯೂಟ್ಯೂಬ್ ಕಂಟೆಂಟ್‌ಗಳನ್ನು ಆನಂದಿಸಿ.

    Leave a Comment

    Leave a Reply

    Your email address will not be published. Required fields are marked *

    error: Content is protected !!