ನಿರ್ದೇಶಕನ ಮೇಲೆ ನಟನ ಗುಂಡಿನ ದಾಳಿ ಕೇಸ್; ಖಾಕಿ ಮುಂದೆ ಅಸಲಿ ಸತ್ಯ ಬಿಚ್ಚಿಟ್ಟ ತಾಂಡವ್ ರಾಮ್
ನ್ಯೂಸ್ ಆ್ಯರೋ: ನಿರ್ದೇಶಕನ ಮೇಲೆ ನಟ ತಾಂಡವ್ ರಾಮ್ ಫೈರಿಂಗ್ ಮಾಡಲು ಕಾರಣವೇನು? ಎಂದು ಚಂದ್ರಲೇಔಟ್ ಪೊಲೀಸ್ರ ಮುಂದೆ ಬಿಚ್ಚಿಟ್ಟಿದ್ದಾರೆ. ಒಂದು ಕಡೆ ಎರಡು ವರ್ಷವಾದ್ರೂ ಚಿತ್ರಕ್ಕೆ ನಾಯಕಿ ಆಗಿಲ್ಲ. ಇನ್ನೊಂದೆಡೆ ಇವರಿಂದ ನನ್ನ ಸಿನಿ ಕರಿಯರ್ ಹಾಳಾಗ್ತಿದ್ಯಾ ಎಂಬ ಭಯ ಶುರುವಾಗಿತ್ತು. ಹಾಗಾಗಿ ಶೂಟ್ ಮಾಡಿದೆ ಎಂದಿದ್ದಾರೆ.
ಎರಡು ವರ್ಷವಾದ್ರೂ “ದೇವನಾಂಪ್ರಿಯ” ಸಿನಿಮಾ ನಾಯಕ ನಟಿ ಆಯ್ಕೆಯಾಗಿರ್ಲಿಲ್ಲ. ಇದಕ್ಕೆ ನಟ ತಾಂಡವ್ ರಾಮ್ ಕೋಪಗೊಂಡಿದ್ದ. ಅದಷ್ಟೇ ಅಲ್ಲದೇ ಸಿನಿಮಾ ಕರಿಯರ್ ಹಾಳಾಗ್ತಿದ್ಯಾ ಅನ್ನೋ ಭಯ ಶುರುವಾಗಿತ್ತು. ಹೀಗಾಗಿ ನಿರ್ದೇಶಕ ಭರತ್ ಅವರನ್ನು ಹೆದರಿಸಲು ಆವೇಶದಲ್ಲಿ ಗುಂಡು ಹಾರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
“ಭರತ್ ಸುಮಾರು 3 ವರ್ಷಗಳಿಂದ ನನಗೆ ಪರಿಚಯ. ಮೊದಲಿಗೆ ನಮ್ಮ ಸಿನಿಮಾಗೆ ಯಾರು ನಿರ್ಮಾಪಕರು ಸಿಕ್ಕಿರಲಿಲ್ಲ. ಬಳಿಕ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಮಾಡೋದಾಗಿ ಬಂದರು. ಶೂಟಿಂಗ್ ಆರಂಭ ಆಯ್ತು. ಆದ್ರೆ 30ರಷ್ಟು ಸಿನಿಮಾ ಶೂಟ್ ಆಗಿಲ್ಲ. ಜೊತೆಗೆ ಎರಡು ವರ್ಷವಾದ್ರೂ ನಾಯಕ ನಟಿಯನ್ನ ಆಯ್ಕೆ ಮಾಡಿಲ್ಲ. ನಿರ್ದೇಶಕನ ನಿರ್ಲಕ್ಷ್ಯತನ ಕಂಡು ಚಿತ್ರತಂಡವೇ ಬೇಸತ್ತು ಹೋಗಿತ್ತು. ಜೊತೆಗೆ ಸಿನಿಮಾ ತಂತ್ರಜ್ಞರಿಂದ ಭರತ್ ಕಮಿಷನ್ ಪಡೆಯುತ್ತಿದ್ದ. ಭರತ್ನ ಹೆದರಿಸಲು ಆವೇಶದಲ್ಲಿ ಸೀಲಿಂಗ್ ಕಡೆ ಗುಂಡು ಹಾರಿಸಿದೆ ಎಂದರು.
ಇದರ ಹಿಂದೆ ಸಾಯಿಸೋ ಉದ್ದೇಶ ನಂಗೆ ಇರಲಿಲ್ಲ. ಬರೀ ಹೆದರಿಸಲು ಸೀಲಿಂಗ್ ಕಡೆ ಗುಂಡು ಹಾರಿಸಿದ್ದೆ ಎಂದು ಖಾಕಿ ಮುಂದೆ ನಟ ತಾಂಡವ ರಾಮ್ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ನಿರ್ದೇಶಕ ಹಾಗೂ ನಟ ಹೇಳಿಕೆ ಪಡೆದಿರೋ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
Leave a Comment