ಹೊಸ ಹವಾ ಸೃಷ್ಟಿಸಿದ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಹಾಡು – ಒಂದೇ ದಿನ 5 ಮಿಲಿಯನ್ ವೀಕ್ಷಣೆ, ಜನರಿಂದ ಭಾರೀ ಮೆಚ್ಚುಗೆ..!

ಹೊಸ ಹವಾ ಸೃಷ್ಟಿಸಿದ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಹಾಡು – ಒಂದೇ ದಿನ 5 ಮಿಲಿಯನ್ ವೀಕ್ಷಣೆ, ಜನರಿಂದ ಭಾರೀ ಮೆಚ್ಚುಗೆ..!

ನ್ಯೂಸ್‌ ಆ್ಯರೋ : ಕೆಲ ದಿನಗಳ ಹಿಂದೆ ಕನ್ನಡದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ರೀಲ್ಸ್ ಭಾರೀ ವೈರಲ್ ಆಗಿತ್ತು. ರಾತ್ರಿ ಬೆಳಗಾಗೋದ್ರಲ್ಲಿ ಇದನ್ನು ಹಾಡಿದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ನಾಡಿನಾದ್ಯಂತ ಮನೆ ಮಾತಾಗಿದ್ದರು. ಇದೀಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಹಾಡು ಬಿಡುಗಡೆಗೊಂಡ ದಿನ 5 ಮಿಲಿಯನ್ ವೀಕ್ಷಣೆಯಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.

ಈ ಕ್ರಿಯೇಟಿವ್ ಹಾಡನ್ನು ಸೃಷ್ಟಿಸಿದ್ದು ವಿಕಿಪೀಡಿಯಾದ ವಿಕಾಸ ಎಂಬುವವರು. ಇವರು ಈ ಹಿಂದೆ ಆನ್‌ಲೈನ್‌ನಲ್ಲಿ ರಮ್ಮಿ ಆಡಿ ನಷ್ಟಕ್ಕೆ ಒಳಗಾಗಿ, ಸುದ್ದಿಯಾಗಿದ್ದರು. ಇದೀಗ ಸಹಕಲಾವಿದರಾದ ಅಮಿತ್ ಚಿಟ್ಟೆ, ಶಾಯನ್ ಭಟ್ಟಾಚಾರ್ಯ ಅವರೊಂದಿಗೆ ಸೇರಿಕೊಂಡು ವಿಕಾಸ್ ಈ ಹಾಡನ್ನು ಕ್ರಿಯೇಟ್ ಮಾಡಿದ್ದಾರೆ. ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಹೊಸ ಕಾಮಿಡಿ ರೀಲ್ಸ್‌ 5 ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ತಲುಪಿ ಹೊಸ ಸಂಚಲನವನ್ನು ಉಂಟುಮಾಡಿದೆ.

ಇಂಗ್ಲಿಷ್‌ನ ಪ್ರಸಿದ್ಧ ‘ಐ ಆ್ಯಮ್ ಬಾರ್ಬಿ ಗರ್ಲ್‌’ನ ಟ್ಯೂನ್‌ ಬಳಸಿಕೊಂಡು ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಅಭಿನಯಿಸಿದ್ದಾರೆ. ಈ ಹಾಡಿನಲ್ಲಿ 2004ರಲ್ಲಿ ಸಣ್ಣ ಊರುಗಳಿಂದ ಐಟಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಕಷ್ಟಪಟ್ಟ ಹುಡುಗಿಯರ ಜೀವನಶೈಲಿಯನ್ನು ಕಟ್ಟಿಕೊಡಲಾಗಿದೆ.

ಒಂದು ದಿನದ ಹಿಂದೆ ಫೇಸ್​ಬುಕ್​ನಲ್ಲಿ ಮತ್ತು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಲಕ್ಷಾಂತರ ಜನರು ಲೈಕ್ ಮಾಡಿದ್ದು ಸಾವಿರಾರು ಜನರು ಈ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ವಿಕಾಸ ಮತ್ತು ತಂಡದ ಸೃಜನಶೀಲತೆಯನ್ನು ಶ್ಲಾಘಿಸಿದ್ದಾರೆ.

ಜನರ ಪ್ರತಿಕ್ರಿಯೆಗಳು ಹೀಗಿದೆ:

ಈ ಹಾಡಿನ ತುಣುಕಿಗೆ ಭಾರೀ ಪ್ರತಿಕ್ರಿಯೆಗಳು ಬರುತ್ತಿದ್ದು, ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇಂಗ್ಲಿಷ್​ ಹಾಡನ್ನು ಕನ್ನಡದಲ್ಲಿ ವಾಸ್ತವ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ಇಂಗ್ಲಿಷ್ ಬಾರ್ಬಿ ಈ ಹಾಡನ್ನು ನೋಡಿದರೆ ಎದೆ ಒಡೆದುಕೊಂಡು ಸತ್ತು ಹೋಗುತ್ತಾಳೆ ಎಂದಿದ್ದಾರೆ ಇನ್ನೊಬ್ಬರು.

ನೀವು ರಾಕಿಂಗ್​, ನನ್ನ ಗಂಡ ವಿಕಿಪೀಡಿಯಾ ಶೈಲಿಯಲ್ಲಿ ಮಾತನಾಡಲು ಶುರುಮಾಡಿದ್ದಾರೆ. ನಾನು ನಿಮ್ಮ ಅಭಿಮಾನಿ ವಿಕಿ ಎಂದಿದ್ದಾರೆ ಮತ್ತೊಬ್ಬರು.

ಇದು ನನ್ನ ಪಿಜಿ ದಿನಗಳ ಕಷ್ಟಗಳನ್ನು ನೆನಪಿಸಿತು. ನಾನು ಸಣ್ಣ ಊರಿನಿಂದ ಬಂದ ಹುಡುಗಿ. ಬೆಂಗಳೂರಂಥ ದೊಡ್ಡ ಪಟ್ಟಣಕ್ಕೆ ಬಂದು ಅನುಭವಿಸಿದ್ದೆಲ್ಲ ನೆನಪಾಯಿತು. ಆದರೆ ನಾನು ಯಾವತ್ತೂ ಮನೆಗೆ ಹಣ ಕಳಿಸುತ್ತಿರಲಿಲ್ಲ! ಎಂದಿದ್ದಾರೆ ಮತ್ತೊಬ್ಬರು.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *