ಇಂದು ಐತಿಹಾಸಿಕ ಹೆಜ್ಜೆಯತ್ತ ಕರ್ನಾಟಕ; 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ
ನ್ಯೂಸ್ ಆ್ಯರೋ: ಸಮಾಜದ ಮುಖ್ಯವಾಹಿನಿಯಿಂದ ಮರೆಯಾಗಿ ವನವಾಸದಲ್ಲಿರುವ ನಕ್ಸಲರ ಬದುಕಿಗೂ ಶ್ರಾವಣ ಬಂದಿದೆ. ಅಡವಿಯಲ್ಲಿ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದಾರೆ. 4 ದಶಕಗಳ ಕಾಲ ಸದ್ದು ಮಾಡಿದ್ದ ನಕ್ಸಲ್ ಸಂಸ್ಕೃತಿಯಿಂದ ಕರ್ನಾಟಕ ಮುಕ್ತ ಆಗುವ ಮುನ್ಸೂಚನೆ ಸಿಕ್ಕಿದೆ.
ನಕ್ಸಲ್ ಚಟುವಟಿಕೆಗಳನ್ನು ನಾವು ಸಹಿಸಲ್ಲ.. ನಿಮಗೆ ಇನ್ನೂ ಒಂದು ಚಾನ್ಸ್ ಕೊಡ್ತೀವಿ ಕೂಡಲೇ ಬಂದು ಸರ್ಕಾರಕ್ಕೆ ಶರಣಾಗಿ. ಹೀಗಂತ ವಾರದ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಘರ್ಜಿಸಿದ್ದರು. ವಿಪರ್ಯಾಸ ಎಂಬಂತೆ ಪಶ್ಚಿಮಘಟ್ಟ ಹಾಗೂ ಮಲೆನಾಡಿನಲ್ಲಿ ಅಡಗಿದ್ದ 6 ಮಂದಿ ನಕ್ಸಲರು ಶರಣಾಗತಿಗೆ ಬಯಸಿ ನಾಗರಿಕ ಸಮಿತಿಗೆ ಪತ್ರ ಬರೆದಿದ್ದಾರೆ.
ಇಂದು ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಶರಣಾಗತಿಗೆ ಸಮಯ ನಿಗದಿಯಾಗಿದೆ. ಬಂದೂಕು ಸಂಸ್ಕೃತಿ ಮೂಲಕ ನ್ಯಾಯ ಪಡೆಯಲು ಹೊರಟಿದ್ದ ನಕ್ಸಲರು ಹ್ಯಾಂಡ್ಸಪ್ ಮಾಡಿದ್ದು ಸಮಾಜದ ಮುಖ್ಯವಾಹಿನಿ ಬರಲು ಬಯಸಿದ್ದಾರೆ.
ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿ ಯಾಗಲಿದ್ದಾರೆ.
6 ನಕ್ಸಲರ ಶರಣಾಗತಿ ಹಿನ್ನೆಲೆಯಲ್ಲಿ ಮಾಜಿ ನಕ್ಸಲರು, ಇಂಟಲಿಜೆನ್ಸ್ ಪೊಲೀಸರು, ಶರಣಾಗತಿ ಸಮಿತಿ ಸದಸ್ಯರು ಮಹತ್ವದ ಸಭೆ ನಡೆಸಿದ್ದಾರೆ. ಬಂದೂಕಿನ ಮೂಲಕ ಮಾತನಾಡುತ್ತಿದ್ದ ಆದರ್ಶವಾದಿಗಳಿಗೆ ಕೊನೆಗೂ ಪಾಪಪ್ರಜ್ಞೆ ಕಾಡಿದ್ದು ಆಯುಧ ಕೆಳಗಿಳಿಸುತ್ತಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆಗಳು ನಡೆಯಲಿವೆ.
Leave a Comment