ಮಸ್ಕ್‌ ಟೆಸ್ಲಾದಿಂದ ಹೊಸ ಸೋಲಾರ್‌ ಫೋನ್‌; ಚಾರ್ಜಿಂಗ್‌, ಇಂಟರ್‌ನೆಟ್‌ ಎರಡೂ ಬೇಡ !

Tesls
Spread the love

ನ್ಯೂಸ್ ಆ್ಯರೋ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಎಲಾನ್ ಮಸ್ಕ್, ಇನ್ನೊಂದು ವಿಷಯದಲ್ಲೂ ಸೋಶಿಯಲ್ ಮೀಡಿಯಾಗಳನ್ನೆಲ್ಲಾ ಬೆಚ್ಚಿ ಬೀಳಿಸಿದ್ದಾರೆ. ಹೊಸ ಸ್ಮಾರ್ಟ್‌ಫೋನ್‌ಅನ್ನು ಎಲಾನ್ ಮಸ್ಕ್ ಪರಿಚಯಿಸಲಿದ್ದಾರೆ ಅನ್ನೋದೇ ಆ ಸುದ್ದಿ. ಈ ಫೋನ್‌ಗೆ ಇಂಟರ್ನೆಟ್ ಬೇಕಿಲ್ಲ, ಚಾರ್ಜ್ ಮಾಡಬೇಕಾಗಿಲ್ಲ ಅಂತಾನೂ ಜಾಹೀರಾತು ಮಾಡ್ತಿದ್ದಾರೆ.

ಟೆಸ್ಲಾ ಸ್ಮಾರ್ಟ್‌ಫೋನ್ ಬಗ್ಗೆ ಎಲಾನ್ ಮಸ್ಕ್ ಅಥವಾ ಟೆಸ್ಲಾ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಟೆಸ್ಲಾ ಕಂಪನಿ 2021ರಿಂದಲೂ ಸ್ಮಾರ್ಟ್‌ಫೋನ್ ತಯಾರಿಕೆಗೆ ಇಳಿಯುತ್ತೆ ಅನ್ನೋ ಸುದ್ದಿಯಿದೆ. ಆದರೆ ಇದುವರೆಗೆ ಟೆಸ್ಲಾದಿಂದ ಯಾವುದೇ ಸ್ಮಾರ್ಟ್‌ಫೋನ್ ಬಂದಿಲ್ಲ. ಮೊದಲು, ಸ್ಮಾರ್ಟ್‌ಫೋನ್ ತಯಾರಿಕೆ ಉದ್ಯಮದಲ್ಲಿ ತಾನಿಲ್ಲ ಅಂತ ಮಸ್ಕ್ ಹೇಳಿದ್ದರು. ಆದರೆ, ಟೆಸ್ಲಾ ಪೈ ಮೂರು ಅಸಾಮಾನ್ಯ ವೈಶಿಷ್ಟ್ಯಗಳೊಂದಿಗೆ ಬರಲಿದೆ ಅಂತ ಜಾಹೀರಾತು ಮಾಡಲಾಗ್ತಿದೆ.

ಫೋನ್‌ಗೆ ಇಂಟರ್ನೆಟ್ ಬೇಕಿಲ್ಲ. ಸ್ಪೇಸ್‌ಎಕ್ಸ್ ಸ್ಯಾಟಲೈಟ್ ಜೊತೆ ನೇರವಾಗಿ ಕೆಲಸ ಮಾಡುತ್ತೆ. ಸೋಲಾರ್ ಸಿಸ್ಟಮ್ ಮೂಲಕ ಆಟೋ ಚಾರ್ಜ್ ಆಗುತ್ತೆ ಅನ್ನೋ ಪ್ರಚಾರವೆಲ್ಲಾ ಗಾಳಿಸುದ್ದಿ ಅಂತ ತಿಳಿದು ಬಂದಿದೆ. ಟೆಸ್ಲಾ ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಹಿಂದೆ ಹಲವು ಗಾಳಿಸುದ್ದಿಗಳು ಹಬ್ಬಿದ್ದವು. ಅವುಗಳಲ್ಲಿ ಮುಖ್ಯವಾದದ್ದು ಟೆಸ್ಲಾ ಫೋನ್‌ಗೆ ವಿದ್ಯುತ್ ಬೇಕಿಲ್ಲ, ಸೌರಶಕ್ತಿಯಿಂದ ಚಾರ್ಜ್ ಆಗುತ್ತೆ ಅನ್ನೋದು. ಟೆಸ್ಲಾ ಕಂಪನಿ ಈಗಾಗಲೇ ಸೋಲಾರ್ ತಂತ್ರಜ್ಞಾನವನ್ನು ಚೆನ್ನಾಗಿ ಬಳಸುತ್ತಿದೆ.

ಮಸ್ಕ್‌ಗೆ ಸೇರಿದ ಸ್ಪೇಸ್‌ಎಕ್ಸ್ ಕಂಪನಿ ಒದಗಿಸಿದ ಸ್ಟಾರ್ ಲಿಂಕ್, ಮಾಡೆಲ್‌ನ್ನೇ ಫೋನ್‌ನಲ್ಲಿ ಬಳಸಲಾಗಿದೆ. ಇದು ವಿಶಾಲ ಬ್ರ್ಯಾಂಡ್ ವೇಗದ ಸ್ಯಾಟಲೈಟ್ ಆಧಾರಿತ ಫೋನ್ ಆಗಿದ್ದು. 5G ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲೂ ಈ ಫೋನ್ ಕವರೇಜ್ ಇದೆ. ಸ್ಟಾರ್ ಲಿಂಕ್ ತಂತ್ರಜ್ಞಾನ ತುಂಬಾ ಮುಂದುವರಿದಿದೆ ಅಂತ ಕಾಣುತ್ತೆ. ಮೇಲಿನ ಮಾಡೆಲ್‌ನಲ್ಲಿ ಬ್ರೈನ್-ಮೆಷಿನ್-ಇಂಟರ್‌ಫೇಸ್ (BMI) ಚಿಪ್‌ಗಳು ಫೋನ್‌ನಲ್ಲಿರುತ್ತವೆ ಅಂತ ನಿರೀಕ್ಷಿಸಲಾಗಿದೆ. ಈ ಫೋನ್‌ನ ಬೆಲೆ ಸುಮಾರು 100 ಡಾಲರ್‌ಗಳಿರುತ್ತದೆ ಅಂತ ಹೇಳಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!