ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಐಫೋನ್‌ 15 – ಈ ಫೋನಿನಲ್ಲಿದೆ ‘ಇಸ್ರೋ ನಾವಿಕ್’ ತಂತ್ರಜ್ಞಾನ : ಏನಿದರ ವಿಶೇಷತೆ?

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಐಫೋನ್‌ 15 – ಈ ಫೋನಿನಲ್ಲಿದೆ ‘ಇಸ್ರೋ ನಾವಿಕ್’ ತಂತ್ರಜ್ಞಾನ : ಏನಿದರ ವಿಶೇಷತೆ?

ನ್ಯೂಸ್‌ ಆ್ಯರೋ : ಭಾರತ ಸೇರಿದಂತೆ ವಿಶ್ವದಾದ್ಯಂತ ಐಫೋನ್ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಐಫೋನ್‌ 15 ಪ್ರೋ ಸರಣಿಯ ಸ್ಮಾರ್ಟ್‌ ಫೋನ್‌ಗಳು ಕೊನೆಗೂ ಬಿಡುಗಡೆಗೊಂಡಿದೆ. ನಂಬರ್‌ ವನ್‌ ಬ್ರ್ಯಾಂಡ್‌ ಎಂದೇ ಹೆಸರಾಗಿರುವ ಐಫೋನ್‌ನಲ್ಲಿ ಭಾರತದ ಒಂದು ತಂತ್ರಜ್ಞಾನವನ್ನುಅಳವಡಿಸಲಾಗಿದೆ.

ಈ ಬಗ್ಗೆ ಆ್ಯಪಲ್ ಕಂಪೆನಿ ದೃಢಪಡಿಸಿದೆ. ಐಫೋನ್‌ 15 ಪ್ರೋ ಸರಣಿಯ ಸ್ಮಾರ್ಟ್‌ ಫೋನ್‌ಗಳು ಇಸ್ರೋ ಅಭಿವೃದ್ಧಿಪಡಿಸಿರುವ ‘ನಾವಿಕ್‌’ ತಂತ್ರಜ್ಞಾನ ಹೊಂದಿದೆ. ಇದು ನ್ಯಾವಿಗೇಷನ್‌ ಆ್ಯಪ್‌ ಆಗಿದ್ದು, ಇದು ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌ (ಜಿಪಿಎಸ್‌)ನ ದೇಶಿಯ ವರ್ಶನ್‌ ಆಗಿದೆ.

ತನ್ನ ನ್ಯಾವಿಗೇಷನ್‌ ತಂತ್ರಜ್ಞಾನವನ್ನು ಮೊಬೈಲ್‌ ಸೆಟ್‌ಗಳಲ್ಲಿ ಸಂಯೋಜಿಸಲು ಕ್ವಾಲ್‌ಕಾಮ್‌ ಕಂಪನಿಯೊಂದಿಗೆ ಈಗಾಗಲೇ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಇದೀಗ ಆ್ಯಪಲ್‌ನ ಹೊಸ ಮಾಡೆಲ್‌ಗ‌ಳಾದ ಎ17 ಪ್ರೊ, ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಮೊಬೈಲ್‌ಗ‌ಳು ‘ನಾವಿಕ್‌’ ತಂತ್ರಜ್ಞಾನ ಒಳಗೊಂಡಿವೆ.

ಭಾರತದ ಸ್ವಂತ ನ್ಯಾವಿಗೇಷನ್‌ ವ್ಯವಸ್ಥೆ

‘ನಾವಿಕ್‌’ ಎರಡು ರೀತಿಯ ಲೊಕೇಶನ್‌ ಸೇವೆಗಳನ್ನು ಒದಗಿಸಲಿದೆ. ಸ್ಟಾಂಡರ್ಡ್‌ ಪೊಸಿಷನಿಂಗ್‌ ಸರ್ವಿಸ್‌ ಹಾಗೂ ಭದ್ರತಾ ಸಂಸ್ಥೆಗಳು ಮತ್ತು ಮಿಲಿಟರಿ ಪಡೆಗಳಿಗೆ ಎನ್‌ಕ್ರಿಪ್ಟ್ ಸೇವೆಗಳನ್ನು ಒದಗಿಸಲಿದೆ. 7 ಉಪಗ್ರಹಗಳ ಸಹಾಯದಿಂದ ನಾವಿಕ್‌ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಈ ಪೈಕಿ ಮೂರು ಜಿಯೋಸ್ಟೇಷನರಿ ಅರ್ಥ್ ಆರ್ಬಿಟ್‌ (ಜಿಇಒ) ಉಪಗ್ರಹಗಳು ಹಾಗೂ ನಾಲ್ಕು ಜಿಯೋಸಿಂಕ್ರೋನಸ್‌ ಆರ್ಬಿಟ್‌ (ಜಿಎಸ್‌ಒ) ಉಪಗ್ರಹಗಳು. ಭಾರತವು ತನ್ನದೇ ಆದ ನ್ಯಾವಿಗೇಷನ್‌ ವ್ಯವಸ್ಥೆಯನ್ನು ಹೊಂದಿದೆ. ಇದು ಭವಿಷ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಸಮಯದಲ್ಲೂ ಕೂಡ ಕಾರ್ಯನಿರ್ವಹಿಸಲಿದೆ.

ಸೆಪ್ಟೆಂಬರ್‌ 22ರಿಂದ ಮಾರಾಟ ಆರಂಭ:

ಈಗಾಗಲೇ ಆ್ಯಪಲ್‌ ಐಫೋನ್‌ 15 ಸರಣಿ ಮೊಬೈಲ್‌ಗ‌ಳು ಭಾರತದಲ್ಲಿ ಬಿಡುಗಡೆಗೊಂಡಿದೆ. ಸೆ.15ರಿಂದ ಮುಂಗಡ ಬುಕ್ಕಿಂಗ್‌ ಆರಂಭವಾಗಲಿದೆ. ಸೆ.22ರಿಂದ ಇದರ ಮಾರಾಟ ಆರಂಭವಾಗಲಿದೆ.

ಅತ್ಯಾಧುನಿಕ ಸೌಲಭ್ಯ:

ನೂತನ ಮೊಬೈಲ್‌ಗ‌ಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಫ್ರಂಟ್‌ ಫೇಸಿಂಗ್‌ ಕ್ಯಾಮೆರಾ ಮತ್ತು ಫೇಸ್‌ ಐಡಿ ಹೊಂದಿದೆ. ಜತೆಗೆ ಐಒಎಸ್‌17 ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೊಬೈಲ್‌ ಫೋನ್‌ಗಳು 48 ಮೆಗಾಫಿಕ್ಸಲ್‌ ಕ್ಯಾಮೆರಾ ಹೊಂದಿವೆ.

ಬೆಲೆ ಹೀಗಿದೆ:

ಐಫೋನ್‌ 15 ಆರಂಭಿಕ ಬೆಲೆ ₹79,900, ಐಫೋನ್‌ 15 ಪ್ಲಸ್‌ ಆರಂಭಿಕ ಬೆಲೆ ₹89,900, ಐಫೋನ್‌ 15 ಪ್ರೊ ಆರಂಭಿಕ ಬೆಲೆ ₹1,34,900 ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ಆರಂಭಿಕ ಬೆಲೆ ₹1,59,900 ಆಗಿದೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *