ಬಿಗ್ ಬಾಸ್ ಮನೆಯಿಂದ ಹೊರ ಬಂದ ಧರ್ಮ; ಅನುಷಾ ಜೊತೆಗಿನ ಮದುವೆ ಕುರಿತು ಫಸ್ಟ್ ರಿಯಾಕ್ಷನ್
ನ್ಯೂಸ್ ಆ್ಯರೋ: ‘ಬಿಗ್ ಬಾಸ್ ಕನ್ನಡ 11’ರ ಆಟದಿಂದ ಧರ್ಮ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಬಿಗ್ ಬಾಸ್ ಆಟ, ಅನುಷಾ ಒಡನಾಟ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಾಕ್‌ಲೇಟ್ ಹೀರೋ ಧರ್ಮ ರಿಯಾಕ್ಟ್ ಮಾಡಿದ್ದಾರೆ. ಅನುಷಾ ಕುಟುಂಬದಿಂದ ಮದುವೆ ಪ್ರಪೋಸಲ್ ಬಂದ್ರೆ ನಟನ ಉತ್ತರವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಫ್ರೆಂಡ್ಸ್ ಅನ್ನೋದ್ದಕ್ಕೆ ನಾವಿಬ್ಬರು ಉದಾಹರಣೆ. ನನ್ನ ಮತ್ತು ಅನುಷಾ ಸ್ನೇಹ ಚೆನ್ನಾಗಿತ್ತು. ಫ್ಯಾನ್ಸ್ ಹೇಳ್ತಿದ್ದಾರೆ ನಾವು ಲವರ್ಸ್ ಅಂತ ಆದರೆ ಹಾಗೇ ನಮ್ಮೀಬ್ಬರ ನಡುವೆ ಏನು ಇಲ್ಲ. ನಮ್ಮದು ನಿಷ್ಕಲ್ಮಶ ಸ್ನೇಹ, ನಮ್ಮೀಬ್ಬರಿಗೂ ಪ್ರೀತಿ ಅನ್ನೋ ಭಾವನೆ ಇಲ್ಲ. ಸ್ನೇಹಿತರು ಹೇಗಿರಬೇಕು ಹಾಗೇ ಇದ್ದೀವಿ. ಬಿಗ್ ಬಾಸ್‌ನಲ್ಲಿ ಎಮೋಷನಲ್ ಆಗಿ ಬೆಂಬಲ ಬೇಕು.
ಆ ರೀತಿಯಲ್ಲಿ ಅನುಷಾ ನನಗೆ ವಂಡಲ್‌ಫುಲ್ ಫ್ರೆಂಡ್ ನನಗೆ. ನೀವು ನಮ್ಮನ್ನ ಸಿನಿಮಾ ಮೂಲಕ ಜೊತೆಯಾಗಿ ನೋಡಬಹುದು. ಸಿನಿಮಾದಲ್ಲಿ ಕಪಲ್ ಆಗಿದ್ದೀವಿ. ಅಲ್ಲಿ ನೋಡಿ ನೀವು ನಮ್ಮನ್ನು ಬೆಂಬಲಿಸಬಹುದು ಎಂದಿದ್ದಾರೆ.
ಅನುಷಾ ಕಡೆಯಿಂದ ಮದುವೆ ಪ್ರಪೋಸಲ್ ಬರಲ್ಲ. ಅವರ ಮನೆ ಕಡೆಯಿಂದಲೂ ಮದುವೆ ಸಂಬಂಧ ಬರಲ್ಲ. ಏನಾದರೂ ಮದುವೆ ಸಂಬಂಧ ಬಂದರೆ ಕೂಡ ಅದು ಆಗಲ್ಲ. ನಮ್ಮೀಬ್ಬರ ನಡುವೆ ಫ್ರೆಂಡ್‌ಶಿಪ್ ಟ್ಯಾಗ್ ತುಂಬಾ ಚೆನ್ನಾಗಿದೆ. ಅದು ಫ್ರೆಂಡ್ಸ್ ಆಗಿಯೇ ಉಳಿದುಕೊಂಡರೆ ಚೆನ್ನಾಗಿರುತ್ತೆ ಅನಿಸುತ್ತದೆ. ಮದುವೆ ರೂಪದಲ್ಲಿ ಕನೆಕ್ಟ್ ಆಗಲ್ಲ ಎಂದು ಧರ್ಮ ಮಾತನಾಡಿದ್ದಾರೆ.
Leave a Comment