
ಜಗತ್ತಿನ ಅತೀ ಎತ್ತರದ ನಾಯಿ ಸಾವು – ಈ ನಾಯಿ ಎಲ್ಲಿತ್ತು ಗೊತ್ತಾ?
- ಅಂತಾರಾಷ್ಟ್ರೀಯ ಸುದ್ದಿ
- September 14, 2023
- No Comment
- 59
ನ್ಯೂಸ್ ಆ್ಯರೋ : ಜಗತ್ತಿನ ಅತೀ ಎತ್ತರದ ಗಂಡು ನಾಯಿ ಎನಿಸಿಕೊಂಡಿದ್ದ ಗ್ರೇಟ್ ಡೇನ್ ತಳಿಯ ಶ್ವಾನ ಮೃತಪಟ್ಟಿದೆ.
ಎಡಗಾಲಿನ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜೇವೂಸ್ ಗೆ 3 ವರ್ಷ 10 ತಿಂಗಳಾಗಿತ್ತು. ಅಮೆರಿಕದ ಟೆಕ್ಸಸ್ ನ ಬೆಡ್ ಫೋರ್ಡ್ ನಲ್ಲಿ ಮಲಕರೊಂದಿಗೆ ವಾಸವಾಗಿತ್ತು.
ಬೆಡ್ ಫೋರ್ಡ್ ನ ಬ್ರಿಟ್ನಿ ಜೇವುಸ್ ನ ಮಾಲಕರಾಗಿದ್ದು ಇತ್ತೀಚೆಗೆ ಜೇವುಸ್ ಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದರೂ ಅವನು ಬದುಕಿ ಉಳಿಯಲಿಲ್ಲ ಎಂದು ಬ್ರಿಟ್ನಿ ಹೇಳಿದ್ದಾರೆ. ಜೇವುಸ್ ಅವರ ಮಡಿಲಲ್ಲೇ ಪ್ರಾಣ ಬಿಟ್ಟಿರುವುದಾಗಿ ತಿಳಿಸಿದ್ದಾರೆ.


ಜೇವುಸ್ 1.046 ಮೀಟರ್ ಎತ್ತರವಿರುವುದು 2022ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಗೆ ಸೇರಿಸಲಾಯಿತು.
ಜೇವುಸ್ ಸಾವಿನ ಕುರಿತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣ ದಲ್ಲಿ ಮಾಹಿತಿ ಹಂಚಿಕೊಂಡಿದೆ ಹಾಗೂ ಸಂತಾಪ ಸೂಚಿಸಿದೆ.