ನ್ಯಾಯಾಲಯಕ್ಕೆ ಹಾಜರಾದ ನಟಿ ರಮ್ಯಾ: ಏನಿದು ಚಂದನವನದ ತಾರೆಯ‌ ಕೇಸ್?

Ramya
Spread the love

ನ್ಯೂಸ್ ಆ್ಯರೋ: ಕನ್ನಡ’ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತೆರೆಕಂಡ ದಿನವೇ ಕಾನೂನು ಅಡೆತಡೆ ಎದುರಿಸಿತ್ತು‌. ಈ ಚಿತ್ರ ರಿಲೀಸ್​ ಆಗಬಾರದೆಂದು ಮೋಹಕತಾರೆ ರಮ್ಯಾ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು‌. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ ಕ್ವೀನ್​​ ಇಂದು ಕೋರ್ಟ್​​ಗೆ ಹಾಜರಾದರು. ಆದರೆ ಚಿತ್ರತಂಡದವರು ವಿಚಾರಣೆಗೆ ಬಂದಿಲ್ಲ ಎಂಬ ಮಾಹಿತಿ ಇದೆ. ರಮ್ಯಾ ಅವರು ಸಾಕ್ಷಿ ತಂದಿದ್ದಾರೆ ಎಂದು ತಿಳಿದು ಬಂದಿದೆ.

Screenshot 2025 01 07 162901 Cleanup

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ವಿರುದ್ಧ ಕೇಸ್​ ಹಾಕಿದ್ದ ಚಂದನವನದ ತಾರೆ ನಗರದ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. 2024ರ ಜುಲೈನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಿರ್ಮಾಪಕರ ಮೇಲೆ ಕೇಸ್ ಹಾಕಿದ್ದರು. ಸಿನಿಮಾ ರಿಲೀಸ್​ಗೆ ತಡೆಯಾಜ್ಞೆ ಕೋರುವುದರ ಜೊತೆಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಪ್ರಕರಣ ದಾಖಲಿಸಿದ್ದರು.

Screenshot 2025 01 07 162444 Cleanup

ತಮ್ಮ ಅನುಮತಿ ಪಡೆಯದೇ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟ್ರೇಲರ್​ ಹಾಗೂ ಸಿನಿಮಾದಲ್ಲಿ ತಮ್ಮ ದೃಶ್ಯಗಳ ಬಳಕೆ ಮಾಡಿರುವುದಾಗಿ ಆರೋಪ ಹೊರಿಸಿದ್ದರು. ದೃಶ್ಯಗಳನ್ನು ತೆಗೆದುಹಾಕುವಂತೆ ದಾವೆ ಹೂಡಿದ್ದರು. ಕೇವಲ ಸಿನಿಮಾದ ಪ್ರೋಮೋ ಶೂಟ್​ಗಾಗಿ ಅಷ್ಟೇ ಚಿತ್ರೀಕರಿಸಲು ರಮ್ಯಾ ಅನುಮತಿ ಕೊಟ್ಟಿರುವುದಾಗಿ ತಿಳಿಸಿದ್ದರು. ಆದ್ರೆ ಚಿತ್ರತಂಡ ಟ್ರೇಲರ್ ಹಾಗೂ ಸಿನಿಮಾದಲ್ಲಿ ದೃಶ್ಯಗಳನ್ನು ಬಳಸಿಕೊಂಡಿದೆ ಎಂದು ದೂರಿದ್ದರು.

ಲೆಕ್ಚರರ್ ಪಾತ್ರದಲ್ಲಿ ಮೋಹಕತಾರೆ ರಮ್ಯಾ ಕಾಣಿಸಿಕೊಂಡಿದ್ದರು. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರವನ್ನು ವರುಣ್ ಹಾಗೂ ಪ್ರಜ್ವಲ್ ಬಿ. ಪಿ ನಿರ್ಮಾಣ ಮಾಡಿದ್ದು, ಜುಲೈ 21ರಂದು ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!