
ಮುರುಘಾಶ್ರೀಗೆ ತಪ್ಪದ ಪೊಕ್ಸೊ ಕಂಟಕ – ಎರಡನೇ ಪ್ರಕರಣದಲ್ಲಿ ಜೈಲಿಂದ ಹೊರಬಂದ ನಾಲ್ಕೇ ದಿನಕ್ಕೆ ಮತ್ತೆ ಬಂಧನ
- ಕರ್ನಾಟಕ
- November 20, 2023
- No Comment
- 35
ನ್ಯೂಸ್ ಆ್ಯರೋ : ಹಾಸ್ಟೆಲ್ ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ 2ನೇ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶ್ರೀ ಶಿವಮೂರ್ತಿ ಶರಣರನ್ನು ಮತ್ತೆ ಬಂಧಿಸಲಾಗಿದೆ.
ಮೊದಲ ಪ್ರಕರಣದಲ್ಲಿ ನವೆಂಬರ್ 16 ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮುರುಘಾ ಶ್ರೀಗಳು, ಬಿಡುಗಡೆಯಾದ ನಾಲ್ವೇ ದಿನಕ್ಕೆ ಮತ್ತೆ ಜೈಲು ಸೇರುವಂತಾಗಿದೆ.
ಎರಡನೇ ಪೋಕೋ ಪ್ರಕರಣದಲ್ಲಿ ಚಿತ್ರದುರ್ಗ ನ್ಯಾಯಾಲಯದ ಅರೆಸ್ಟ್ ವಾರೆಂಟ್ ಜಾರಿ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಮುರುಘಾಶ್ರಿಯನ್ನು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.
2022 ಅಕ್ಟೋಬರ್ 13ರಂದು ಮುರುಘಾಶ್ರೀ ವಿರುದ್ಧ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಎರಡನೇ ಪೋಕೋ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.