ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ.ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಇದಕ್ಕಿದೆ ಯಾರೂ ಊಹಿಸದ ಕಾರಣ !

Amaran 1
Spread the love

ನ್ಯೂಸ್ ಆ್ಯರೋ: ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಅಭಿನಯದ ʼಅಮರನ್‌ʼ ಕಾಲಿವುಡ್‌ ಸಿನಿರಂಗದಲ್ಲಿ ಮೋಡಿ ಮಾಡಿದೆ. ಮೇಜರ್ ಮುಕುಂದ್ ವರದರಾಜನ್ ಸಾಹಸಗಾಥೆಯನ್ನು ಸ್ಕ್ರೀನ್‌ ಮೇಲೆ ಪ್ರೆಸೆಂಟ್‌ ಮಾಡಿರುವ ರೀತಿಗೆ ಸಿನಿಮಂದಿ ಫಿದಾ ಆಗಿದ್ದಾರೆ. ಶೀಘ್ರದಲ್ಲಿ ಸಿನಿಮಾ ಓಟಿಟಿ ಬರುತ್ತದೆ ಎನ್ನಲಾಗುತ್ತಿತ್ತು. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ʼಅಮರನ್‌ʼ ಸಿನಿಮಾದಲ್ಲಿನ ಒಂದು ದೃಶ್ಯ ಚೆನ್ನೈ ಮೂಲದ ವಿದ್ಯಾರ್ಥಿಯೊಬ್ಬನಿಗೆ ಇಕ್ಕಟ್ಟಿನ ಪರಿಸ್ಥಿತಿಯನ್ನು ತಂದಿಟ್ಟಿರುವ ಬಗ್ಗೆ ವರದಿಯಾಗಿತ್ತು. ಇದೀಗ ಈ ವಿದ್ಯಾರ್ಥಿಯೇ ಚಿತ್ರತಂಡಕ್ಕೆ ಕಾನೂನು ಸಂಕಷ್ಟ ತಂದಿಟ್ಟಿದ್ದಾನೆ.

ʼಅಮರನ್‌ʼ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿಯ ಪಾತ್ರದಲ್ಲಿ ಸಾಯಿಪಲ್ಲವಿ (ಇಂಧೂ ರೆಬೆಕ್ಕಾ ವರ್ಗೀಸ್) ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಾಯಿಪಲ್ಲವಿ ಕಾಗದವೊಂದರಲ್ಲಿ ತಮ್ಮ ಮೊಬೈಲ್‌ ನಂಬರ್‌ ವೊಂದನ್ನು ಬರೆದು ಶಿವಕಾರ್ತಿಕೇಯನ್ ಅವರ ಬಳಿ ಎಸೆಯುವ ದೃಶ್ಯವಿದೆ. ಈ ಕಾಗದದಲ್ಲಿ ಎರಡು ನಂಬರ್‌ ಇರುತ್ತದೆ.

ಅಸಲಿಗೆ ವಿಷಯ ಏನಂದರೆ ಕಾಗದದಲ್ಲಿ ಸಾಯಿಪಲ್ಲವಿ ಬರೆದ ನಂಬರ್‌ ಗಳಿಗೆ ಪ್ರೇಕ್ಷಕರು ಕರೆ ಮಾಡಿದ್ದಾರೆ. ಇದರಲ್ಲಿ ಒಂದು ನಂಬರ್‌ ಚಾಲ್ತಿಯಲ್ಲಿ ಇಲ್ಲ. ಆದರೆ ಇನ್ನೊಂದು ನಂಬರ್‌ ಚೆನ್ನೈನ ವಿದ್ಯಾರ್ಥಿ ವಾಗೀಶನ್ ವಿವಿ ಎನ್ನುವವನದ್ದು.

ಸಿನಿಮಾ ನೋಡಿದವರು ಕಾಗದದಲ್ಲಿನ ನಂಬರ್‌ ನಿಜವಾಗಿಯೂ ಸಾಯಿಪಲ್ಲವಿ ಅವರ ನಂಬರ್‌ ಆಗಿದೆ ಅಥವಾ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿ ಇಂಧೂ ರೆಬೆಕ್ಕಾ ವರ್ಗೀಸ್ ಅವರ ನಂಬರ್‌ ಆಗಿರಬಹುದೆಂದು ನೂರಾರು ಕರೆಗಳನ್ನು ಮಾಡಿದ್ದಾರೆ.
ಎಲ್ಲ ಕರೆಗಳಿಗೆ ಉತ್ತರಿಸಿ ಉತ್ತರಿಸಿ ವಾಗೀಶನ್ ಸುಸ್ತಾಗಿದ್ದಾನೆ. ಇದಲ್ಲದೆ ಟ್ರೂ ಕಾಲರ್‌ನಲ್ಲಿ ಯಾರೋ ಕಿಡಿಗೇಡಿಗಳು ವಾಗೀಶನ್ ಅವರ ನಂಬರ್‌ ಗೆ ರೆಬೆಕ್ಕಾ ಅವರ ಹೆಸರು ಸೇರಿಸಿ ಎಡಿಟ್‌ ಮಾಡಿದ್ದಾರೆ. ಇದು ವಾಗೀಶನ್ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಚಿತ್ರತಂಡದ ಎಡವಟ್ಟಿನಿಂದ ಸಮಸ್ಯೆಯನ್ನು ಎದುರಿಸಿರುವ ವಿದ್ಯಾರ್ಥಿ ವಾಗೀಶನ್ ಚಿತ್ರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅನುಮತಿಯಿಲ್ಲದೆ ಬಳಸಲಾಗಿದೆ. ಚಿತ್ರದ ಒಂದು ದೃಶ್ಯದಲ್ಲಿ ತೆರೆಯ ಮೇಲೆ ಪ್ರದರ್ಶಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿ ಅಮರನ್ ನಿರ್ಮಾಪಕರಿಂದ₹ 1.1 ಕೋಟಿ ರೂ. ಪರಿಹಾರವನ್ನು ಕೋರಿ ಚಿತ್ರತಂಡಕ್ಕೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ. ತನ್ನ ಈ ಸಂಖ್ಯೆಯನ್ನು ಬ್ಯಾಂಕ್‌ ಹಾಗೂ ಇತರೆ ದಾಖಲೆಗಳಿಗೆ ನೀಡಿದ್ದು, ತಕ್ಷಣಕ್ಕೆ ಬದಲು ಮಾಡಲು ಆಗುತ್ತಿಲ್ಲ ಎಂದು ವಾಗೀಶನ್ ಹೇಳಿದ್ದಾರೆ.

ಸಿನಿಮಾಗಳಲ್ಲಿ ಬಳಕೆಯಲ್ಲಿರದ ಮೊಬೈಲ್ ನಂಬರ್ ಬಳಸಬೇಕು ಎಂಬ ನಿಯಮವಿದೆ. ಸಾಮಾನ್ಯವಾಗಿ ಪ್ರಚಾರದ ಉದ್ದೇಶಕ್ಕಾಗಿ ನೋಂದಾಯಿಸಿಕೊಂಡಿರುವ ಸಂಖ್ಯೆಯನ್ನು ಬಳಸಬೇಕು ಎಂಬ ನಿಯಮವಿದೆ. ಇದೀಗ ಅಮರನ್ ಚಿತ್ರತಂಡ ಈ ನಿಯಮ ಪಾಲನೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿ ವಿ.ವಿ.ವಾಗೀಶನ್ ನೀಡಿರುವ ನೋಟಿಸ್‌ಗೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!