
ಗರ್ಭಿಣಿ ಪೇದೆಗಳಿಗೆ ಮಡಿಲು ತುಂಬಿದ ಠಾಣಾ ಸಿಬ್ಬಂದಿ: ಪೊಲೀಸರ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ
- ಕರ್ನಾಟಕ
- October 29, 2023
- No Comment
- 72
ನ್ಯೂಸ್ ಆ್ಯರೋ : ಗರ್ಭಿಣಿಗೆ ಕುಟುಂಬದವರು, ನೆಂಟರು ಸೀಮಂತ ಮಾಡಿ ಹಾರೈಸುವುದನ್ನು ನಾವು ನೋಡಿರುತ್ತೇವೆ. ಆದರೆ ಅಪರೂಪ ಎಂಬಂತೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಸೀಮಂತ ಮಾಡಿ ಬೀಳ್ಕೊಟ್ಟ ಘಟನೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಹಪಾಠಿಗಳ ಈ ಕೆಲಸಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಸುಮಾರಾಣಿಯವರು ತಮ್ಮ ಠಾಣೆಯ ಶಾರದಾ ಮತ್ತು ಅಸ್ಮಬಾನು ಎಂಬ ಇಬ್ಬರು ಗರ್ಭಿಣಿ ಪೇದೆಗಳಿಗೆ ಸೀಮಂತ ಮಾಡಿ ಮಡಿಲಿಗೆ ಮಡಿಲಕ್ಕಿ ತುಂಬಿ ಶುಭ ಹಾರೈಸಿದ್ದಾರೆ.
ಠಾಣಾ ಸಿಬ್ಬಂದಿ ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ, ಅರಿಶಿಣ-ಕುಂಕುಮ ಹಾಗೂ ಬಳೆಗಳನ್ನು ನೀಡಿ ಸೀಮಂತ ಕಾರ್ಯ ಮಾಡಿದ್ದಾರೆ. ಆ ಮೂಲಕ ಇಬ್ಬರು ಮಹಿಳಾ ಪೇದೆಗಳನ್ನ ಗೌರವಿಸಿ ಬೀಳ್ಕೊಟ್ಟಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.