ಉಡುಪಿ : ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ – ಕೊಲೆಯ ಬಳಿಕ ಬಟ್ಟೆ ಸುಟ್ಟು ಹಾಕಿದ್ದ ಹಂತಕ, ಪತಿಯ ಬಗ್ಗೆ ಪತ್ನಿಗೂ ಮೂಡಿತ್ತು ಅನುಮಾನ..!

ಉಡುಪಿ : ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ – ಕೊಲೆಯ ಬಳಿಕ ಬಟ್ಟೆ ಸುಟ್ಟು ಹಾಕಿದ್ದ ಹಂತಕ, ಪತಿಯ ಬಗ್ಗೆ ಪತ್ನಿಗೂ ಮೂಡಿತ್ತು ಅನುಮಾನ..!

ನ್ಯೂಸ್ ಆ್ಯರೋ : ಉಡುಪಿಯ ನೇಜಾರಿನಲ್ಲಿ ಮನೆಯೊಂದರಲ್ಲಿ ನ.12 ರ ಮುಂಜಾನೆ ವೇಳೆ ತಾಯಿ ಹಾಗೂ ಮೂವರು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿರುವ ಕಿರಾತಕ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕ್ಯಾಬಿನ್‌ ಕ್ರೂ ಪ್ರವೀಣ್‌ ಅರುಣ್‌ ಚೌಗುಲೆ (39) ಕೃತ್ಯ ನಡೆಸಿ ರಕ್ತಸಿಕ್ತ ಬಟ್ಟೆಯಲ್ಲೇ ಸ್ಥಳದಿಂದ ಪರಾರಿಯಾಗಿದ್ದು, ಆ ಬಟ್ಟೆಯನ್ನು ಮಂಗಳೂರು ತೆರಳುವ ಮಾರ್ಗ ಮಧ್ಯೆ ಸುಟ್ಟು ಹಾಕಿ ಸಾಕ್ಷ್ಯನಾಶ ನಡೆಸಿರುವುದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ.

ಕೊಲೆ ಕೃತ್ಯಕ್ಕೂ ಮುನ್ನ ಹೆಜಮಾಡಿ ಟೋಲ್‌ನಿಂದ ಆಚೆಗೆ ಕಾರು ನಿಲ್ಲಿಸಿದ್ದ ಹಂತಕ ಪ್ರವೀಣ್‌ ನೇಜಾರಿನಿಂದ ಪರಾರಿಯಾಗಿ ಬಂದು ತನ್ನ ಕಾರು ಏರಿ ಮಂಗಳೂರಿನತ್ತ ಹೊರಟಿದ್ದ. ರಕ್ತಸಿಕ್ತ ಬಟ್ಟೆಯಲ್ಲೇ ಮನೆಗೆ ಹೋದರೆ ಪತ್ನಿಗೆ ಅನುಮಾನ ಬರುವ ಹಿನ್ನೆಲೆಯಲ್ಲಿ ಹಾಗೂ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಮಂಗಳೂರಿಗೆ ತೆರಳುವ ಮುನ್ನವೇ ಸುರಕ್ಷಿತ ಜಾಗ ನೋಡಿಕೊಂಡು ಕೃತ್ಯದ ವೇಳೆ ತಾನು ಧರಿಸಿದ್ದ ಬಟ್ಟೆಯನ್ನು ಬಿಚ್ಚಿ ಸುರತ್ಕಲ್ ಸಮೀಪ ಸುಟ್ಟು ಹಾಕಿದ್ದ ಬಗ್ಗೆ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.

ನ.20 ರಂದು ತನಿಖಾ ತಂಡಕ್ಕೆ ಈ ಸ್ಥಳ ತೋರಿಸುವುದಾಗಿ ಒಪ್ಪಿಕೊಂಡಿದ್ದು, ಸ್ಥಳ ಮಹಜರು ಮಾಡಲಾಗುತ್ತದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.‌ ಅಲ್ಲದೇ ನೇಜಾರಿನ ಈ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರ ತನಿಖಾ ತಂಡ ಮಹತ್ವದ ಸಾಕ್ಷಿಯಾಗಿದ್ದ ಚೂರಿಯನ್ನು ನ.18 ರಂದು ಮಂಗಳೂರಿನ ಬಿಜೈ ಫ್ಲ್ಯಾಟ್‌ನಿಂದ ವಶಕ್ಕೆ ಪಡೆಯಲಾಗಿತ್ತು.

ಹಂತಕ ಪ್ರವೀಣ್‌ ಅರುಣ್‌ ಚೌಗುಲೆಯ ನಡೆ, ಚಲನ ವಲನದ ಗಮನಿಸುತ್ತಿದ್ದ ಪತ್ನಿಗೆ ತನ್ನ ಪತಿಗೆ ಬೇರೊಂದು ಯುವತಿ ಜತೆಯಲ್ಲಿ ಪ್ರೇಮ ಬೆಳೆದಿರುವ ಬಗ್ಗೆ ಕೆಲ ಸಮಯಗಳಿಂದ ಅನುಮಾನವಿತ್ತೆಂದು ತಿಳಿದು ಬಂದಿದೆ. ಆದರೆ ಯಾವ ಯುವತಿ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಪತಿ ತನ್ನ ಜತೆಗೆ ಒಳ್ಳೆಯವನಂತೆ ವರ್ತಿಸುತ್ತಿದ್ದ. ನಾಲ್ವರನ್ನು ಕೊಲೆ ಮಾಡಿ ಮನೆಗೆ ಬಂದರೂ ಪತ್ನಿಗೆ ಪತಿ ಹಂತಕ ಎನ್ನುವ ಬಗ್ಗೆ ಕಿಂಚಿತ್ತೂ ಅನುಮಾನವೇ ಬಂದಿರಲಿಲ್ಲ. ಈ ಬಗ್ಗೆ ಪತ್ನಿಯೇ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ದಿನ ನ.12ರಂದು ಬೆಳಗ್ಗೆ ಕೆಲಸದ ಸಮಯಕ್ಕಿಂತಲೂ ಬೇಗನೇ ಮನೆಯಿಂದ ಹೊರಟು ಹೋಗಿದ್ದ. ಎಲ್ಲಿಗೆ ಹೋಗುತ್ತೇನೆ ಎನ್ನುವ ಮಾಹಿತಿಯನ್ನು ಪತ್ನಿಗೆ ಹೇಳಿರಲಿಲ್ಲ. ಕೊಲೆಗೈದು ಮನೆಗೆ ಬಂದು ತನ್ನ ಕೈಗೆ ಆಗಿರುವ ಗಾಯದ ಬಗ್ಗೆಯೂ ಹೇಳಿಕೊಂಡಿರಲಿಲ್ಲ. ಕೈಯ ಗಾಯವನ್ನು ಮುಚ್ಚಿಟ್ಟಿದ್ದ ಎನ್ನಲಾಗಿದೆ.

ಕೃತ್ಯ ಎಸಗಿ ಮನೆಗೆ ಹೋದ ಆರೋಪಿ ಪ್ರವೀಣ್, ಮನೆಯಲ್ಲಿ ತನ್ನ ಎಲ್ಲ ರಕ್ತದ ಕಲೆಗಳನ್ನು ಶುಚಿಗೊಳಿಸಿದನು. ಸುಮಾರು 10 ನಿಮಿಷಗಳ ಕಾಲ ಮನೆಯಲ್ಲಿದ್ದು, ಬಳಿಕ ಕೃತ್ಯ ಎಸಗಿದ ವೇಳೆ ಗಾಯಗೊಂಡ ಕೈಯಲ್ಲಿನ ಬೆರಳಿಗೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಿದ್ದ ಎನ್ನಲಾಗಿದೆ.

ಅಲ್ಲಿ ತನ್ನ ಬೆರಳಿನ ಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡ ಆತ, ಮತ್ತೆ ಮನೆಗೆ ಬಂದಿದ್ದಾನೆ. ಮನೆಯಿಂದ ತನ್ನ ಪತ್ನಿ ಮತ್ತು ಮಕ್ಕಳನ್ನು ಕಾರಿನಲ್ಲಿ ಹೊರಗೆ ವಿಹಾರಕ್ಕೆ ಕರೆದುಕೊಂಡು ಹೊರಗಡೆ ಸುತ್ತಾಡಿ ಸಂಜೆ 6ರ ಸುಮಾರಿಗೆ ಮತ್ತೆ ಮನೆಗೆ ಬರುತ್ತಾನೆ. ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆಗೈದು ಎಂಟು ಗಂಟೆ ಕಳೆದರೂ ಆರೋಪಿ ಯಾವುದೇ ರೀತಿಯ ಪಾಶ್ಚತ್ತಾಪ ಇಲ್ಲದೆ ಮಾಮೂಲಿಯಂತೆ ಮನೆಯವರೊಂದಿಗೆ ಬೆರೆತುಕೊಂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಬ್ಬದ ಪ್ರಯುಕ್ತ ಎರಡು ದಿನ ರಜೆ ಇದೆ ಎಂದು ಹೇಳಿ ಕೊಲೆಗೈದ ಮರು ದಿನ ಅಂದರೆ ನ.13ರಂದು ಬೆಳಗಾವಿಯ ಕುಡುಚಿಗೆ ಕುಟುಂಬದೊಂದಿಗೆ ಹೊರಡಲು ಯೋಜನೆ ಹಾಕಿಕೊಂಡಿದ್ದನು. ಅದರಂತೆ ಮರುದಿನ ಆತ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಬೆಳಗಾವಿಯ ಕುಡುಚಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದನು. ಅಲ್ಲಿ ತನ್ನ ಸಂಬಂಧಿ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ದೀಪಾವಳಿ ಆಚರಿಸಿದ್ದನು.

ಇತ್ತ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈತನೇ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಸಮಯಕ್ಕೆ ಆತ ಅಲ್ಲಿ ತನ್ನ ಮೊಬೈಲ್ ಸ್ವಿಚ್ ಆನ್ ಮಾಡುತ್ತಾನೆ. ಇದರಿಂದ ಆತ ಇರುವ ಜಾಡನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅರುಣ್‌ ಚೌಗುಲೆ ಕುಟುಂಬ ಮಹಾರಾಷ್ಟ್ರದಲ್ಲಿದ್ದು, ಈತ ಅಲ್ಲಿ ಪೊಲೀಸ್‌ ಇಲಾಖೆಯಲ್ಲೂ ಕೆಲ ಸಮಯ ಕರ್ತವ್ಯ ನಿರ್ವಹಿಸಿದ್ದ. ಈತನ ಹತ್ತಿರದ ಸಂಬಂಧಿಕರು ಈಗಲೂ ಸೇನೆಯಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತ ಮಾತ್ರ ವಿಚಿತ್ರ ಮನಸ್ಥಿತಿ ಹೊಂದಿದ್ದು, ತನ್ನ ಪತ್ನಿಯನ್ನೂ ಅನುಮಾನ ದೃಷ್ಟಿಯಿಂದ ನೋಡುತ್ತಿದ್ದ. ಮನೆಯಲ್ಲಿ ಚಹಾ ಹುಡಿ, ಸಕ್ಕರೆ ಮುಗಿದರೂ ಅಂಗಡಿಗೆ ಹೋಗಿ ಅದನ್ನು ತರುವ ಸ್ವಾತಂತ್ರ್ಯ ಪತ್ನಿಗೆ ಇರಲಿಲ್ಲವಂತೆ.

ಆತ ಡ್ಯೂಟಿ ಮುಗಿಸಿ ಬಂದ ಬಳಿಕ ಪತ್ನಿ ಜತೆ ಹೋಗಿ ಸಾಮಗ್ರಿ ಖರೀದಿಸುತ್ತಿದ್ದ. ಪತ್ನಿ ಮಹಾರಾಷ್ಟ್ರದ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳಾಗಿದ್ದು, ಪತಿಯ ಹಿಂಸೆಗೆ ಪ್ರತಿರೋಧ ತೋರದೆ ಹೊಂದಾಣಿಕೆ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದಳು. ಆದರೆ ಅನುಮಾನ ಪಿಶಾಚಿಯಾಗಿದ್ದ ಚೌಗುಲೆ ಸಣ್ಣ ಪುಟ್ಟ ವಿಷಯಗಳಲ್ಲೂ ಕ್ರೋಧಗೊಂಡು ಎರಡು ಬಾರಿ ತನ್ನ ಪತ್ನಿಯ ಕೊಲೆ ಮಾಡಲು ಮುಂದಾಗಿದ್ದ.ಆದ್ರೆ ಉದ್ಯೋಗ ತೆಗೆಸಿಕೊಡುವುದು, ತುರ್ತು ಸಂದರ್ಭಗಳಲ್ಲಿ ಪರರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದ. ಇದರಿಂದಾಗಿ ಆತನ ಬಗ್ಗೆ ಯಾರಿಗೂ ಕೆಟ್ಟ ಭಾವನೆಯೇ ಇರಲಿಲ್ಲ.

ಇದೇ ರೀತಿ ಉಡುಪಿ ನೇಜಾರಿನ ಅಯ್ನಾಝ್‌ ಕುಟುಂಬಕ್ಕೂ ಸಹಾಯ ಮಾಡಿರುವ ಅನುಮಾನವಿದ್ದು, ತನಿಖೆಯಿಂದ ತಿಳಿದು ಬರಬೇಕಿದೆ. ನೇಜಾರಿನ ಮನೆಗೂ ಹೋಗಿದ್ದ ಈತ ಅಯ್ನಾಝ್‌ಳನ್ನು ತುಂಬಾ ಹಚ್ಚಿಕೊಂಡಿದ್ದ. ಈತನ ದೈನಂದಿನ ಚಟುವಟಿಕೆಗಳನ್ನು ಆಕೆಯೊಂದಿಗೆ ಶೇರ್‌ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇದುವೇ ಆಕೆ ಮತ್ತು ಆಕೆಯ ಕುಟುಂಬಿಕರ ಕೊಲೆಗೆ ಕಾರಣವಾಯಿತು ಎನ್ನಲಾಗಿದೆ.

ಉದ್ಯೋಗಕ್ಕೆ ಹೊಸದಾಗಿ ಸೇರಿಕೊಂಡಿದ್ದ ಅಯ್ನಾಝ್ ಏರ್ ಇಂಡಿಯಾದಲ್ಲಿ ಹಿರಿಯ ಸಿಬಂದಿಯಾಗಿದ್ದ ಚೌಗಲೆಯಿಂದ ಸಾಕಷ್ಟು ಕಲಿತಿದ್ದಳು ಮತ್ತು ಸಹಜವಾಗಿಯೇ ತೀರ ಆತ್ಮೀಯತೆಯಿಂದ ಇದ್ದಳು. ಇದೇ ಆಕೆಯ ಜೀವಕ್ಕೆ ಮುಳುವಾಗಿತ್ತು. ಅಯ್ನಾಝ್ ಳನ್ನು ಹೆಚ್ಚಾಗಿಯೇ ಹಚ್ಚಿಕೊಂಡಿದ್ದ ಪ್ರವೀಣ್ ಚೌಗಲೆ ಆಕೆಯನ್ನು ಪ್ರೀತಿಸ ತೊಡಗಿದ್ದ. ಎಲ್ಲವನ್ನು ಅಯ್ನಾಝ್ ಅವಳೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದ ಇವನ ಪ್ರೀತಿಯ ಬಲೆಗೆ ಬೀಳದೆ ಅಯ್ನಾಝ್ ನೇರವಾಗಿ ನಿರಾಕರಿಸಿದ್ದಳು.

ಇದು ದಿನ ಹೋದಂತೆ ಜಿದ್ದಾ ಜಿದ್ದಿಗೆ ಬಿದ್ದ ಪ್ರವೀಣ್ ಅಯ್ನಾಝ್ ಪ್ರೀತಿಗೆ ದುಂಬಾಲು ಬಿದ್ದಿದ್ದ, ಯಾವಾಗ ಅಯ್ನಾಝ್ ನೇರವಾಗಿ ತಿರಸ್ಕಾರಿದ್ದಳೋ ಆದಾಗಲೇ ದ್ವೇ಼ಷ ಸಾಧನೆಗೆ ಮುಂದಾಗಿದ್ದ ಅದೇ ಮುಂದೆ ಅಯ್ನಾಝ್ ಮತ್ತು ಕುಟುಂಬದ ಸದಸ್ಯರ ಕೊಲೆಗೆ ಕಾರಣವಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *