
BBK 10th Season : ಡ್ರೋನ್ ಪ್ರತಾಪ್ ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆಯೇ? – ಕಿಚ್ಚನ ಪ್ರಶ್ನೆಗೆ ದೊಡ್ಮನೆಯ ಮಹಿಳೆಯರು ಹೇಳಿದ್ದೇನು ಗೊತ್ತಾ?
- ಮನರಂಜನೆ
- November 6, 2023
- No Comment
- 95
ನ್ಯೂಸ್ ಆ್ಯರೋ : ಬಿಗ್‌ಬಾಸ್ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್ ಅವರನ್ನು ಕೆಲವರು ವೈರಿಗಳನ್ನಾಗಿಸಿಕೊಂಡರೆ ಇನ್ನೂ ಕೆಲವರು ಆಪ್ತ ಸ್ಥಾನವನ್ನು ನೀಡಿ ಅವರೊಂದಿಗೆ ಸ್ನೇಹಿತರಾಗಿದ್ದಾರೆ. ಇನ್ನೂ ಪ್ರಾರಂಭದಲ್ಲಿ ತುಕಾಲಿ ಅವರು ತಮಾಷೆಯಾಗಿ ಪ್ರತಾಪ್ ಅವರನ್ನು ಆಡಿಕೊಳ್ಳುತ್ತಿದ್ದರು. ಇದಕ್ಕೆ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.
ಕಳೆದ ವಾರ ಸಂಗೀತ ಹಾಗೂ ವಿನಯ್ ತಂಡಗಳ ಮಧ್ಯೆ ಕಿತ್ತಾಟಗಳು ನಡೆಯಿತು. ಆಗ ವಿನಯ್ ತಂಡದವರು ಎದುರಾಳಿ ಸಂಗೀತಾ ತಂಡದ ಸದಸ್ಯರ ವ್ಯಕ್ತಿತ್ವದ ಬಗ್ಗೆಯೂ ಕಮೆಂಟ್ಗಳನ್ನು ಮಾಡಿದ್ದರು. ಇದಕ್ಕೆ ಮನೆಯ ಹೊರಗಡೆ ವಿರೋಧ ವ್ಯಕ್ತವಾಗಿತ್ತು.
ಅದಲ್ಲದೆ ಗುಂಪಿನಲ್ಲಿ ಮಾತನಾಡುವಾಗ ವಿನಯ್ ಅವರು ಡ್ರೋನ್ ಹುಡುಗಿಯರನ್ನು ನೋಡುವ ನೋಟ ಅಷ್ಟೇನೂ ಸರಿಯಿಲ್ಲ ಎಂದಿದ್ದರು. ಇದಕ್ಕೆ ತುಕಾಲಿ ಸಂತೋಷ್ ಕೂಡ ಹೌದು ಎಂದಿದ್ದರು. ಡ್ರೋನ್ ಹೇಗೆ ಬಾಯಿ ಬಿಟ್ಟು, ಜೊಲ್ಲು ಕಾರುತ್ತಾ ನೋಡುತ್ತಾನೆ ಎಂದು ಅಭಿನಯಿಸಿ ತೋರಿಸಿದರು. ಇಶಾನಿ ಸಹ ನನಗೆ ಅದರ ಅರಿವು ಆಗಿದೆ ಎಂದು ಸಹ ಹೇಳಿದರು.
ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್, ಮನೆಯ ಸದಸ್ಯರಿಗೆ ಕೆಲವು ಫನ್ ಆಟಗಳನ್ನು ಆಡಿಸುತ್ತಾ, ಎಸ್ ಹಾಗೂ ನೋ ಬೋರ್ಡ್ ನೀಡಿ ಕೆಲವು ತಮಾಷೆ ಪ್ರಶ್ನೆಗಳನ್ನು ಕೇಳುತ್ತಾ ಉತ್ತರಗಳನ್ನು ಪಡೆಯುತ್ತಿದ್ದರು. ಅದೇ ಸಂದರ್ಭದಲ್ಲಿ ‘ಡ್ರೋನ್ ಪ್ರತಾಪ್ ಮನೆಯ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ’ ಈ ಮಾತನ್ನು ಎಷ್ಟು ಜನ ಒಪ್ಪುತ್ತೀರಿ ಎಂದು ಕೇಳಿದರು. ತಮಾಷೆಯ ಪ್ರಶ್ನೆಗಳ ನಡುವೆ ಸುದೀಪ್ ಕೇಳಿದ ಈ ಗಂಭೀರ ಪ್ರಶ್ನೆ ಮನೆಯ ಸದಸ್ಯರಿಗೆ ಆಶ್ಚರ್ಯ ತಂದಿತು. ಇಶಾನಿ, ವಿನಯ್, ತುಕಾಲಿ ಅವರುಗಳು ಹೌದು, ಪ್ರತಾಪ್ ಕೆಟ್ಟದಾಗಿ ನೋಡುತ್ತಾನೆ ಎಂದರೆ ಇನ್ನುಳಿದವರು ಇಲ್ಲ ಕೆಟ್ಟದಾಗಿ ನೋಡಿಲ್ಲ ಎಂದು ಉತ್ತರಿಸಿದರು.
ಇಶಾನಿ, ವಿನಯ್ ಹಾಗೂ ತುಕಾಲಿ ಸಂತು ಅವರುಗಳು ಡ್ರೋನ್ ಪ್ರತಾಪ್ ವಿಚಿತ್ರವಾಗಿ ನೋಡುತ್ತಾರೆ ಎಂದರು. ಆದರೆ ವಿಚಿತ್ರ ಹಾಗೂ ವಲ್ಗರ್ ನಡುವೆ ವ್ಯತ್ಯಾಸ ಇದೆಯಲ್ಲವೆ ಎಂದಾಗ ತುಕಾಲಿ ಹಾಗೂ ವಿನಯ್ ತಮ್ಮ ಹೇಳಿಕೆ ಬದಲಿಸಿದರು. ಇಶಾನಿ, ‘ಡ್ರೋನ್ ನನ್ನ ಬಳಿ ಸರಿಯಾಗಿ ಮಾತನಾಡಿಲ್ಲ ಎಂದೇನೋ ಹೇಳಿದರು, ಆ ಮಾತನ್ನು ಸುದೀಪ್ ಒಪ್ಪಲಿಲ್ಲ ಕೊನೆಗೆ ಅವರೂ ಸಹ ಅಭಿಪ್ರಾಯ ಬದಲಾಯಿಸಿಕೊಂಡರು.
ಈ ನಡುವೆ ಡ್ರೋನ್ ಪ್ರತಾಪ್ಗೆ ಆತ್ಮೀಯರಾಗಿರುವ ಸಂಗೀತ, ‘ಡ್ರೋನ್ ಪ್ರತಾಪ್ ಖಂಡಿತವಾಗಿ ಯಾರನ್ನೂ ಕೆಟ್ಟ ದೃಷ್ಟಿಯಿಂದ ನೋಡಿಲ್ಲ, ನೋಡುವ ವ್ಯಕ್ತಿಯೂ ಅಲ್ಲ ಎಂದರು. ಅದಕ್ಕೆ ಉದಾಹರಣೆಯನ್ನೂ ನೀಡಿದ ಸಂಗೀತಾ, ನಾನು ವಾಶ್ರೂಂನಿಂದ ಹೊರಗೆ ಬಂದಾಗ ಅವರು ಅಲ್ಲಿದ್ದರೆ ಹೊರಗೆ ಹೋಗಿಬಿಡುತ್ತಾರೆ. ಅಥವಾ ಡ್ರೆಸ್ ಕುರಿತಾಗಿ ತನಿಷಾ ಅಥವಾ ಇನ್ಯಾವುದೇ ಮಹಿಳೆಯರ ಸಹಾಯ ಕೇಳಿದಾಗಲೂ ಸಹ ಡ್ರೋನ್ ಅಲ್ಲಿಂದ ಹೊರಗೆ ಹೋಗಿಬಿಡುತ್ತಾರೆ. ಪಕ್ಕಾ ಜೆಂಟಲ್ಮ್ಯಾನ್ ರೀತಿ ವರ್ತಿಸುತ್ತಾರೆ ಎಂದು ಸಂಗೀತಾ ಅವರು ಡ್ರೋನ್ ಪ್ರತಾಪ್ ಪರ ವಹಿಸಿ ಮಾತನಾಡಿದರು.
ಅದಲ್ಲದೆ ಡ್ರೋನ್ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಹೊಂದಿರುವ ನಮ್ರತಾ ಸಹ, ಡ್ರೋನ್ ಪ್ರತಾಪ್ ಬಹಳ ಕನ್ಫ್ಯೂಷನ್ನಿಂದ ನೋಡುತ್ತಿರುತ್ತಾರೆ. ಆದರೆ ಅವರು ಕೆಟ್ಟದಾಗಿ ಅಂತೂ ನೋಡಲ್ಲ ಎಂದಿದ್ದರು. ಈ ಮೂಲಕ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್ ಮೇಲೆ ಇದ್ದ ಕೆಟ್ಟಾಭಿಪ್ರಾಯನ್ನು ದೂರ ಮಾಡಿದರು.