ವಿಮಾನದಲ್ಲಿ ಪಯಣಿಸುವ ಎಲ್ಲಾ ಪ್ರಯಾಣಿಕರಿಗೆ ಪ್ಯಾರಚೂಟ್ ನೀಡುವುದಿಲ್ಲ..! – ಇದ್ಯಾಕೆ ಇಂಥಾ ರೂಲ್ಸ್ ಗೊತ್ತಾ?

ವಿಮಾನದಲ್ಲಿ ಪಯಣಿಸುವ ಎಲ್ಲಾ ಪ್ರಯಾಣಿಕರಿಗೆ ಪ್ಯಾರಚೂಟ್ ನೀಡುವುದಿಲ್ಲ..! – ಇದ್ಯಾಕೆ ಇಂಥಾ ರೂಲ್ಸ್ ಗೊತ್ತಾ?

ನ್ಯೂಸ್ ಆ್ಯರೋ‌ : ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ವಿಮಾನ ಯಾನ ಕಂಪೆನಿಗಳು ಶ್ರಮಿಸುತ್ತವೆ. ಟಿಕೆಟ್ ದರ ತುಸು ದುಬಾರಿಯಾದರೂ ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪ್ಯಾರಚೂಟ್ ಯಾಕಿಲ್ಲ?

ವಿಮಾನ ಯಾನ ಸಂದರ್ಭದಲ್ಲಿ ಆಕಾಶ ಮಾರ್ಗದಲ್ಲಿ ಏನಾದರೂ ಅಪಾಯ ಸಂಭವಿಸಿದರೆ ಪಾರಾಗಲು ಇರುವ ಏಕೈಕ ಮಾರ್ಗ ಪ್ಯಾರಚೂಟ್ ಎಂಬುದು ಬಹುತೇಕರ ನಂಬಿಕೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇದನ್ನು ಬೆನ್ನಿಗೆ ಕಟ್ಟಿಕೊಂಡು ಜಿಗಿದು ಪಾರಾಗಬಹುದು. ಆದರೆ ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಕರಿಗೆ ಪ್ಯಾರಚೂಟ್ ನೀಡುವುದಿಲ್ಲ. ಯಾಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಪ್ಯಾರಚೂಟ್ ಅನ್ನು ಸುಲಭವಾಗಿ ಬಳಸಲು ಆಗುವುದಿಲ್ಲ. ಅದರ ಬಳಕೆಗೆ ತರಬೇತಿ ಅಗತ್ಯ. ಎಲ್ಲಾ ಪ್ರಯಾಣಿಕರಿಗೆ ಈ ಕೌಶಲ್ಯ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಸಾಮಾನ್ಯವಾಗಿ ಸ್ಕೈ ಡೈವಿಂಗ್ ಮಾಡುವವರಿಗೆ 4ರಿಂದ 5 ಗಂಟೆಗಳ ತರಬೇತಿ ಅಗತ್ಯವಿದೆ. ಇದು 15,000ರಿಂದ 16,000 ಅಡಿ ಎತ್ತರದಿಂದ ಜಿಗಿಯುವ ಮಾತಾಯ್ತು. ಇನ್ನು ವಾಣಿಜ್ಯ ವಿಮಾನಗಳು 35,000 ಅಡಿಗಿಂತ ಎತ್ತರದಲ್ಲಿ ಹಾರಾಡುತ್ತವೆ.

ಸುಮಾರು 18,000 ಅಡಿ ಎತ್ತರದಲ್ಲಿ ಪ್ಯಾರಚೂಟ್ ಬಳಕೆ ಅಪಾಯಕಾರಿ ಎಂದೇ ಪರಿಗಣಿಸಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ವಾಣಿಜ್ಯ ವಿಮಾನಗಳು ವೇಗದಲ್ಲಿ ಸಾಗುವುದರಿಂದ ಪ್ಯಾರಚೂಟ್ ಮೂಲಕ ಜಿಗಿಯಲು ಸಾಧ್ಯವಿಲ್ಲ. ಬಹುತೇಕ ಎಲ್ಲಾ ವಿಮಾನಗಳು ಪ್ರತಿ ಗಂಟೆಗೆ 500 ಮೈಲಿ ವೇಗದಲ್ಲಿ ಸಂಚರಿಸುತ್ತವೆ.

ಮಾತ್ರವಲ್ಲ ಪ್ಯಾರಚೂಟ್ ಕಿಟ್ ಗಳು ದುಬಾರಿ ಮತ್ತು ಭಾರದಿಂದ ಕೂಡಿವೆ. ಒಂದು ವೇಳೆ ಪ್ರತಿ ಪ್ರಯಾಣಿಕನಿಗೂ ಪ್ಯಾರಚೂಟ್ ಕಿಟ್ ಕೊಟ್ಟರೆ ವಿಮಾನದ ತೂಕ 3 ಸಾವಿರ ಕೆ.ಜಿ.ಗೆ ಏರುತ್ತದೆ. ಇದಕ್ಕಾಗಿ ದೊಡ್ಡ ವಿಮಾನ ಬಳಸಬೇಕಾಗಬಹುದು ಮತ್ತು ಟಿಕೆಟ್ ದರ ಇನ್ನಷ್ಟು ದುಬಾರಿಯಾಗಬಹುದು..!

Related post

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…
17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ ನಿರೂಪಕಿ ಅನುಪಮಾ ಗೌಡ!

17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ…

ನ್ಯೂಸ್ ಆರೋ: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ ಬೆಂಜ್ ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ.…

Leave a Reply

Your email address will not be published. Required fields are marked *