AI Anchor : ಸುದ್ದಿ ಚಾನೆಲ್ ನಿರೂಪಕಿ ಸೀಟ್ ನಲ್ಲಿ ಎಐ! – ಒಟಿವಿ ಚಾನೆಲ್ ನಲ್ಲಿ ಕೈಮಗ್ಗ ಸೀರೆಯುಟ್ಟು ನ್ಯೂಸ್ ಓದಿ ಆ್ಯಂಕರ್ ಗಳಿಗೆ ಭಯ ಹುಟ್ಟಿಸಿದ ಎಐ ಆ್ಯಂಕರ್ ಲಿಸಾ!

AI Anchor : ಸುದ್ದಿ ಚಾನೆಲ್ ನಿರೂಪಕಿ ಸೀಟ್ ನಲ್ಲಿ ಎಐ! – ಒಟಿವಿ ಚಾನೆಲ್ ನಲ್ಲಿ ಕೈಮಗ್ಗ ಸೀರೆಯುಟ್ಟು ನ್ಯೂಸ್ ಓದಿ ಆ್ಯಂಕರ್ ಗಳಿಗೆ ಭಯ ಹುಟ್ಟಿಸಿದ ಎಐ ಆ್ಯಂಕರ್ ಲಿಸಾ!

ನ್ಯೂಸ್‌ ಆ್ಯರೋ : ನ್ಯೂಸ್ ಚಾನೆಲ್ ಗಳಲ್ಲಿ ಸೂಟು, ಬೂಟು ತೊಟ್ಟ ಆ್ಯಂಕರ್ ಗಳು ಸುದ್ದಿ ಓದುವುದನ್ನು ನಾವು ಕಂಡಿರುತ್ತೇವೆ. ಆದರೆ ಇನ್ನು‌ ಮುಂದೆ ನಮ್ಮ ನಿಮ್ಮ ನೆಚ್ಚಿನ ಆ್ಯಂಕರ್ ಗಳ ಸ್ಥಾನವನ್ನು ಎಐ ತಂತ್ರಜ್ಞಾನ ಆಕ್ರಮಿಸಿಕೊಳ್ಳಲಿದೆ. ಇದೇ ಮೊದಲ‌ ಬಾರಿಗೆ‌ ಒಟಿವಿ ಎಂಬ ಒಡಿಸ್ಸಾದ ನ್ಯೂಸ್ ಚಾನೆಲ್ ರಾಜ್ಯದ ಮೊದಲ ವರ್ಚ್ಯುವಲ್ ನ್ಯೂಸ್ ಪ್ರೆಸೆಂಟರ್ ಪರಿಚಯಿಸಿದ್ದು, ಆಕೆಯ ಹೆಸರು ಲಿಸಾ. ಭಾನುವಾರವಷ್ಟೇ ಈಕೆಯನ್ನು ಪರಿಚಯಿಸಲಾಗಿದೆ‌. ಈಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೃಷ್ಟಿಯಾಗಿದ್ದು, ಆ್ಯಂಕರ್ ಗಳೆಲ್ಲರಲ್ಲಿ ಈಕೆ ಭಯ ಹುಟ್ಟಿಸಿದ್ದಾಳೆ. ಈಕೆಯ ಬಗೆಗಿನ ವರದಿ ಇಲ್ಲಿದೆ.

ಹೇಗಿದ್ದಾಳೆ ಗೊತ್ತಾ ಎಐ ಲಿಸಾ?

ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ನಿರೂಪಕಿಯರು ಅಂದರೆ ಯಾವುದೋ ರೋಬೋಟ್ ಗಳು ಎಂದುಕೊಂಡಿರಾ? ನಿಮ್ಮ‌ ಕಲ್ಪನೆ ತಪ್ಪು ಈ ನಿರೂಪಕಿ ಲಿಸಾ ನೋಡಲು ಸಾಮಾನ್ಯ ಯುವತಿಯರಂತೆಯೇ ಸುಂದರವಾಗಿದ್ದಾಳೆ. ಕೈಮಗ್ಗದ ಸೀರೆಯುಟ್ಟು ಇಂಗ್ಲಿಷ್ ಹಾಗೂ ಒಡಿಯಾ ಭಾಷೆಯಲ್ಲಿ ಸುದ್ದಿ ನಿರೂಪಿಸುತ್ತಾಳೆ. ಸದ್ಯ, ಈಕೆ ಒಡಿಶಾದ ಒಟಿವಿಯ ಡಿಜಿಟಲ್ ಫ್ಲಾರ್ಟ್ ಫಾರ್ಮ್ ನಲ್ಲಿ ನ್ಯೂಸ್ ವಾಚಿಸುತ್ತಾಳೆ.

ಈ ಬಗ್ಗೆ ಮಾತನಾಡಿರುವ ಒಟಿವಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಜಗಿ ಮಂಗತ್‌ ಪಾಂಡಾ ಅವರು, ‘ಒಡಿಸ್ಸಾದ ಮೊದಲ ಎಐ ನ್ಯೂಸ್‌ ಆಂಕರ್‌ ಮೂಲಕ ನಾವು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಪುನಾರವರ್ತಿತ ಕಾರ್ಯಗಳು ಮತ್ತು ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಮಗೆ ನೆರವು ನೀಡಲಿದೆ’ ಎಂದು ಸಂತಸ ವ್ಯಕ್ಪಡಿಸಿದ್ದಾರೆ‌.

ಮಾತು ಮುಂದುವರೆಸಿರುವ ಅವರು, ‘ಈ ಅದ್ಭುತ ತಂತ್ರಜ್ಞಾನವು ಮಾನವ ನಿರೂಪಕರಂತೆ ನಿರರ್ಗಳವಾಗಿ ಮಾತನಾಡುವುದು ಕಷ್ಟ. ಆದರೆ, ಗೂಗಲ್‌ ಅನುವಾದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡಬಲ್ಲರು. ಸುದ್ದಿಯನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಎಐಐ ಮತ್ತು ಎಎಲ್‌ಎಲ್‌ಎಂ ಶಕ್ತಿಯನ್ನು ಲಿಸಾ ಹೊಂದಿದ್ದಾಳೆ. ಅಲ್ಗಾರಿದಮ್‌ಗಳನ್ನು ವರ್ಚುವಲ್‌ ನಿರೂಪಕರ ಜತೆ ಸಂಯೋಜಿಸುವ ಮೂಲಕ ತಂತ್ರಜ್ಞಾನ ಮತ್ತು ಪತ್ರಿಕೋದ್ಯೋಮದ ಸಮ್ಮೀಳನವಾಗುವ ಗುರಿಯನ್ನು ಹೊಂದಿದ್ದಾರೆ” ಎಂದು ಅವರು ತಿಳಿಸಿದ್ದಾರೆ‌.

ಎಐ ಲಿಸಾ ಮೊದಲ ಆ್ಯಂಕರ್ ಅಲ್ಲ!

ಒಡಿಶಾದಲ್ಲಿ‌ ಲಿಸಾ ಎಂಬ ಎಐ ಆ್ಯಂಕರ್ ಇದೀಗ ಪರಿಚಯವಾಗಿದ್ದರೂ ಇದೇ ಮೊದಲೇನಲ್ಲ. ಮಾರ್ಚ್‌ ತಿಂಗಳಲ್ಲಿ ಇಂಡಿಯಾ ಟುಡೇಯ ಚೇರ್ಮನ್‌ ಕಾಲ್ಲಿ ಪುರೈ ಅವರು ಸನಾ ಹೆಸರಿನ ಮೊದಲ ನ್ಯೂಸ್‌ ಆಂಕರ್‌ ಳನ್ನು ಪರಿಚಯಿಸಿದ್ದರು. ಅಜ್‌ ತಕ್‌ ಟೀವಿಗೆ ಈಕೆ ಆಂಕರ್‌ ಆಗಿದ್ದಳು. ನ್ಯೂಸ್‌ ಬ್ರಾಡ್‌ಕಾಸ್ಟಿಂಗ್‌ ಕ್ಷೇತ್ರಕ್ಕೆ ಕಂಪ್ಯೂಟರ್‌ ಸೃಷ್ಟಿಸಿದ ಅವತಾರಗಳು ಆಗಮಿಸುವ ಕುರಿತು ಆ ಸಮಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಕುವೈತ್‌ ನ್ಯೂಸ್‌ನ ಟ್ವಿಟ್ಟರ್‌ ಹ್ಯಾಂಡಲ್‌ಗಾಗಿ ಫೆದಾ ಹೆಸರಿನ ಎಐ ಆಂಕರ್‌ ಪರಿಚಯಿಸಲಾಗಿತ್ತು. ಜೊತೆಗೆ ಚೀನಾ ದೇಶವೂ 2018ರಲ್ಲೇ ಇಂತಹದ್ದೊಂದು ಮಹತ್ವದ ಸಾಧನೆ ಮಾಡಿತ್ತು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *