
ಅಭಿಮಾನಿಯ ಐಷಾರಾಮಿ ಕಾರಿಗೆ ಆಟೋಗ್ರಾಫ್ ಹಾಕಿದ ಡಿಂಪಲ್ ಕ್ವೀನ್ – ಏನಿದು ಘಟನೆ? ರಚಿತಾ ರಾಮ್ ಮನೆ ಮುಂದೆ ಏನಾಯ್ತು?
- ಮನರಂಜನೆ
- August 30, 2023
- No Comment
- 43
ನ್ಯೂಸ್ ಆ್ಯರೋ : ಸ್ಟಾರ್ ನಟರ ಹಾಗೇ ಇದೀಗ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್‌ಗೆ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟಾರ್ ನಟರ ಮನೆ ಮುಂದೆ ನಿಲ್ಲುವ ಹಾಗೇ ರಚಿತಾ ರಾಮ್ ಮನೆಮುಂದೆ ವೀಕೆಂಡ್ ದಿವಸ ನೂರಾರು ಮಂದಿ ಅವರ ದರ್ಶನಕ್ಕೆ ಕಾಯುತ್ತಿರುತ್ತಾರೆ. ಅದಲ್ಲದೆ ತಮ್ಮ ಹೊಸ ವಾಹನಗಳಿಗೆ ನಟಿಯ ಆಟೋಗ್ರಾಫ್ ಸಿಗಬೇಕೆಂದು ಬೆಳ್ಳಂಬೆಳಗ್ಗೆನೇ ಕಾಯುವವರ ಸಂಖ್ಯೆ ಹೆಚ್ಚಳವಾಗಿದೆ.
ಈ ವಾರವೂ ಅಭಿಮಾನಿಯೊಬ್ಬ ತಮ್ಮ ಬಿಳಿ ಬಣ್ಣದ ಐಷಾರಾಮಿ ಕಾರನ್ನು ತಂದು ರಚ್ಚು ಮನೆ ಮುಂದೆ ನಿಲ್ಲಿಸಿ ಗಂಟೆಗಟ್ಟಲೆ ಕಾದಿದ್ದಾನೆ. ಅಭಿಮಾನಿ ಪ್ರೀತಿಗೆ ರಚಿತಾ ರಾಮ್ ಅವರು ಕಾರಿನ ಬಾನೆಟ್ ಮೇಲೆ ಹಾಗೂ ಕಾರಿನ ಡ್ಯಾಷ್‌ಬೋರ್ಡ್ ಮೇಲೆ ತಮ್ಮ ಆಟೋಗ್ರಾಫ್ ಹಾಕಿದ್ದಾರೆ. ವಾರ ವಾರವೂ ಅವರ ರಾಜರಾಜೇಶ್ವರಿ ಮನೆ ಮುಂದೆ ಬರುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗೆ ಅಭಿಮಾನಿಗಳು ತಮ್ಮ ಹೊಸ ಕಾರು, ಬೈಕ್ ಅಥವಾ ಆಟೋ ಮೇಲೆ ರಚ್ಚು ಫೋಟೋ ಹಾಕಿಸಿ ತಪ್ಪದೆ ಆಟೋಗ್ರಾಫ್ ಪಡೆಯುತ್ತಾರೆ.


ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಹಾಗೂ ನೈಜ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಸದ್ಯ ಕೈ ತುಂಬಾ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಚಿತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್‌ನಲ್ಲೂ ಜಡ್ಜ್ ಆಗಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ಗಳ ಮನೆ ಮುಂದೆ ಹೀಗೆ ಜನರು ಸಾಲು ಸಾಲಾಗಿ ನಿಲ್ಲುತ್ತಾರೆ. ಇದೇ ಮೊದಲು ನಾಯಕಿ ಮನೆ ಮುಂದೆ ಜನರು ಬರುತ್ತಿರುವುದು. ಹೀಗಾಗಿ ರಚಿತಾ ರಾಮ್‌ನ ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ.