ಭಾನುವಾರದ ಬಾಡೂಟ ಸವಿಯಲು ಇಲ್ಲಿದೆ ಮಟನ್ ಸುಕ್ಕ ರೆಸಿಪಿ- ಮಾಡುವ ವಿಧಾನ ಇಲ್ಲಿದೆ

ಭಾನುವಾರದ ಬಾಡೂಟ ಸವಿಯಲು ಇಲ್ಲಿದೆ ಮಟನ್ ಸುಕ್ಕ ರೆಸಿಪಿ- ಮಾಡುವ ವಿಧಾನ ಇಲ್ಲಿದೆ

ನ್ಯೂಸ್ ಆ್ಯರೋ : ಭಾನುವಾರ ಬಂತು ಅಂದರೆ, ನಾನ್ ವೆಜ್ ಪ್ರಿಯರಿಗೆ ಹಬ್ಬ. ರಜೆ ದಿನ ಬೆಳ್ಳಂಬೆಳ್ಳಗೆ ಮಾಂಸದಂಗಡಿ ಮುಂದೆ ಕ್ಯೂ ನಿಂತು, ಬಿರಿಯಾನಿ ಕನಸು ಕಾಣುವುದು ಕಾಮನ್..


ಮಾಂಸಾಹಾರಿಗಳಿಗೆ ತಮಗಿಷ್ಟವಾದ ಊಟ ತಿನ್ನಲು ವಾರದ ಮಿತಿ ಇಲ್ಲದಿದ್ದರೂ ವೀಕೆಂಡ್ನಲ್ಲಿ ತಮ್ಮ ಪ್ರೀತಿಪಾತ್ರರೊಂದಿಗೆ ಕುಳಿತು ವೆರೈಟಿ ಅಡುಗೆ ಮಾಡಿ ತಿಂದರೆ ಅದರ ಮಜಾನೇ ಬೇರೆ. ಹೀಗಾಗಿ ಹೆಚ್ಚಿನ ಜನರು ಭಾನುವಾರದ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ನೆಚ್ಚಿನ ಹೋಟೆಲ್ಗಳಿಗೆ ಹೋಗಿ ವೆರೈಟಿ ವೆರೈಟಿ ಬಾಡೂಟ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರು ಮಾತ್ರ ಮನೆಯಲ್ಲಿಯೇ ಕುಳಿತು ರುಚಿರುಚಿಯಾಗಿ ವಿಭಿನ್ನವಾದ ಅಡುಗೆಗಳನ್ನು ತಯಾರಿಸಿ ತಮ್ಮ ಕುಟುಂಬದವರಿಗೂ ತಿನ್ನಿಸಿ ತಾವು ತಿಂದು ತಮ್ಮ ಭಾನುವಾರವನ್ನು ಮತ್ತಷ್ಟು ವಿಭಿನ್ನವಾಗಿಯೇ ಕಳೆಯಲು ಇಷ್ಟಪಡುತ್ತಾರೆ.

ಹೀಗಾಗಿ ಕೆಲವು ಮಾಂಸಹಾರಿ ಪ್ರಿಯರು ಹೋಟೆಲ್ ಗಳತ್ತ ಮುಖ ಮಾಡಿದರೆ, ಇನ್ನು ಕೆಲವರು ಮನೆಯಲ್ಲಿ ರುಚಿರುಚಿಯಾದ ಮಾಂಸಾಹಾರಿ ಖಾದ್ಯ ತಯಾರಿಸಲು ಮಾಂಸದ ಅಂಗಡಿಗಳತ್ತ ತೆರಳಿ ಫ್ರೆಶ್ ಆಗಿರುವ ಮಾಂಸ ತಂದು ಮನೆಯಲ್ಲಿ ಅಡುಗೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ಇಂದು ಮನೆಯಲ್ಲಿ ವಿಭಿನ್ನವಾದ ಅಡುಗೆ ಮಾಡಬೇಕು ಎಂದುಕೊಳ್ಳುತ್ತಿರುವವರು ಚಿಕನ್ ಸಾಂಬಾರ್ ಚಿಕನ್ ಬಿರಿಯಾನಿ ಬಿಟ್ಟು ಈ ವಾರ ಮನೆಯಲ್ಲಿ ರುಚಿ ರುಚಿಯಾದ ಮಟನ್ ಸುಕ್ಕಾ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ .

ಬೇಕಾಗುವ ಸಾಮಗ್ರಿಗಳು

  • ಮಟನ್ – 1ಕೆಜಿ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಚಮಚ
  • ಮೆಣಸಿನಪುಡಿ – 4 ಚಮಚ
  • ಟೊಮೆಟೋ – 4
  • ಅರಿಶಿಣ- 1 ಚಮಚ
  • ಅಡುಗೆ ಎಣ್ಣೆ – ಅರ್ಧ ಕಪ್
  • ರುಚಿಗೆ ತಕ್ಕಷ್ಟು ಉಪ್ಪು
  • ತುಪ್ಪಾ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಕಾಳು ಮೆಣಸು – ಸ್ವಲ್ಪ

ಮಾಡುವ ವಿಧಾನ

ನೀವು ಭಾನುವಾರದ ಬಾಡೂಟ ಮಾಡಲು ಮಟನ್ ಸುಕ್ಕ ಮಾಡಿಕೊಳ್ಳಲು ಅಂಗಡಿಯಿಂದ ತಂದ ಮಟನ್ ನ್ನು ಮನೆಗೆ ಬಂದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಕಾಲ ನೆನೆಸಿಡಿ. ಬಳಿಕ ಅದಕ್ಕೆ ಚಿಟಿಕೆ ಉಪ್ಪು ಹಾಗೂ ಅರಿಶಿಣ ಹಾಕಿ ಒಂದು ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಕುಕ್ಕರ್ ಗೆ ಮಟನ್ ಉಪ್ಪು ಅರಿಶಿನ ಕೊತ್ತಂಬರಿ ಸೊಪ್ಪು ಹಾಗೂ ಕೊಂಚ ತುಪ್ಪ ಸೇರಿಸಿ ನಾಲ್ಕರಿಂದ ಐದು ವಿಜಲ್ ಬರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.

ಬೆಂದ ಮಟನ್ ವಿಜಲ್ ಆರಲು ಬಿಡಿ. ನಂತರ ಮಿಕ್ಸಿಯಲ್ಲಿ ಚೆನ್ನಾಗಿ ಟೊಮೊಟೊವನ್ನು ರುಬ್ಬಿ ಇಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಕುಕ್ಕರ್ನಲ್ಲಿ ಬೇಯಿಸಿಟ್ಟುಕೊಂಡ ಮಾಂಸ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಬ್ಬಿಟ್ಟುಕೊಂಡಿದ್ದ ಟೊಮೆಟೋ ಪೇಸ್ಟ್, ಸೇರಿಸಿ ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ. ಹೀಗೆ ಬೇಯಿಸುವಾಗ ಅಡುಗೆ ಎಣ್ಣೆ, ತುಪ್ಪ, ಕೊತ್ತಂಬರಿ ಸೊಪ್ಪು ಸಹ ಹೆಚ್ಚಿಗೆ ಸೇರಿಸಿ.

ಇನ್ನು ಮಟನ್ ಗಟ್ಟಿಯಾಗುತ್ತಿರುವಾಗ ಅದರ ಮೇಲೆ ಕಾಳುಮೆಣಸಿನ ಪುಡಿ ಉದುರಿಸಿ ಉರಿಯನ್ನು ಹೆಚ್ಚು ಮಾಡಿ. ಮಿಶ್ರಣ ಡ್ರೈ ರೀತಿಯಾದಾಗ ರುಚಿ ರುಚಿಯಾದ ಮಟನ್‌ ಸುಕ್ಕ ಖಾದ್ಯ ಸವಿಯಲು ಸಿದ್ಧವಾಗುತ್ತದೆ. ಹೀಗೆ ಮಾಡಿದ್ರೆ ನೀವು ಭಾನುವಾರದ ಬಾಡೂಟಕ್ಕೆ ಹೋಟೆಲ್ಗೆ ಹೋಗಿ ತಿನ್ನುವ ಬದಲು ಎಲ್ಲರ ಜೊತೆ ಮನೆಯಲ್ಲೇ ಕುಳಿತು ರುಚಿಯಾದ ಮಟನ್ ಸುಕ್ಕಾ ತಿನ್ನಬಹುದು.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *