A 70-year-old man has a 30-year-old bride...!

ಓ ಮೈ ಗಾಡ್..!! 70 ವರ್ಷದ ವೃದ್ಧನಿಗೆ 30 ವರ್ಷ ಪ್ರಾಯದ ವಧು…! – ಹಲ್ಲಿಲ್ಲದಿದ್ದರೂ ಈ ತಾತನ ಅವಸ್ಥೆ ನೋಡಿ..!!

ನ್ಯೂಸ್ ಆ್ಯರೋ : ಇತ್ತೀಚೆಗಿನ ಟ್ರೆಂಡ್ ಜಗತ್ತಿನಲ್ಲಿ ಹೇಗೋಗೋ ಪ್ರೀತಿಯಾಗುತ್ತೆ, ಹೇಗೇಗೋ ಮದ್ವೆನೂ ಆಗುತ್ತೆ. ಇವತ್ತಿನ ಮಾನವ ಸಂಬಂಧವನ್ನು ಮೌಲ್ಯಾಧಾರಿತವಾಗಿ ಅಳೆಯುವುದು ಬಹಳ ಕಷ್ಟ. ಮದುವೆ, ಪ್ರೀತಿ ವಿಚಾರದಲ್ಲಿ ಅನೇಕ ನಂಬಲಾಗದ ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುತ್ತಲೇ ಇರುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲೂ ನೋಡುತ್ತಿರುತ್ತೇವೆ.

ಸಾಮಾಜಿಕ ಮಾಧ್ಯಮ ಇಂಟರ್‌ನೆಟ್‌ನಲ್ಲಿ ಪ್ರತಿದಿನ ಹಲವಾರು ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಇದರಲ್ಲಿ ಕೆಲವು ಫೋಟೋಗಳು ಹೊಟ್ಟೆ ಹುಣ್ಣಾಗುವಂತೆ ನಗು ತರಿಸುತ್ತವೆ. ಈ ಫೋಟೋದಲ್ಲಿ 70 ವರ್ಷದ ವರನಿಗೆ 30 ವರ್ಷದ ವಧುವನ್ನು ಮದುವೆ ಮಾಡಿ ಕೊಡಲಾಗುತ್ತಿದೆ. ಇದು ವಯಸ್ಸಾದ ವ್ಯಕ್ತಿಯ ಮದುವೆಗೆ ಸಂಬಂಧಿಸಿದ್ದು. ವರ ತನ್ನ ವಧುವನ್ನು ನೋಡಿದ ನಂತರ ಸಂತೋಷದಿಂದ ನಗುವುದನ್ನು ನೋಡಬಹುದು. ಅವರು ಬಯಸಿದರೂ ತಮ್ಮ ನಗುವನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ವೈರಲ್ ಫೋಟೋದಲ್ಲಿ ಏನಿದೆ..?

ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ವಯಸ್ಸಾದ ವ್ಯಕ್ತಿ ತನಗಿಂತ ಚಿಕ್ಕ ವಯಸ್ಸಿನ ವಧುವಿನ ಜೊತೆ ಕಾಣಿಸಿಕೊಂಡಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ವರನ ವಯಸ್ಸು ಸುಮಾರು 70 ವರ್ಷ, ವಧುವಿನ ವಯಸ್ಸು 30 ರ ಸನಿಹದಲ್ಲಿರಬಹುದು ಎಂದು ಊಹಿಸಬಹುದು.

ಇಬ್ಬರ ನಡುವೆ ವಯಸ್ಸಿನ ಹೊಂದಾಣಿಕೆ ಇಲ್ಲ ಆದರೆ ಮದುವೆಯಾಗುತ್ತಿದ್ದಾರೆ. ಈ ತಾತ ತನ್ನ ಮದುವೆಯಲ್ಲಿ ತುಂಬಾ ಸಂತೋಷದಿಂದ ಕಾಣುತ್ತಾರೆ. ಅವರು ಬಯಸಿದರೂ ತಮ್ಮ ಸಂತೋಷವನ್ನು ಮರೆಮಾಡಲು ಸಾಧ್ಯವಿಲ್ಲ. ಹುಚ್ಚರಂತೆ ವರ್ತಿಸಲು ಪ್ರಾರಂಭಿಸುತ್ತಾರೆ.

ಮೊದಲಿಗೆ ವಧು ಮೌನವಾಗಿ ನಿಂತಿರುವುದು ನೋಡಬಹುದು. ಆದರೆ ಕ್ಯಾಮೆರಾ ಫೋಕಸ್ ಮಾಡಿದಾಗ ವಧು ಸಹ ಸ್ವಲ್ಪ ನಗುತ್ತಿರುವುದನ್ನು ಕಾಣಬಹುದು. ಒಟ್ಟಾರೆಯಾಗಿ ಕಾಲ ಕೆಟ್ಟೋಯ್ತೋ ಅಥವಾ ನಾವೇ ಬದಲಾದೆವೋ ಒಂದೂ ತಿಳಿಯದ ಕಾಲಘಟ್ಟದಲ್ಲಂತೂ ಇದ್ದೇವೆ ಅನ್ನೋದು ಸತ್ಯ…!