Paneer Biryani Recipe : ಬೆಳಗಿನ ಉಪಹಾರಕ್ಕೆ ಮಾಡಿ ರುಚಿಕರ ಪನೀರ್ ಬಿರಿಯಾನಿ -ಮಾಡೋದು ಹೇಗೆ ಅಂತೀರಾ…?ಇಲ್ಲಿದೆ ಮಾಹಿತಿ..

Paneer Biryani Recipe : ಬೆಳಗಿನ ಉಪಹಾರಕ್ಕೆ ಮಾಡಿ ರುಚಿಕರ ಪನೀರ್ ಬಿರಿಯಾನಿ -ಮಾಡೋದು ಹೇಗೆ ಅಂತೀರಾ…?ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ಬೆಳಗಿನ ಉಪಹಾರಕ್ಕೆ ಏನ್ ಮಾಡೋದು ಅಂತ ಚಿಂತೆನಾ ಅದೇ ದೋಸೆ, ಉಪ್ಪಿಟ್ಟು, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ? ಹಾಗಾದ್ರೆ ಪನೀರ್ ಬಿರಿಯಾನಿ ಒಮ್ಮೆ ಟ್ರೈ ಮಾಡಿ.

ಬೆಳಗಿನ ಉಪಹಾರಕ್ಕೆ ಇದನ್ನು ಮಾಡಲು ಸ್ವಲ್ಪ ಸಮಯವಂತೂ ಬೇಕೆ ಬೇಕು. ಆದ್ರೆ ಮಧ್ಯಾಹ್ನದವರೆಗೂ ಹಸಿವಾಗದಂತೆ ಇರಿಸುವ ಮತ್ತು ಶಕ್ತಿಯನ್ನು ನೀಡುವ ತಿಂಡಿ ಅಂದ್ರೆ ಅದು ಪನೀರ್ ಬಿರಿಯಾನಿಯಾಗಿದೆ. ಮನೆಯಲ್ಲೇ ಪನೀರ್ ಬಿರಿಯಾನಿಯನ್ನು ಸುಲಭವಾಗಿ ಹೇಗೆ ಮಾಡೋದು ಅನ್ನೋದನ್ನು ಹೇಳ್ತೇವೆ, ತಿಳಿದು ಟ್ರೈ ಮಾಡಿ..

ಅಗತ್ಯವಿರುವ ಸಾಮಾಗ್ರಿಗಳು

  • ತುಂಡು ಮಾಡಿದ ಪನ್ನೀರ್ – 300ಗ್ರಾಂ
  • ಅಕ್ಕಿ – 1.ಕೆಜಿ (ಬಾಸ್ಮತಿ ಅಕ್ಕಿಯಾದರೆ ಉತ್ತಮ)
  • ಬೇಯಿಸಿದ ಬಟಾಣಿ ಕಾಳು – 1 ಕಪ್
  • ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಣ – 1 ದೊಡ್ಡ ಚಮಚ
  • ಮೊಸರು – 2 ಕಪ್
  • ಉದ್ದಕ್ಕೆ ಕತ್ತರಿಸಿದ ಹಸಿಮೆಣಸು- 4 (ಚಿಕ್ಕ ಗಾತ್ರದ್ದಾದರೆ 6)
  • ಅರಿಶಿನ ಪುಡಿ – ¼ ಚಿಕ್ಕ ಚಮಚ
  • ಒಣಮೆಣಸಿನ ಪುಡಿ – 1 ಚಿಕ್ಕ ಚಮಚ
  • ಗರಂ ಮಸಾಲಾ ಪುಡಿ- 1 ಚಿಕ್ಕ ಚಮಚ
  • ಏಲಕ್ಕಿ ಪುಡಿ – 2 ಚಿಕ್ಕ ಚಮಚ
  • ದಾಲ್ಚಿನ್ನಿ ಎಲೆ – 1 (ಒಣ ಎಲೆ)
  • ಕಪ್ಪು ಏಲಕ್ಕಿ – 1
  • ಲವಂಗ – 2
  • ಕಾಳುಮೆಣಸು-3ರಿಂದ 4
  • ಲಿಂಬೆಹಣ್ಣಿನ ರಸ – 1 (ಚಿಕ್ಕ ಗಾತ್ರದ ಲಿಂಬೆಯಾದರೆ 2)
  • ಕೇಸರಿ – 1 ಚಿಕ್ಕ ಚಮಚ
  • ಹಾಲು – 2 ದೊಡ್ಡ ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ (ನಯವಾಗಿ ಹೆಚ್ಚಿದ್ದು)
  • ಪುದಿನಾ ಸೊಪ್ಪಿನ ಎಲೆಗಳು- ಸ್ವಲ್ಪ (ನಯವಾಗಿ ಹೆಚ್ಚಿದ್ದು)
  • ಅಪ್ಪಟ ತುಪ್ಪ – 2 ದೊಡ್ಡ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗಿದ ಬಳಿಕ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹುರಿಯಿರಿ. ಕೆಲವು ಕ್ಷಣಗಳ ಬಳಿಕ ಪನ್ನೀರ್ ತುಂಡುಗಳನ್ನು ಸೇರಿಸಿ ಹುರಿಯಿರಿ.
  2. ಪನ್ನೀರ್‌ನ ಎಲ್ಲಾ ಬದಿಗಳು ಕೊಂಚ ನಸುಗಂದು ಬರುವವರೆಗೆ ಹುರಿಯಿರಿ. ಈಗ ದಪ್ಪತಳದ ಮತ್ತು ಅಗಲವಾದ ಪಾತ್ರೆಯೊಂದನ್ನು ಚಿಕ್ಕ ಉರಿಯ ಮೇಲಿರಿಸಿ.
  3. ಇನ್ನು ಒಂದು ಪದರ ಅಕ್ಕಿಯನ್ನು ಹರಡಿ ಅದರ ಮೇಲೆ ಹುರಿದ ಪನ್ನೀರ್ ಹರಡಿ. ಇದರ ಮೇಲೆ ಅಕ್ಕಿಯ ಇನ್ನೊಂದು ಪದರ ಹರಡಿ ಅದರ ಮೇಲೆ ಬೇಯಿಸಿದ ಬಣಾಟಿ, ಗರಂ ಮಸಾಲೆ ಪುಡಿ, ಏಲಕ್ಕಿ ಪುಡಿ, ಹಾಲು ಮತ್ತು ಕೇಸರಿ, ಕೊತ್ತಂಬರಿ ಮತ್ತು ಪುದಿನಾ ಸೊಪ್ಪು, ಹರಡಿ. ಕೊಂಚ ಕರಗಿದ ತುಪ್ಪವನ್ನು ಕೊಂಚ ಕೊಂಚವಾಗಿ ಹರಡುವಂತೆ ಚಿಮುಕಿಸಿ.
  4. ತದನಂತರ ಉಳಿದ ಎಲ್ಲಾ ಅಕ್ಕಿಯನ್ನು ಇದರ ಮೇಲೆ ಹರಡಿ ಏಕಪ್ರಕಾರವಾಗಿರುವಂತೆ ಚಪ್ಪಟೆ ಚಮಚದಲ್ಲಿ ಸವರಿ. ಈ ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.
  5. ಇಷ್ಟೆಲ್ಲಾ ಆದ ನಂತರ ಮಧ್ಯಮಕ್ಕಿಂತ ಕೊಂಚ ಕೆಳಗಿನ ಉರಿಯಲ್ಲಿ ಸುಮಾರು 10 ನಿಮಿಷ ಹಬೆಯಲ್ಲಿ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯಿಂದಿಳಿಸಿ, ಆ ಕೂಡಲೇ ಮುಚ್ಚಳ ತೆರೆಯಬೇಡಿ, ಇನ್ನೂ ಸುಮಾರು ಹತ್ತು ನಿಮಿಷ ಅಥವಾ ಹದಿನೈದು ನಿಮಿಷ ಹಾಗೆಯೇ ತಣಿಯಲು ಬಿಡಿ. ಬಿಸಿಬಿಸಿಯಿರುವಂತೆಯೇ ಬಡಿಸಿ.

Related post

ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್‌..!

ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ…

ನ್ಯೂಸ್ ಆರೋ:  ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ವೈಯಕ್ತಿಕ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಲವ್​, ಮದುವೆ, ಬ್ರೇಕಪ್ ಅಂತ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್​, ಬಾಲಿವುಡ್‌ನ ಡ್ರಾಮಾ…
ಎಂಡೊಮೆಟ್ರಿಯೊಸಿಸ್ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ..!; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬೆಡ್​ ಮೇಲಿನ ವಿಡಿಯೋ

ಎಂಡೊಮೆಟ್ರಿಯೊಸಿಸ್ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ..!; ಸಾಮಾಜಿಕ…

ನ್ಯೂಸ್ ಆ್ಯರೋ :ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವುದು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇಂದು…
ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ಆಸ್ತಿ ಎಷ್ಟು ಕೋಟಿ ಗೊತ್ತಾ?

ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್…

ನ್ಯೂಸ್ ಆ್ಯರೋ : ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಬಿರುಸಿನಿಂದ ಸಾಗಿದೆ. ಈ‌ ಬಾರಿ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್‌…

Leave a Reply

Your email address will not be published. Required fields are marked *