ಸೆಕೆಂಡ್ ಹ್ಯಾಂಡ್ ಫೋನ್ ಬಳಕೆಯಿಂದ ನೀರಿನ ಉಳಿತಾಯ – ನೀವು ನಂಬದಿದ್ರೂ ಇದು ನಿಜ.. ಹೇಗೆ ಗೊತ್ತಾ?

ಸೆಕೆಂಡ್ ಹ್ಯಾಂಡ್ ಫೋನ್ ಬಳಕೆಯಿಂದ ನೀರಿನ ಉಳಿತಾಯ – ನೀವು ನಂಬದಿದ್ರೂ ಇದು ನಿಜ.. ಹೇಗೆ ಗೊತ್ತಾ?

ನ್ಯೂಸ್ ಆ್ಯರೋ‌ : ಇದು ಸ್ಮಾರ್ಟ್ ಫೋನ್ ಜಮಾನ. ಶಿಕ್ಷಣದಿಂದ ಹಿಡಿದು ಉದ್ಯೋಗ ಕ್ಷೇತ್ರದಲ್ಲೂ ಸ್ಮಾರ್ಟ್ ಫೋನ್ ಬಳಸುತ್ತಿದ್ದೇವೆ. ಈ ಮಧ್ಯೆ ವರದಿಯೊಂದು ಬಂದಿದ್ದು, ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಫೋನ್‍ಗಳಿಗೆ ಭಾರೀ ಬೇಡಿಕೆ ನಿರ್ಮಾಣವಾಗಿದೆ. ಇದು ಪರಿಸರ ವ್ಯವಸ್ಥೆಗೆ ತನ್ನದೇ ಆದ ಕೊಡುಗೆ ನೀಡಿದೆ. ಅರೆ.. ಇದು ಹೇಗೆ ಸಾಧ್ಯ ಎಂದು ಆಲೋಚಿಸುತ್ತಿದ್ದೀರ? ಕಾರಣ ನಾವು ಹೇಳುತ್ತೇವೆ.

ಇತ್ತೀಚೆಗೆ ಅನಿವಾರ್ಯವಾಗಿ ಬದಲಾಗಿರುವ ಸ್ಮಾರ್ಟ್ ಫೋನ್‍ನ ಅತಿಯಾದ ಉತ್ಪಾದನೆ ಪರಿಸರಕ್ಕೆ ಭಾರೀ ಹಾನಿ ಉಂಟು ಮಾಡುತ್ತಿದೆ. ಹಸಿರುಮನೆ ಅನಿಲಗಳ ಹೊರ ಸೂಸುವಿಕೆ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ, ಎಲೆಕ್ಟ್ರಾನಿಕ್ ತ್ಯಾಜ್ಯ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.

ಆತಂಕದ ವಿಚಾರ ಎಂದರೆ ಹೊಸ ಫೋನ್ ತಯಾರಿಕೆಗೆ ಸುಮಾರು 13 ಟನ್‍ಗಳಷ್ಟು ನೀರು ಬೇಕು. ಈ ಬಗ್ಗೆ ಮಾಹಿತಿ ನೀಡಿದ ಮೊಬೆಕ್ಸ್ ಇಂಡಿಯಾ ಸಂಸ್ಥಾಪಕ ಕೃನಾಲ್ ಶಾ, ಸೆಕೆಂಡ್ ಹ್ಯಾಂಡ್ ಮೊಬೈಲ್ ಬಳಕೆಯಿಂದ ಈ ಅವಧಿಯಲ್ಲಿ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಬಳಕೆ ಮಾಡುತ್ತಿದ್ದ 434 ಮಿಲಿಯನ್ ಲೀಟರ್ ನೀರನ್ನು ಮೊಬೆಕ್ಸ್ ಉಳಿಕೆ ಮಾಡಿದೆ. ಈ ಮೂಲಕ ಸುಮಾರು 4.5 ಲಕ್ಷ ಜನರಿಗೆ ಕುಡಿಯುವ ನೀರು ಲಭ್ಯವಾಗುವಂತೆ ಮಾಡಿದೆ ಎಂದಿದ್ದಾರೆ. ಜೊತೆಗೆ ನವೀಕರಿಸಿದ ಗ್ಯಾಜೆಟ್ ಖರೀದಿಸುವಂತೆ ಪ್ರೋತ್ಸಾಹ ನೀಡಿದೆ.

ಐಡಿಸಿ ಮತ್ತು ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಪ್ರಕಾರ, ಸುಮಾರು 25 ಮಿಲಿಯನ್ ಸ್ಮಾರ್ಟ್ ಫೋನ್‍ಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಖರೀದಿಸಲಾಗಿದೆ. ಅವುಗಳ ಮಾರಾಟ 2025ರ ವೇಳೆಗೆ 51 ಮಿಲಿಯನ್ ಯೂನಿಟ್ ಗಳಿಗೆ ಏರುವ ನಿರೀಕ್ಷೆ ಇದೆ ಎಂದಿದೆ.

ಮೈಕ್ರೋಚಿಪ್ ತಯಾರಿಕೆ, ಲೋಹಗಳು, ಇತರ ಕಚ್ಚಾ ವಸ್ತುಗಳನ್ನು ರೂಪಿಸಲು, ಬ್ಯಾಟರಿ ತಯಾರಿಸಲು, ಟಚ್ ಸ್ಕ್ರೀನ್‍ಗೆ ಹೊಳಪು ನೀಡಲು ಭಾರೀ ಪ್ರಮಾಣದ ನೀರು ಬೇಕಾಗುತ್ತದೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *