Mangalore : ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಡ್ರಗ್ ತಂಡದ ಕಾರ್ಯಾಚರಣೆ – ಲಕ್ಷಾಂತರ ಮೌಲ್ಯದ ಡ್ರಗ್ಸ್ ಸಹಿತ ಇಬ್ಬರ ಬಂಧನ, ಮಾರಕಾಯುಧಗಳು ವಶಕ್ಕೆ..

Mangalore : ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಡ್ರಗ್ ತಂಡದ ಕಾರ್ಯಾಚರಣೆ – ಲಕ್ಷಾಂತರ ಮೌಲ್ಯದ ಡ್ರಗ್ಸ್ ಸಹಿತ ಇಬ್ಬರ ಬಂಧನ, ಮಾರಕಾಯುಧಗಳು ವಶಕ್ಕೆ..

ನ್ಯೂಸ್ ಆ್ಯರೋ : ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಆ್ಯಂಟಿ ಡ್ರಗ್ ತಂಡವು ಭರ್ಜರಿ ಕಾರ್ಯಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತಗಳನ್ನು ಮತ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದೆ.

ಶಿಶಿರ್ ದೇವಾಡಿಗ ಮತ್ತು ಸುಶಾನ್ ಎಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಬ್ಬರು ಬಿಳಿ ಸ್ವಿಫ್ಟ್ ಕಾರಿನಲ್ಲಿ ನಿಷೇಧಿತ 132 ಗ್ರಾಮ್ ಎಮ್ ಡಿಎಮ್ ಮತ್ತು 250 ಗ್ರಾಮ್ ಎಲ್ ಎಸ್ಟಿ ಸ್ಟಾಂಪ್ ಮಾದಕ ವಸ್ತುಗಳನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಉಳ್ಳಾಲ ಠಾಣಾ ವ್ಯಾಪ್ತಿಯ ಸಂತೋಷ್ ನಗರ ಎಂಬಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

ಆರೋಪಿಗಳಲ್ಲಿದ್ದ 3,70,050 ರೂಪಾಯಿ ನಗದು, ಸ್ವಿಫ್ಟ್ ಕಾರು, ಮಾದಕ ವಸ್ತುಗಳು ಮತ್ತು ಮಾರಕಾಯುಧಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪಿಎಸ್ ಐಗಳಾದ ಪುನೀತ್ ಗಾಂವ್ಕರ್, ಸಂತೋಷ್ ಕುಮಾ‌ರ್ ಡಿ, ಸಿಬ್ಬಂದಿಗಳಾದ ಸಾಜು ನಾಯರ್, ಮಹೇಶ್, ಶಿವಕುಮಾ‌ರ್ ಇದ್ದರು.

Related post

ಕೊಡಗು ವಿದ್ಯಾರ್ಥಿನಿಯ ತಲೆ ಕಡಿದು ಹತ್ಯೆ ಮಾಡಿದ ಆರೋಪಿ ಅಂದರ್..!

ಕೊಡಗು ವಿದ್ಯಾರ್ಥಿನಿಯ ತಲೆ ಕಡಿದು ಹತ್ಯೆ ಮಾಡಿದ ಆರೋಪಿ ಅಂದರ್..!

ನ್ಯೂಸ್ ಆ್ಯರೋ: ಎಸ್ಎಸ್ಎಲ್ಸಿ ಫಲಿತಾಂಶದ ಉತ್ತಮ ಅಂಕಗಳಿಸಿ ಪಾಸಾಗಿದ್ದ ವಿದ್ಯಾರ್ಥಿನಿಯನ್ನು ಭೀಕರವಾಗಿ ರುಂಡ ಕಡಿದು ಕೊಲೆ ಮಾಡಿದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಗಿ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ನನ್ನು ಸೋಮವಾರಪೇಟೆ…
ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 11-05-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಇದಕ್ಕಾಗಿ ನೀವು ನಿಮ್ಮ…
ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ…

ನ್ಯೂಸ್ ಆರೋ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು…

Leave a Reply

Your email address will not be published. Required fields are marked *