500 ಕೋಟಿ ಹೂಡಿಕೆ ವಂಚನೆ; ಎಲ್ವಿಶ್, ಭಾರತಿ ಸಿಂಗ್ ಸೇರಿ ಐವರಿಗೆ ‘ಸಮನ್ಸ್’

YouTubers Elvish Yadav, Bharti Sin
Spread the love

ನ್ಯೂಸ್ ಆ್ಯರೋ: ಮೊಬೈಲ್ ಆಪ್ ಸಂಬಂಧಿತ ಸ್ಕ್ಯಾಮ್‌ನಲ್ಲಿ ನಡೆದ 500 ಕೋಟಿ ಹೂಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಖ್ಯಾತ ಮಹಿಳಾ ಕಾಮಿಡಿಯನ್ ಭಾರತಿ ಸಿಂಗ್, ಯೂಟ್ಯೂಬರ್ ಎಲ್ವಿಶ್ ಯಾದವ್ ಮತ್ತು ಇತರ ಮೂವರಿಗೆ ಸಮನ್ಸ್ ನೀಡಿದ್ದಾರೆ.

ಹಿಬಾಕ್ಸ್(HIBOX) ಎಂಬ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಹೂಡಿಕೆ ಮಾಡುವಂತೆ ಅನೇಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಯೂಟ್ಯೂಬರ್‌ಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಹಿಬಾಕ್ಸ್‌ ಬಗ್ಗೆ ಪ್ರಚಾರ ಮಾಡಿ ಜನರನ್ನು ಈ ಆಪ್‌ನಲ್ಲಿ ಹಣ ಹೂಡುವುದಕ್ಕೆ ಪ್ರೇರಣೆ ಮಾಡಿದ್ದಾರೆ ಎಂದು 500ಕ್ಕೂ ಹೆಚ್ಚು ದೂರುಗಳು ಪೊಲೀಸರಿಗೆ ಬಂದಿವೆ ಎಂದು ಅಧಿಕಾರಿ ಹೇಳಿದ್ದಾರೆ. ಈ ಹಿಬಾಕ್ಸ್ ಮೊಬೈಲ್ ಆಪ್ ಹಗರಣದ ಪ್ರಮುಖ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ 30 ವರ್ಷದ ಶಿವರಾಮ್ ಬಂಧಿತ ಆರೋಪಿ.

ಇತ್ತ ಪೊಲೀಸರಿಗೆ ಬಂದ ದೂರಿನ ಪ್ರಕಾರ, ಯೂಟ್ಯೂಬರ್‌ಗಳು ಹಾಗೂ ಸೋಶೀಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಸೌರವ್ ಜೊಶಿ, ಅಭಿಷೇಕ್ ಮಲ್ಹನ್‌, ಪುರವ್ ಜಾ, ಎಲ್ವೀಸ್ ಯಾದವ್, ಭಾರತಿ ಸಿಂಗ್, ಹರ್ಷ ಲಿಂಬಾಚಿಯಾ, ಲಕ್ಷ್ಯಾ ಚೌಧರಿ, ಆದರ್ಶ್‌ ಸಿಂಗ್‌, ಅಮಿತ್, ಹಾಗೂ ದಿಲ್ರಾಜ್ ಸಿಂಗ್‌ ರಾವತ್‌ ಅವರು ಈ ಹಿಬಾಕ್ಸ್‌ ಅಪ್ಲಿಕೇಷನ್ ಬಗ್ಗೆ ಪ್ರಚಾರ ಮಾಡಿ ಜನರಿಗೆ ಆ ಆಪ್‌ನಲ್ಲಿ ಹಣ ಹೂಡುವಂತೆ ಪ್ರೇರೆಪಿಸಿದ್ದಾರೆ. ಈ ಹಿಬಾಕ್ಸ್ ಒಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದು ಯೋಜನೆ ರೂಪಿಸಿ ಮಾಡಿದ ಹಗರಣದ ಭಾಗವಾಗಿದೆ ಎಂದು ಐಎಫ್‌ಎಸ್‌ಒದ ವಿಶೇಷ ಘಟಕದ ಉಪ ಪೊಲೀಸ್ ಆಯುಕ್ತ ಹೇಮಂತ್ ತಿವಾರಿ ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!