
ಬಹುಕಾಲದ ಗೆಳತಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಅರ್ಮಾನ್ ಮಲಿಕ್ – ಖ್ಯಾತ ಗಾಯಕನ ಮನಕದ್ದ ಚೆಲುವೆ ಯಾರು ಗೊತ್ತಾ?
- ಮನರಂಜನೆ
- August 30, 2023
- No Comment
- 56
ನ್ಯೂಸ್ ಆ್ಯರೋ : ಜನಪ್ರಿಯ ಸಂಗೀತ ನಿರ್ದೇಶಕ, ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ ಅವರು ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್‌ಗೆ ಪ್ರೇಮ ನಿವೇದನೆ ಮಾಡಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅರ್ಮನ್ ಅವರು ಪ್ರಿಯತಮೆಗೆ ಮಂಡಿಯೂರಿ ಪ್ರೇಮನಿವೇದನೆ ಮಾಡಿಕೊಂಡಿರುವ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಕೆಯನ್ನು ಮಾಡುತ್ತಿದ್ದಾರೆ.
ಅರ್ಮಾನ್ ಮಲಿಕ್ ಎಂಗೇಜ್ ಆದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗೆಳತಿ ಆಶ್ನಾ ಶ್ರಾಫ್‌ಗೆ ಪ್ರಪೋಸ್ ಮಾಡಿರೋ ಫೋಟೊಗಳ ಹಂಚಿಕೊಂಡು “ನಮ್ಮಿಬ್ಬರ ಶಾಶ್ವತ ಬದುಕು ಈಗಷ್ಟೇ ಶುರುವಾಗಿದೆ ” ಎಂಬ ಅರ್ಥದಲ್ಲಿ ಅರ್ಮಾನ್ ಮಲಿಕ್ ಪೋಸ್ಟ್ ಮಾಡಿದ್ದಾರೆ. ಆಶ್ನಾ ಕೂಡ ಈ ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುಂದರವಾಗಿ ಅಲಂಕರಿಸಿದ ಜಾಗದಲ್ಲಿ ಅರ್ಮಾನ್ ಅವರು ಮಂಡಿಯೂರಿ ಆಶ್ನಾ ಅವರ ಕೈಗೆ ರಿಂಗ್ ಅನ್ನು ತೊಡಿಸಿದ್ದಾರೆ. ಈ ಫೋಟೋಗೆ ನಮ್ಮ ದೀರ್ಘ ಪ್ರಯಾಣ ಈಗ ಆರಂಭ ಎಂಬ ಅಡಿಬರಹವನ್ನು ಕೊಟ್ಟಿದ್ದಾರೆ. ಆಶ್ನಾ ಅವರು ಬಿಳಿಯ ಬಣ್ಣದ ಫ್ರಾಕ್‌ನಲ್ಲಿ ಮಿಂಚಿದರೆ, ಅರ್ಮಾನ್ ಅವರು ಬೀಜ್ ಪ್ಯಾಂಟ್ ಸೂಟ್‌ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆಯೂ ಈ ಜೋಡಿ ಒಟ್ಟಾಗಿ ಪಾರ್ಟಿ, ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ತಮ್ಮ ಪ್ರೀತಿಯನ್ನು ಫೋಟೋ ಹಂಚಿಕೊಳ್ಳುವ ಮೂಲಕ ಜಗತ್ತಿಗೆ ಅಧಿಕೃತ ಪಡಿಸಿದ್ದಾರೆ. ಮದುವೆಯೂ ಶೀಘ್ರದಲ್ಲಿ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.