Rocking Star Yash : ಮಲೇಷ್ಯಾದಲ್ಲೂ ‘ರಾಕಿ ಬಾಯ್’ ಹವಾ – ರಾಕಿಬಾಯ್ ಯಶ್ ಹೆಸರಿನ ಗೋಲ್ಡ್ ಕಾಯಿನ್, ಗೋಲ್ಡ್ ಬಿಸ್ಕೆಟ್ ಬಿಡುಗಡೆ

Rocking Star Yash : ಮಲೇಷ್ಯಾದಲ್ಲೂ ‘ರಾಕಿ ಬಾಯ್’ ಹವಾ – ರಾಕಿಬಾಯ್ ಯಶ್ ಹೆಸರಿನ ಗೋಲ್ಡ್ ಕಾಯಿನ್, ಗೋಲ್ಡ್ ಬಿಸ್ಕೆಟ್ ಬಿಡುಗಡೆ

ನ್ಯೂಸ್ ಆ್ಯರೋ : ರಾಕಿಂಗ್ ಸ್ಟಾರ್ ಯಶ್ ತಮ್ಮ ಅಮೋಘ ಅಭಿನಯದಿಂದ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಕಿ ಭಾಯ್ ದಾಡಿ ಲುಕ್, ಡಿಫ್ರೆಂಟ್ ಹೇರ್ ಸ್ಟೈಲ್ಗೆ ಅಭಿಮಾನಿಗಳು ಸೇರಿದಂತೆ ಸಿನಿ ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ.

ಅಲ್ಲದೇ ಕೆಜಿಎಫ್ ಸಿನಿಮಾದ ನಂತರ ಯಶ್ ಅಭಿಮಾನಿಗಳು ರಾಜ್ಯ, ದೇಶದ ಗಡಿಯನ್ನೂ ದಾಟಿದ್ದಾರೆ. ಅನೇಕ ದೇಶಗಳಲ್ಲಿ ಯಶ್ ಅಭಿಮಾನಿಗಳ ಸಂಘಗಳಿವೆ. ಆಯಾ ರಾಜ್ಯಕ್ಕೆ ಯಶ್ ಭೇಟಿ ನೀಡಿದಾಗೆಲ್ಲ ಅವರ ಅಭಿಮಾನಿಗಳಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡುತ್ತಾರೆ. ಅಲ್ಲದೇ, ಮನೆ ಮುಂದೆ ಬಂದ ಅಭಿಮಾನಿಗಳಿಗೂ ಟೈಮ್ ನೀಡುತ್ತಾರೆ. ಇದೀಗ ರಾಕಿ ಬಾಯ್ ಮಲೇಷ್ಯಾಕ್ಕೂ ತೆರಳಿ ತಮ್ಮ ಫ್ಯಾನ್ ಗಳನ್ನು ಮೀಟ್ ಮಾಡಿ ಬಂದಿದ್ದು, ಜೊತೆಗೆ ಒಂದು ಅದ್ಬುತ ಘಳಿಗೆಗೂ ಸಾಕ್ಷಿಯಾಗಿದ್ದಾರೆ.

ರಾಕಿಭಾಯ್ ಯಶ್ ಮೊನ್ನೆ ಮಲೇಷ್ಯಾಗೆ ಹಾರಿದ್ದರು. ನಾಲ್ಕೈದು ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಅವರು, ಮಲೇಷ್ಯಾದಲ್ಲಿ ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಮಲೇಷ್ಯಾದಲ್ಲಿ ವಾಸವಿರುವ ಅವರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಅವರಿಗೆ ನೀಡಲಾದ ಗಿಫ್ಟ್ ಸಾಕಷ್ಟು ವೈರಲ್ ಕೂಡ ಆಗಿದೆ.

ಹೌದು.. ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾಗೆ ಪ್ರವಾಸ ಬೆಳೆಸಿದ್ದರು. ಅಲ್ಲಿ ಬಂಗಾರದ ಅಂಗಡಿಯ ಉದ್ಘಾಟನೆಯನ್ನು ಅವರು ಮಾಡಿದ್ದರು. ಅದೇ ಅಂಗಡಿಯವರು ರಾಕಿಭಾಯ್ ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಮತ್ತು ಬಿಸ್ಕೆಟ್ ಬಿಡುಗಡೆ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಅವರೇ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದರು ಯಶ್. ಆ ವಿಡಿಯೋ ಕೂಡ ವೈರಲ್ ಆಗಿದೆ.

ಇನ್ನು ಮಲೇಷ್ಯಾಗೆ ಹೋಗಿರುವ ಸಂದರ್ಭದಲ್ಲೇ ಯಶ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ ನೀಡಿದ್ದಾರೆ. ಮಲೇಷ್ಯಾದಲ್ಲಿ ಹೊಸ ಸಿನಿಮಾದ ಕುರಿತು ಮಾತನಾಡಿರುವ ಯಶ್, ‘ದೊಡ್ಡ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳುತ್ತಿಲ್ಲ, ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದೊಂದು ಮಾಸ್ ಸಿನಿಮಾವಾಗಿರಲಿದೆ. ಸದ್ಯದಲ್ಲೇ ಮಾಹಿತಿ ನೀಡುತ್ತೇನೆ’ ಎಂದು ಮಾತನಾಡಿದ್ದಾರೆ.

Related post

26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

ನ್ಯೂಸ್ ಆರೋ: ಕಾಣೆಯಾದ ವ್ಯಕ್ತಿ ನೆರೆಮನೆಯಲ್ಲಿ ಬಂಧನದಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ಅಲ್ಜೀರಿಯಾದ ನ್ಯಾಯಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಹೌದು, 26 ವರ್ಷಗಳಿಂದ ನಾಪತ್ತೆಯಾಗಿದ್ದ ಅಲ್ಜೀರಿಯಾದ ವ್ಯಕ್ತಿಯೊಬ್ಬ,…
ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್‌..!

ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ನ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್; ಸಾಮಾಜಿಕ…

ನ್ಯೂಸ್ ಆರೋ:  ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ವೈಯಕ್ತಿಕ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಲವ್​, ಮದುವೆ, ಬ್ರೇಕಪ್ ಅಂತ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್​, ಬಾಲಿವುಡ್‌ನ ಡ್ರಾಮಾ…
ಎಂಡೊಮೆಟ್ರಿಯೊಸಿಸ್ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ..!; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬೆಡ್​ ಮೇಲಿನ ವಿಡಿಯೋ

ಎಂಡೊಮೆಟ್ರಿಯೊಸಿಸ್ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ..!; ಸಾಮಾಜಿಕ…

ನ್ಯೂಸ್ ಆ್ಯರೋ :ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವುದು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇಂದು…

Leave a Reply

Your email address will not be published. Required fields are marked *