ಏಪ್ರಿಲ್ 1 ರಿಂದ ಹಲವು ವಸ್ತುಗಳು ಅಗ್ಗ, ಮತ್ತೆ ಕೆಲವು ದುಬಾರಿ – ಈ ಪಟ್ಟಿಯಲ್ಲಿ ಇರುವ ಅಗತ್ಯ ವಸ್ತುಗಳು ಯಾವುವು ಗೊತ್ತಾ?

ಏಪ್ರಿಲ್ 1 ರಿಂದ ಹಲವು ವಸ್ತುಗಳು ಅಗ್ಗ, ಮತ್ತೆ ಕೆಲವು ದುಬಾರಿ – ಈ ಪಟ್ಟಿಯಲ್ಲಿ ಇರುವ ಅಗತ್ಯ ವಸ್ತುಗಳು ಯಾವುವು ಗೊತ್ತಾ?

ನ್ಯೂಸ್‌ ಆ್ಯರೋ : ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಂತೆ ಏಪ್ರಿಲ್‌ 1ರಿಂದ ಹಲವು ವಸ್ತುಗಳ ಅಗ್ಗವಾಗಲಿದೆ. ಮತ್ತೆ ಕೆಲವು ವಸ್ತುಗಳು ದುಬಾರಿಯಾಗಿವೆ.

ಖಾಸಗಿ ವಿಮಾನಗಳು, ಹೆಲಿಕಾಪ್ಟರ್‌ಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್ ವಸ್ತುಗಳು, ಆಭರಣಗಳು, ಹೈ-ಗ್ಲಾಸ್ ಪೇಪರ್ ಮತ್ತು ವಿಟಮಿನ್‌ಗಳ ದರವು ಏರಿಕೆಯಾಗಲಿದ್ದು, ಈ ನಿಯಮ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕ್ಯಾಮೆರಾ ಲೆನ್ಸ್ ಮತ್ತು ಸ್ಮಾರ್ಟ್‌ಫೋನ್‌ಗಳಂತಹ ವಸ್ತುಗಳು ಏಪ್ರಿಲ್ 1 ರಿಂದ ದರವು ಕಡಿಮೆಯಾಗಲಿದೆ. ಮತ್ತೊಂದೆಡೆ ಎಲೆಕ್ಟ್ರಿಕ್ ಕಿಚನ್ ಚಿಮಣಿಗಳು ಮತ್ತು ಚಿನ್ನ, ಪ್ಲಾಟಿನಂ ವಸ್ತುಗಳ ಬೆಲೆಯಲ್ಲಿ ದರ ಏರಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ 2023ರ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಘೋಷಿಸಿದ್ದರು.

ಬಟ್ಟೆ, ಮಸ್ಸೆಲ್ಸ್, ಕೋಕೋ ಬೀನ್ಸ್ ಮೇಲಿನ ಕಸ್ಟಮ್ಸ್ ತೆರಿಗೆಯನ್ನು ಕಡಿಮೆ ಮಾಡಲು ಕೇಂದ್ರ ನಿರ್ಧಾರ ಮಾಡಿದೆ. ಜೊತೆಗೆ, ಕೇಂದ್ರ ಸರ್ಕಾರವು ಅಸಿಟಿಕ್ ಆಮ್ಲ, ಕತ್ತರಿಸಿ ಪಾಲಿಶ್ ಮಾಡಿದ ವಜ್ರಗಳು, ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲು ಬಳಸುವ ರಾಸಾಯನಿಕಗಳು ಮತ್ತು ಸೆಲ್ ಫೋನ್‌ಗಳಿಗೆ ಕ್ಯಾಮೆರಾ ಲೆನ್ಸ್‌ಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡಿದೆ. ಇದು ಏ.1ರಿಂದ ಅನ್ವಯವಾಗಲಿದೆ.

ಇತ್ತೀಚಿನ ಬಜೆಟ್‌ನಲ್ಲಿ ಹಲವಾರು ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಇದು ಬಜೆಟ್ ಜವಾಬ್ದಾರಿಯ ಬಗ್ಗೆ ತಿಳಿಸುವಾಗ ದೀರ್ಘಕಾಲಿಕ ಬೆಳವಣಿಗೆಯ ಕಾರ್ಯತಂತ್ರವನ್ನು ರೂಪಿಸುವ ಸರ್ಕಾರದ ಉದ್ದೇಶದೊಂದಿಗೆ ಸ್ಥಿರವಾಗಿದೆ. ಅಡುಗೆಮನೆಯ ಎಲೆಕ್ಟ್ರಿಕ್ ಚಿಮಣಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 7.5 ರಿಂದ ಶೇ 15ಕ್ಕೆ ಏರಿಸಲಾಗಿದೆ.

ದುಬಾರಿಯಾಗಲಿರುವ ವಸ್ತುಗಳು:

ಮನೆಯಲ್ಲಿನ ಎಲೆಕ್ಟ್ರಾನಿಕ್ ಚಿಮಣಿಗಳು, ಆಭರಣ, ಆಮದು ಮಾಡಿಕೊಳ್ಳುವ ಸರಕುಗಳು, ಸಿಗರೇಟ್, ಚಿನ್ನ, ಪ್ಲಾಟಿನಂ, ಬೆಳ್ಳಿ ಪಾತ್ರೆಗಳು

ಅಗ್ಗವಾಗಲಿರುವ ವಸ್ತುಗಳು: ಆಟಿಕೆಗಳು, ಬೈಸಿಕಲ್‌ಗಳು, ಟಿ.ವಿ, ಮೊಬೈಲ್‌ಗಳು, ಎಲೆಕ್ಟ್ರಿಕ್ ವಾಹನಗಳು, ಎಲ್‌ಇಡಿ ಟಿವಿ, ಕ್ಯಾಮೆರಾ ಲೆನ್ಸ್‌ಗಳು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *