
ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಢ – ಧಗ ಧಗ ಹೊತ್ತಿ ಉರಿದ 3 ಅಂತಸ್ತಿನ ಕಟ್ಟಡ, 1 ಕೋಟಿ ಸುಡುಮದ್ದು ಭಸ್ಮ
- ಕರ್ನಾಟಕ
- August 29, 2023
- No Comment
- 55
ನ್ಯೂಸ್ ಆ್ಯರೋ : ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿಯ ಬೃಹತ್ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದಿದ್ದು, ಅದೃಷ್ಟವಶಾತ್ ಕೆಲಸ ಮಾಡುತ್ತಿದ್ದ 6 ಮಂದಿ ಪಾರಾಗಿದ್ದಾರೆ.
1 ಕೋಟಿ ರೂ. ಮೌಲ್ಯದ ಸುಡುಮದ್ದು
ಘಟನೆಯಲ್ಲಿ ಸುಮಾರು 1 ಕೋಟಿ ರೂ. ಬೆಲೆಯ ಸುಡುಮದ್ದು ಭಸ್ಮವಾಗಿದೆ. ಸಿ.ವಿ.ವೀರೇಶ್ ಎಂಬರಿಗೆ ಸೇರಿದ ಭೂಮಿಕಾ ಟ್ರೇಡರ್ಸ್ ಗೋದಾಮಿನಲ್ಲಿ ವೆಲ್ಡಿಂಗ್ ಮಾಡುವಾಗ ಈ ಅವಘಢ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ಶಿವಕಾಶಿಯಿಂದ ತಂದಿದ್ದ ಸುಡುಮದ್ದನ್ನು ಈ ಮೂರು ಅಂತಸ್ತಿನ ಗೋಡೌನ್ ನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆಳೆತ್ತರದ ಹೊಗೆ ರಾಶಿ ಕಂಡು ಬಂದು ಜನರಲ್ಲಿ ಆತಂಕ ಮೂಡಿತ್ತು.
ಬೆಂಕಿ ನಂದಿಸುವಾಗಲೂ ಸುಡುಮದ್ದು ಸಿಡಿದಿದ್ದು, ಜೀವ ಉಳಿಸಿಕೊಳ್ಳಲು ಅಗ್ನಿಶಾಮಕ ದಳದ ಸಿಬ್ಬಂದಿ ದೂರ ತೆರಳಿದ್ದರು. ಸುರಕ್ಷತೆ ದೃಷ್ಟಿಯಿಂದ ಹಾನಗಲ್-ಹಾವೇರಿ ರಾಷ್ಟ್ರೀಯ ಹೆದ್ದಾರಿಯನ್ನು ಕೆಲವು ಹೊತ್ತು ಬಂದ್ ಮಾಡಲಾಗಿತ್ತು