ನಷ್ಟ ಸರಿದೂಗಿಸಲು ಉದ್ಯೋಗ ಕಡಿತಕ್ಕೆ ಬೈಜೂಸ್ ಸಿದ್ಧತೆ – ಬೀದಿಗೆ ಬೀಳಲಿದ್ದಾರೆ ಐದು ಸಾವಿರ ಸಿಬ್ಬಂದಿ…!!

ನಷ್ಟ ಸರಿದೂಗಿಸಲು ಉದ್ಯೋಗ ಕಡಿತಕ್ಕೆ ಬೈಜೂಸ್ ಸಿದ್ಧತೆ – ಬೀದಿಗೆ ಬೀಳಲಿದ್ದಾರೆ ಐದು ಸಾವಿರ ಸಿಬ್ಬಂದಿ…!!

ನ್ಯೂಸ್ ಆ್ಯರೋ : ಕೋವಿಡ್ ಸಾಂಕ್ರಾಮಿಕದ ಬಳಿಕ ಉದ್ಯೋಗ ಕಡಿತದ ಭೀತಿ ಎಲ್ಲೆಡೆಯೂ ಇದೆ. ಈಗಾಗಲೇ ಸುಪ್ರಸಿದ್ದ ಕಂಪೆನಿಗಳಲ್ಲಿ ಇದ್ದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಭಾರತದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಎಡ್ಟೆಕ್ ನ ಬೈಜುಸ್ ನಲ್ಲಿ 4 ರಿಂದ 5 ಸಾವಿರ ಉದ್ಯೋಗ ಕಡಿತವಾಗಲಿದೆ ಎನ್ನಲಾಗಿದೆ.

ಬೈಜುಸ್ ನ ನ್ಯೂ ಇಂಡಿಯಾ ಸಿಇಒ ಅರ್ಜುನ್ ಮೋಹನ್ ಅವರು ಬೃಹತ್ ಪುನರ್ ರಚನೆ ಕಾರ್ಯ ಪ್ರಾರಂಭಿಸಿದ್ದು, ಥಿಂಕ್ ಆಂಡ್ ಲರ್ನ್ ಪ್ರೈವೆಟ್ ಲಿಮಿಟೆಡ್ ನ ಭಾರತದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ದೀರ್ಘ ಕಾಲದಿಂದ ಬೈಜು ನಲ್ಲಿ ಕೆಲಸ ಮಾಡುತ್ತಿದ್ದ ಅನುಭವಿಯಾಗಿರುವ ಅರ್ಜುನ್ ತಮ್ಮ ನಿರ್ಧಾರವನ್ನು ಹಿರಿಯ ನಾಯಕರಿಗೆ ತಿಳಿಸಿದ್ದಾರೆ. ಉದ್ಯೋಗ ಕಡಿತವು ಮಾರಾಟ, ಮಾರುಕಟ್ಟೆ ಮತ್ತು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಎಡ್ಟೆಕ್ ಈಗಾಗಲೇ ಕಚೇರಿ ಸ್ಥಳವನ್ನು ಬಿಟ್ಟುಕೊಟ್ಟಿದೆ. ತನ್ನ ಅಂಗಸಂಸ್ಥೆಗಳ ಮಾರಾಟಕ್ಕೆ ಪ್ರಯತ್ನಿಸುತ್ತಿದೆ. ಹೊರಗಿನಿಂದ ಧನ ಸಹಾಯಕ್ಕೆ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಈ ಹಿಂದೆಯೂ ಒಮ್ಮೆ ಅನೇಕ ಬಾರಿ ಉದ್ಯೋಗ ಕಡಿತವನ್ನು ಮಾಡಿತ್ತು.

ಬೈಜುಸ್ 1.2 ಬಿಲಿಯನ್ ಡಾಲರ್ ಸಾಲ ಹೊಂದಿದ್ದು, ಮುಂದಿನ ಆರು ತಿಂಗಳಲ್ಲಿ ಇದನ್ನು ಮರುಪಾವತಿಸುವ ಭರವಸೆಯನ್ನು ಅದು ಸಾಲ ನೀಡಿದವರಿಗೆ ನೀಡಿದೆ. ಇದಕ್ಕಾಗಿ ಮುಂದಿನ ಮೂರು ತಿಂಗಳಲ್ಲಿ 300 ಮಿಲಿಯನ್ ಡಾಲರ್ ಮುಂಗಡವಾಗಿ ಪಾವತಿಸಬೇಕಿದೆ.

ಇದಕ್ಕಾಗಿ ಅದು ತನ್ನ ಗ್ರೇಟ್ ಲರ್ನಿಂಗ್ ಮತ್ತು ಯುಎಸ್ ಮೂಲದ ಎಪಿಕ್ ಅನ್ನು ಮಾರಾಟ ಮಾಡುವ ಚಿಂತನೆ ನಡೆಸುತ್ತಿದೆ.

ಸುಧಾರಿತ ಮತ್ತು ಸುಸ್ಥಿರ ಕಾರ್ಯಚರಣೆಗಾಗಿ ಅರ್ಜುನ್ ಮೋಹನ್ ಅವರು ಮುಂದಿನ ಕೆಲವು ವಾರಗಳಲ್ಲಿ ಉದ್ಯೋಗ ಕಡಿತದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ. ಉತ್ತಮ ನಗದು ಹರಿವಿನ ನಿರ್ವಹಣೆಗೆ ಪುನರ್ ರಚನೆಯ ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಬೈಜುಸ್ ನ ವಕ್ತಾರರು ತಿಳಿಸಿದ್ದಾರೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *