ಪ್ರಸಾರ ಭಾರತಿಯಿಂದ ಒಟಿಟಿ ಅನಾವರಣ; 60 ಚಾನೆಲ್, 12ಕ್ಕೂ ಅಧಿಕ ಭಾಷೆ, ಏನೆಲ್ಲಾ ಸ್ಪೆಷಲ್ ಇರಲಿದೆ?
ನ್ಯೂಸ್ ಆ್ಯರೋ: ವಿಶ್ವ ದೂರದರ್ಶನ ದಿನವಾದ ನ.22 ರ ಕಳೆದ ದಿನ, ಸರ್ಕಾರಿ ವಾಹಿನಿ ಪ್ರಸಾರ ಭಾರತಿಯ OTT ಪ್ಲಾಟ್‌ಫಾರ್ಮ್ ‘ವೇವ್ಸ್’ (Waves) ಅನ್ನು ಅನಾವರಣ ಆಗಿದೆ. ಡಿಜಿಟಲ್ ಸ್ಟ್ರೀಮಿಂಗ್ ಜಗತ್ತಿಗೆ ಕೊನೆಗೂ ಎಂಟ್ರಿ ಕೊಟ್ಟಿದೆ. ವೇವ್ಸ್ ಒಟಿಟಿಯಲ್ಲಿ ಡಿಡಿಯಲ್ಲಿ ಪ್ರಸಾರವಾಗಿ ದಾಖಲೆ ಬರೆದಿದ್ದ, ರಾಮಾಯಣ, ಮಹಾಭಾರತ, ಶಕ್ತಿಮಾನ್ ಹಾಗೂ ಹಮ್ ಲೋಗ್ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. 60 ಚಾನೆಲ್, 12ಕ್ಕೂ ಅಧಿಕ ಭಾಷೆ ಇದರಲ್ಲಿದೆ.
ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭ ಪ್ರಸಾರ ಭಾರತಿ ತನ್ನ OTT ಪ್ಲಾಟ್‌ಫಾರ್ಮ್ ವೇವ್’ ಅನ್ನು ಅನಾವರಣಗೊಳಿಸಿದೆ. ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ವಾಹಿನಿ ಪ್ರಸಾರ ಭಾರತಿಯ OTT ಪ್ಲಾಟ್‌ಫಾರ್ಮ್ “ವೇವ್’ ಅನ್ನು ಗೋವಾದ ಮುಖ್ಯಮಂತ್ರಿ ಡಾ.ಪುಮೋದ್ ಸಾವಂತ್ ಅವರು ಗುರುವಾರ ಅನಾವರಣ ಮಾಡಿದರು.
ಏನೆಲ್ಲ ಇರಲಿದೆ?:
ರಾಮಾಯಣ, ಮಹಾಭಾರತದಂತಹ ಕ್ಲಾಸಿಕ್ ಕಾರ್ಯಕ್ರಮಗಳ ಜೊತೆಗೆ ಸುದ್ದಿ, ಸಾಕ್ಷ್ಯಚಿತ್ರಗಳು ಮತ್ತು ಹಲವಾರು ಭಾಷೆಗಳ ಕಾರ್ಯಕ್ರಮಗಳನ್ನು ಇದು ಒಳಗೊಂಡಿದೆ. ಪಿಐಬಿ ಹೇಳಿಕೆಯ ಪ್ರಕಾರ, ಡಿಡಿಯಲ್ಲಿ ಪ್ರಸಾರವಾದ ಕ್ಲಾಸಿಕ್ ಕಂಟೆಂಟ್‌ಗಳು, ಸಮಕಾಲೀನ ಕಾರ್ಯಕ್ರಗಳ ಸಮ್ಮದ ಮಿಶ್ರಣವನ್ನು ಒಟಿಟಿ ಒಳಗೊಂಡಿರಲಿದೆ. ವೇವ್ ಒಟಿಟಿಯಲ್ಲಿ ಡಿಡಿಯಲ್ಲಿ ಪ್ರಸಾರವಾಗಿ ದಾಖಲೆ ಬರೆದಿದ್ದ ರಾಮಾಯಣ, ಮಹಾಭಾರತ, ಶಕ್ತಿಮಾನ್ ಹಾಗೂ ಹಮ್ ಲೋಗ್ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.
ವೇವ್ಸ್ನನಲ್ಲಿ 65 ಕ್ಕೂ ಹೆಚ್ಚು ಲೈವ್ ಚಾನಲ್‌ಗಳು, ಚಲನಚಿತ್ರಗಳು, ಸಂವಾದಾತ್ಮಕ ಆಟಗಳು, ಲೈವ್ ಈವೆಂಟ್‌ಗಳು ಮತ್ತು ಆನ್‌ಲೈನ್ ಶಾಪಿಂಗ್ ಸಹ ಇರಲಿದೆ. ಹಿಂದಿ, ಇಂಗ್ಲಿಷ್, ತಮಿಳು, ಮರಾಠಿ ಮತ್ತು ಅಸ್ಸಾಮಿ ಸೇರಿದಂತೆ 12 ಭಾಷೆಗಳಲ್ಲಿ ಲಭ್ಯವಿದ್ದು, ಭಾರತ್‌ನೆಟ್ ಮೂಲಸೌಕರ್ಯದ ಮೂಲಕ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ವೀಕ್ಷಕರಿಗೆಮನರಂಜನೆಯನ್ನು ತರಲು ವೇದಿಕೆಯನ್ನು ಸಿದ್ಧಪಡಿಸಲಾಗಿದೆ.
ಪ್ರಸಾರ ಭಾರತಿಯ ಸಿಇಒ ಗೌರವ್ ದ್ವಿವೇದಿ ಮಾತನಾಡಿ, “ನಾವು ದೇಶದಾದ್ಯಂತ ಪ್ರೇಕ್ಷಕರಿಗೆ ಮಾಹಿತಿ ಮತ್ತು ವಿಷಯವನ್ನು ಲಭ್ಯವಾಗುವಂತೆ ಮಾಡಬೇಕಾಗಿರುವುದರಿಂದ ಎಲ್ಲಾ ವೇದಿಕೆಗಳಲ್ಲಿ ಸಾರ್ವಜನಿಕ ಪ್ರಸಾರಕರು ಇರಬೇಕಾದ ಅವಶ್ಯಕತೆಯಿದೆ” ಎಂದು ಹೇಳಿದರು. ಡಿಡಿ ನ್ಯಾಷನಲ್‌ನಲ್ಲಿ ಪ್ರಾರಂಭವಾದ ಹೊಸ ಪ್ರದರ್ಶನವಾದ ‘ಕಕಭುಶುಂಡಿ ರಾಮಾಯಣ’ ವೇವ್ಸ್‌ನಲ್ಲಿಯೂ ಲಭ್ಯವಿರುತ್ತದೆ.
Waves ಅನ್ನು Google Play Store ನಿಂದ ಅಥವಾ iOS ನಿಂದ Apple App Store ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಪ್ರಸ್ತುತವಾಗಿ ಅಧಿಕೃತ ವೆಬ್‌ಸೈಟ್ Waves.pb ಮೂಲಕ ಚಂದಾದಾರಿಕೆ ಪಡೆಯಬೇಕು. ಪ್ಲಾಟಿನಮ್ ಯೋಜನೆ ವರ್ಷಕ್ಕೆ 999 ರೂ ಆಗಿದೆ.
Leave a Comment