ಐಪಿಎಲ್‌ ಆರಂಭಕ್ಕೆ ದಿನಗಣನೆ ಶುರು, ಕ್ರಿಕೆಟ್‌ಪ್ರೇಮಿಗಳಿಗೆ ಗುಡ್‌ನ್ಯೂಸ್‌ ನೀಡಿದ ರಿಲಯನ್ಸ್ – 4ಕೆ ಅಲ್ಟ್ರಾ ಹೆಚ್‌ಡಿ ಗುಣಮಟ್ಟದಲ್ಲಿ ಉಚಿತ ನೇರಪ್ರಸಾರ

ಐಪಿಎಲ್‌ ಆರಂಭಕ್ಕೆ ದಿನಗಣನೆ ಶುರು, ಕ್ರಿಕೆಟ್‌ಪ್ರೇಮಿಗಳಿಗೆ ಗುಡ್‌ನ್ಯೂಸ್‌ ನೀಡಿದ ರಿಲಯನ್ಸ್ – 4ಕೆ ಅಲ್ಟ್ರಾ ಹೆಚ್‌ಡಿ ಗುಣಮಟ್ಟದಲ್ಲಿ ಉಚಿತ ನೇರಪ್ರಸಾರ

ನ್ಯೂಸ್‌ ಆ್ಯರೋ : ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌. ಭಾರತದಲ್ಲಿ ಈ ಹಿಂದೆ ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಗಳಲ್ಲಿ ಮಾತ್ರ ಐಪಿಎಲ್ ಪಂದ್ಯಗಳ ನೇರಪ್ರಸಾರಕ್ಕೆ ಅವಕಾಶವಿತ್ತು. ಅದಕ್ಕೂ ಚಂದಾದಾರಿಕೆ ಪಡೆಯಬೇಕಿತ್ತು. ಆದರೆ, ಈ ಬಾರಿಯ ಐಪಿಎಲ್‌ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ ಮೂಲಕ ಉಚಿತವಾಗಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಜಿಯೊ ಸಿನಿಮಾದಲ್ಲಿ ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ. ಟೆಲಿಕಾಂ ದೈತ್ಯ ಕಂಪೆನಿ ರಿಲಯನ್ಸ್ ಜಿಯೋ ಈ ಬಗ್ಗೆ ದೃಢಪಡಿಸಿದೆ.

ಕಂಪೆನಿಯು ಮಾಧ್ಯಮಗಳಿಗೆ ನೀಡಿದ ಈ ಕುರಿತಾದ ಜಾಹೀರಾತುಗಳು ಕೂಡಾ ಭಾರೀ ಸದ್ದು ಮಾಡುತ್ತಿದೆ. ಇದೇ 31ರಂದು ಐಪಿಎಲ್‌ 2023ರ ಆವೃತ್ತಿಯ ಪಂದ್ಯಗಳು ಆರಂಭಗೊಳ್ಳುತ್ತಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಹಣಾಹಣಿ ನಡೆಸಲಿವೆ.

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಅನ್ನು ನೀವು ಈ ಬಾರಿ ವಿಶೇಷ ಅನುಭವದೊಂದಿಗೆ ವೀಕ್ಷಿಸಬಹುದು. ಅಂದರೆ, ಗುಣಮಟ್ಟದ ವಿಡಿಯೋವನ್ನು ನೀವು ಕಣ್ತುಂಬಿಕೊಳ್ಳಬಹುದು. ಐಪಿಎಲ್‌ ಪಂದ್ಯಗಳನ್ನು 4ಕೆ ಅಲ್ಟ್ರಾ ಎಚ್‌ಡಿ ಗುಣಮಟ್ಟದೊಂದಿಗೆ ಆನ್‌ಲೈನ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಅಷ್ಟೊಂದು ಕ್ವಾಲಿಟಿಯನ್ನು ಒಳಗೊಂಡ ಲೈವ್‌ ದೃಶ್ಯಗಳನ್ನು ಜಿಯೋ ತನ್ನ ಗ್ರಾಹಕರಿಗೆ ಕೊಡುಗೆಯಾಗಿ ನೀಡುತ್ತಿದೆ.

ಜಿಯೋ ಸಿನಿಮಾ ತನ್ನ ವೀಕ್ಷಕರಿಗೆ, ಐಪಿಎಲ್‌ನ ಎಲ್ಲಾ 74 ಪಂದ್ಯಗಳನ್ನೂ ಕೂಡಾ ವೀಕ್ಷಣೆಗಳನ್ನು ಆಯ್ಕೆ ಮಾಡಲು ಅನುಮತಿ ನೀಡುತ್ತದೆ. ಕಳೆದ ವರ್ಷ ನಡೆದ ಫಿಫಾ ವಿಶ್ವಕಪ್ ಪಂದ್ಯಗಳಲ್ಲೂ ಈ ಮಲ್ಟಿಕ್ಯಾಮರಾ ಆಯ್ಕೆ ನೀಡಲಾಗಿತ್ತು.

ಜಿಯೋ ಫೋನ್‌ನಲ್ಲಿ ಈಗಾಗಲೇ ಜಿಯೋ ಸಿನಿಮಾ ಅಪ್ಲಿಕೇಶನ್‌ ಇರುವುದರಿಂದ ಬಳಕೆದಾರರು ಅದರಲ್ಲಿ ಐಪಿಎಲ್ ಉಚಿತವಾಗಿ ವೀಕ್ಷಿಸಬಹುದು. ಬೇರೆ ಬೇರೆ ಫೋನ್‌ ಬಳಸುವವರು ಪ್ಲೇ ಸ್ಟೋರ್‌ ಮೂಲಕ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇದೇ ವೇಳೆ ದೊಡ್ಡ ದೊಡ್ಡ ಪರದೆಯಲ್ಲಿ ಆಟವನ್ನು ವೀಕ್ಷಿಸುವವರು ಕೂಡಾ, ಪಂದ್ಯದ ಸ್ಕೋರ್ ಮತ್ತು ಮೈದಾನದ ಹೀಟ್ ಮ್ಯಾಪ್ ಅನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇಂಗ್ಲಿಷ್, ಕನ್ನಡ, ತಮಿಳು, ಹಿಂದಿ, ತೆಲುಗು, ಮರಾಠಿ, ಗುಜರಾತಿ, ಬೆಂಗಾಲಿ ಮತ್ತು ಭೋಜ್‌ಪುರಿ ಸೇರಿದಂತೆ ಒಟ್ಟು ಹನ್ನೆರಡು ವಿಭಿನ್ನ ಭಾಷೆಗಳ ಕಾಮೆಂಟರಿಯೊಂದಿಗೆ ಜಿಯೋ ಸಿನಿಮಾ ಮೂಲಕ ಪಂದ್ಯಗಳ ಲೈವ್ ಸ್ಟ್ರೀಮಿಂಗ್‌ ಲಭ್ಯವಿರುತ್ತವೆ. ನೀವು ಭಾಷೆ ಬದಲಾಯಿಸಿದಾಗ, ಸ್ಕ್ರೀನ್‌ನಲ್ಲಿ ಕಾಣುವ ಎಲ್ಲಾ ಅಂಶಗಳು ಅದೇ ಭಾಷೆಗೆ ಬದಲಾಗುತ್ತದೆ. ಸ್ಕೋರ್‌ಕಾರ್ಡ್, ಡೇಟಾ, ಗ್ರಾಫ್ ಎಲ್ಲವೂ ಬಳಕೆದಾರರು ಆಯ್ಕೆ ಮಾಡುವ ಭಾಷೆಯಲ್ಲೇ ಕಾಣಿಸುತ್ತದೆ.

ಹೆಚ್‌ಡಿಎಂಐ ಪೋರ್ಟ್‌ಗಳಿಲ್ಲದ ಹಳೆಯ ಟಿವಿ ಹೊಂದಿರುವ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪಂದ್ಯಗಳನ್ನು ವೀಕ್ಷಿಸಲು ಅನುಮತಿಸುವ ಬಹುನಿರೀಕ್ಷಿತ ಜಿಯೋ ಮೀಡಿಯಾ ಕೇಬಲ್ ಕೂಡ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿದೆ.

2023ರಿಂದ 27ರವರೆಗಿನ ಐಪಿಎಲ್‌ ಪ್ರಸಾರದ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಡಿಜಿಟಲ್ ಹಕ್ಕುಗಳನ್ನು Viacom18 ಬರೋಬ್ಬರಿ 23,758 ಕೋಟಿ ರೂಪಾಯಿಗೆ ಖರೀದಿಸಿದರೆ, ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ 23,575 ಕೋಟಿ ರೂಪಾಯಿಗೆ ಟಿವಿ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *